Today Weather Update 01-05-2023: ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ಮುಂದಿನ ಎರಡು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Kuberdev zodiac signs: ಈ ರಾಶಿಯವರೆಂದರೆ ಕುಬೇರನಿಗೆ ಪಂಚಪ್ರಾಣ: ಎಂದಿಗೂ ಸಂಪತ್ತಿಗೆ ಕೊರತೆ ಬರದಂತೆ ಕಾಪಾಡುವನು ಧನದೇವ!


10 ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ:


ಕೊಡಗು, ಮೈಸೂರು, ಶಿವಮೊಗ್ಗ, ಚಿತ್ರದುರ್ಗ, ಹಾಸನ, ಗುಲ್ಬರ್ಗ, ಉಡುಪಿ, ಚಾಮರಾಜನಗರ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಸೇರಿದಂತೆ ಇತರೆ 10 ಜಿಲ್ಲೆಗಳಿಗೆ ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದೆ.


ಬೆಂಗಳೂರಿನಲ್ಲಿ ಮಂಗಳವಾರ 19 ಮಿ.ಮೀ ಮಳೆಯಾಗಿದೆ. ಬೆಳ್ಳಂದೂರಿನಂತಹ ಟೆಕ್ ಕಾರಿಡಾರ್‌ ಗಳು ಜಲಾವೃತಗೊಂಡಿರುವ ಬಗ್ಗೆ ವರದಿ ಮಾಡಿದೆ. ವರದಿಗಳ ಪ್ರಕಾರ, ಸ್ಯಾಂಕಿ ರಸ್ತೆ ಮತ್ತು ಲಿಂಗರಾಜಪುರಂ ಬಳಿಯ ಅಂಡರ್‌ಪಾಸ್‌ ಗಳು ಸಂಜೆ ಜಲಾವೃತವಾಗಿವೆ.


ಗಂಟೆಗೆ 40 ಕಿಮೀ ವೇಗದಲ್ಲಿ ಬೀಸುವ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯು ಬೆಂಗಳೂರಿನ ಕೆಲವು ಭಾಗಗಳಲ್ಲಿ ಮರಗಳನ್ನು ಧರೆಶಾಹಿಯನ್ನಾಗಿಸಿದೆ, ಅನೇಕ ಅಂಡರ್‌ ಪಾಸ್‌ ಗಳು ಮತ್ತು ತಗ್ಗು ಪ್ರದೇಶಗಳು ನೀರಿನಿಂದ ಜಲಾವೃತಗೊಂಡಿದೆ.


ಬೆಂಗಳೂರಿನಾದ್ಯಂತ ಜೂನ್ 1 ರಂದು ಅಂದರೆ ಇಂದಿನಿಂದ ಶಾಲೆಗಳು ಪುನರಾರಂಭಗೊಳ್ಳುತ್ತಿವೆ. ಈ ಮುನ್ನ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಎರಡು ದಿನಗಳ ಹಿಂದೆ ನೀಡಿದ ಸೂಚನೆಗಳ ಪ್ರಕಾರ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲು ಆಡಳಿತ ಮಂಡಳಿಗಳಿಗೆ ಎಚ್ಚರಿಕೆ ನೀಡಿದೆ.


ಈ ಮಧ್ಯೆ, ಬಿಬಿಎಂಪಿ (ನಾಗರಿಕ ಸಂಸ್ಥೆ) ತನ್ನ ಸಂಪೂರ್ಣ ವಿಪತ್ತು ನಿಯಂತ್ರಣ ತಂಡವನ್ನು ಹೈ ಅಲರ್ಟ್‌ನಲ್ಲಿ ಇರಿಸಿದೆ. ಇದೇ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ


ಅಲರ್ಟ್‌ ಗೆ ಪ್ರತಿಕ್ರಿಯಿಸಿದ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಆಯುಕ್ತರು ಮತ್ತು ಜಂಟಿ ಆಯುಕ್ತರು ಸೇರಿದಂತೆ ಎಲ್ಲಾ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಪ್ರತಿಯೊಬ್ಬರೂ ಜಾಗರೂಕರಾಗಿರಿ ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.  


ಇದನ್ನೂ ಓದಿ: ಇಂದು ಈ ರಾಶಿಗಳ ಮೇಲೆ ಮಹಾವಿಷ್ಣುವಿನ ಕೃಪೆ: ತಿಂಗಳಾರಂಭದಲ್ಲೇ ಸಂಪತ್ತು-ಸಮೃದ್ಧಿಯ ಮಳೆ!


ಕಳೆದ ವಾರ ಬೆಂಗಳೂರಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆಯಿಂದಾಗಿ ಎರಡು ಜೀವಗಳು ಪ್ರಾಣ ಕಳೆದುಕೊಂಡಿತ್ತು. ಸಂತ್ರಸ್ತರಲ್ಲಿ ಒಬ್ಬರು ಕೆಆರ್ ಸರ್ಕಲ್ ಬಳಿ ಜಲಾವೃತಗೊಂಡ ಅಂಡರ್‌ ಪಾಸ್‌ ನಲ್ಲಿ ವಾಹನ ಮುಳುಗಿ 23 ವರ್ಷದ ಯುವತಿ ಪ್ರಾಣ ಕಳೆದುಕೊಂಡಿದ್ದರೆ, ಮತ್ತೊಬ್ಬ ವ್ಯಕ್ತಿ ಚರಂಡಿಗೆ ಬಿದ್ದು, ಪ್ರಾಣ ಕಳೆದುಕೊಂಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.