ಬೆಂಗಳೂರು: ಕಳೆದ ಒಂದೂವರೆ ತಿಂಗಳಿಂದ ಮೈತ್ರಿ ಸರ್ಕಾರವು  ಹಲವು ರೀತಿಯ ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಗಿದೆ.ಅದೆಲ್ಲದರ ನಡುವೆ ಸರ್ಕಾರ ಸುಭದ್ರವಾಗಿದೆ ಎನ್ನುತ್ತಲೇ ತಮ್ಮ ಬಂಡಿಯನ್ನು ನಡೆಸುವತ್ತ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಮಗ್ನರಾಗಿದ್ದಾರೆ.ಈಗ ಇಲ್ಲಿಯವರೆಗೂ ನಡೆದ ಎಲ್ಲ ಬೆಳವಣಿಗೆಗಳಿಗೆ ಈ ವಿಧಾನಸಭಾ ಅಧಿವೇಶನದಲ್ಲಿ ತೆರೆ ಬಿಳುತ್ತೋ ಇಲ್ಲವೋ ಎನ್ನುವ ವಿಚಾರವಾಗಿ ನಾವು ಕಾದು ನೋಡಬೇಕಾಗಿದೆ.


COMMERCIAL BREAK
SCROLL TO CONTINUE READING

ಈಗಾಗಲೇ ಕಾಂಗ್ರೆಸ್ ಪಕ್ಷವು ತನ್ನ ಎಲ್ಲ ಶಾಸಕರಿಗೆ ವಿಪ್ ನ್ನು ಜಾರಿ ಮಾಡಿದೆ.ಇನ್ನೊಂದೆಡೆಗೆ ಸಿಎಂ ಕುಮಾರಸ್ವಾಮಿ ಬಜೆಟ್ ನ ತಯಾರಿ ನಡೆಸುವತ್ತ ಚಿಂತನೆ ನಡೆಸಿದ್ದಾರೆ.ಇತ್ತ ಬಿಜೆಪಿ ಮಾತ್ರ ಇನ್ನು ಕೂಡ ಶಾಸಕರಿಗೆ ಗಾಳ ಉದುರಿಸುವ ಕಾರ್ಯವನ್ನು ಮಾತ್ರ ನಿಲ್ಲಿಸಿಲ್ಲ ಅದು ನಿರಂತರವಾಗಿ ಸರ್ಕಾರಕ್ಕೆ ಆಪರೇಶನ್ ಕಮಲ ಎನ್ನುವ ಭೂತದೊಂದಿಗೆ ಬೆನ್ನಿಗೆ ಬಿದ್ದಿದೆ.ಒಂದು ವೇಳೆ ಈ ಅಧಿವೇಶನದಲ್ಲಿ ಕಾಂಗ್ರೆಸ್ ಕೆಲವು ಅತೃಪ್ತ ಶಾಸಕರು ಗೈರು ಆದದ್ದೇ ಆದಲ್ಲಿ ಸರ್ಕಾರ ಇನ್ನು ತೂಗುಕತ್ತಿಯ ಮೇಲೆ ಇದೆ ಎನ್ನುವ ಅರ್ಥವನ್ನು ಕೊಡುತ್ತದೆ. ಈ ಎಲ್ಲ ಹಿನ್ನಲೆಯಲ್ಲಿ ಇಂದಿನ ಅಧಿವೇಶನ ಮಹತ್ವವನ್ನು ಪಡೆದಿದೆ. 


ಕೇವಲ ತಿಂಗಳ ಹಿಂದಷ್ಟೇ ರೆಸಾರ್ಟ್ ರಾಜಕೀಯದಿಂದ ಹಿಡಿದು ಅತೃಪ್ತ ಶಾಸಕರ ಬಂಡಾಯಯದಿಂದ ರಾಜ್ಯದ ಜನರಿಗೆ ನಿಜಕ್ಕೋ ಬೇಸರ ಮೂಡಿಸಿತ್ತು.ಇವೆಲ್ಲ ಘಟನಾವಳಿಗಳು ರಾಷ್ಟ್ರ ಗಮನವನ್ನು ಕೂಡ ಸೆಳೆದಿದ್ದವು.ಈಗ ಒಂದೆಡೆ ಇವೆಲ್ಲವು ಕೂಡ ತಣ್ಣಗಾಗಿದ್ದರೂ ಎಲ್ಲೋ ಒಂದು ಕಡೆ ಬೂದಿ ಮುಚ್ಚಿದ ಕೆಂಡದಂತೆ ಅಸಮಾಧಾನ ಅತೃಪ್ತ ಶಾಸಕರಲ್ಲಿ ಇದೆ. ಇನ್ನೊಂದೆಡೆ ಕಾಂಗ್ರೆಸ್ ಶಾಸಕರು ಹೆಚ್ಚಾಗಿ ಮೈತ್ರಿ ಜೆಡಿಎಸ್ ಗೆ ಹೆಚ್ಚಿನ ಲಾಭವಾಗುತ್ತಿದೆ ಹೊರತು ತಮಗಲ್ಲ ಎನ್ನುವುದನ್ನು ಕೂಡ ಸ್ಪಷ್ಟವಾಗಿ ಅರಿತಿದ್ದಾರೆ.ಆದ್ದರಿಂದ ಈ ಎಲ್ಲ ಅಸಮಾಧಾನ,ಅತೃಪ್ತಿ, ಬಂಡಾಯದ ರಾಜಕಾರಣವೇಲ್ಲವೂ  ಮುಂಬರುವ ಲೋಕಸಭಾ ಚುನಾವಣೆವರೆಗೂ ನಡೆಯಲಿದೆ.ಇದಾದಂತರ ಸರ್ಕಾರಕ್ಕೆ ಖಂಡಿತ ಗಂಡಾಂತರವಿದೆ ಎಂದೇ ಹೇಳಬಹುದು.