ಒಂದು ದಿನದ ಪರಿವರ್ತನಾ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಬಿಜೆಪಿ ಇಂದು ಯದಿಯೂರಿನಿಂದ ಹೊರಟು ಬೆಳಿಗ್ಗೆ 11 ಗಂಟೆಗೆ ತುರುವೇಕೆರೆ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 3 ಗಂಟೆಗೆ ಚಿಕ್ಕನಾಯಕನ ಹಳ್ಳಿ ತಲುಪಲಿರುವ ಪರಿವರ್ತನಾ ಯಾತ್ರೆ ಸಂಜೆ 6 ಗಂಟೆಗೆ ತುಮಕೂರು ಗ್ರಾಮಾಂತರವನ್ನು ತಲುಪಲಿದೆ.



COMMERCIAL BREAK
SCROLL TO CONTINUE READING

 


ಬೆಳಿಗ್ಗೆ 11 ಗಂಟೆಗೆ ತುರುವೇಕೆರೆಯಲ್ಲಿ ರಥ ಯಾತ್ರೆಯ ಜೊತೆಗೆ ಬಿಜೆಪಿ ಕುಟುಂಬದ ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಬಂದು ಸಂತರ ಬೀಡಿಗೆ ತಲುಪಲಿದ್ದೇವೆ. ನೀವೆಲ್ಲರೂ ಈ ನಾಡಿನ ಬಗ್ಗೆ ಕಾಣುತ್ತಿರುವ ಕನಸನ್ನು ಸಾಕಾರಗೊಳಿಸಿ ಇಲ್ಲಿನ ವೈಶಿಷ್ಟ್ಯತೆಯನ್ನು ಮತ್ತಷ್ಟು ಹೆಚ್ಸಿಸುವುದೇ ನಮ್ಮ ಧ್ಯೇಯ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.