`ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳಿಂದ ದೇಶದ ಭವಿಷ್ಯ ಕರಾಳ`
ಕೇಂದ್ರ ಸರಕಾರ ಜಾರಿಮಾಡಲು ಹೊರಟಿರುವ ರೈತ ಮತ್ತು ಕಾರ್ಮಿಕ ಕಾನೂನುಗಳಿಂದ ಭಾರತದ ಭವಿಷ್ಯ ಕರಾಳವಾಗಲಿದೆ ಹೀಗಾಗಿ ಈ ರೈತ ಹಾಗೂ ಕಾರ್ಮಿಕ ನೀತಿಗಳನ್ನು ಹಿಮ್ಮೆಟ್ಟಿಸುವುದು ಇವತ್ತಿನ ತುರ್ತಾಗಿದೆ ಎಂದು ಸಿ.ಐ.ಟಿ.ಯು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ ಅಭಿಪ್ರಾಯಪಟ್ಟರು.
ಗದಗ: ಕೇಂದ್ರ ಸರಕಾರ ಜಾರಿಮಾಡಲು ಹೊರಟಿರುವ ರೈತ ಮತ್ತು ಕಾರ್ಮಿಕ ಕಾನೂನುಗಳಿಂದ ಭಾರತದ ಭವಿಷ್ಯ ಕರಾಳವಾಗಲಿದೆ ಹೀಗಾಗಿ ಈ ರೈತ ಹಾಗೂ ಕಾರ್ಮಿಕ ನೀತಿಗಳನ್ನು ಹಿಮ್ಮೆಟ್ಟಿಸುವುದು ಇವತ್ತಿನ ತುರ್ತಾಗಿದೆ ಎಂದು ಸಿ.ಐ.ಟಿ.ಯು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ಡೆ ವಿರೋಧಿಸಿ ರೈತರಿಂದ ಜಾಥಾ
ಅವರು ಗಜೇಂದ್ರಗಡದಲ್ಲಿನ ಕೆ.ಕೆ.ವೃತ್ತದಲ್ಲಿ ರೈತ- ಕಾರ್ಮಿಕ ವಿರೋಧಿ ಕೃಷಿ ಸಂಬಂಧಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳ ವಿರುದ್ಧ ಪ್ರಚಾರ ಜಾಥಾದ ಬಹಿರಂಗ ಸಭೆಯನ್ನುದ್ಧೇಶಿಸಿ ಮಾತನಾಡಿದರು."ದೇಶದ ರೈತರು ಕಳೆದೆರಡು ತಿಂಗಳಿಂದ ದೆಹಲಿ ಹಾಗೂ ದೇಶಾದ್ಯಂತ ನಡೆಸುತ್ತಿರುವ ದೇಶಪ್ರೇಮಿ ಹೋರಾಟ (Farmers Protest) ವನ್ನು ಯಾವುದೇ ಬೆಲೆ ತೆತ್ತಾದರೂ ಸಫಲಗೊಳಿಸುವುದು ಅಗತ್ಯವಾಗಿದೆಯೆಂದರು.ರೈತ,ಕಾರ್ಮಿಕರ ಈ ಐತಿಹಾಸಿಕ ಹೋರಾಟವನ್ನು ಸಂಪೂರ್ಣ ಬೆಂಬಲಿಸಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿಕೊಂಡರು.
ಇದನ್ನೂ ಓದಿ: Karnataka Gram Panchayat Election Results 2020: ಗದಗ ಜಿಲ್ಲೆಯಲ್ಲಿ ಕಾಮ್ರೆಡ್ ಗಳ ಮಿಂಚು
Farmers),ಕಾರ್ಮಿಕ,ಜನಸಾಮಾನ್ಯರ ವಿರೋಧಿ ನೀತಿ,ಕಾಯ್ದೆಗಳನ್ನು ಕೈಬಿಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಇದನ್ನೂ ಓದಿ: ರಾಜ್ಯದ ಗಮನ ಸೆಳೆದ ಗ್ರಾಮ ಪಂಚಾಯತಿ ಚುನಾವಣಾ ಪ್ರಣಾಳಿಕೆ
ರೈತರ ಈ ಜಾಥಾ ಗದಗ ಜಿಲ್ಲೆಯಲ್ಲಿ ಬೆಳವಣಿಕಿ, ಲಕ್ಷ್ಮೇಶ್ವರ, ನರಗುಂದ ಭಾಗಗಳಲ್ಲಿಯೂ ಕೂಡ ಸಂಚರಿಸಿತು.ಜಾಥಾ ಹೋದಲ್ಲೆಲ್ಲಾ ಕಾರ್ಮಿಕ,ರೈತ,ವಿದ್ಯಾರ್ಥಿ,ಯುವಜನ ಸಂಘಟನೆಗಳು ಬರಮಾಡಿಕೊಂಡವು.ಜಾಥಾದ ಕಲಾತಂಡವು ಬೀದಿ ನಾಟಕ ಹಾಗೂ ಹೋರಾಟದ ಹಾಡುಗಳ ಮೂಲಕ ರೈತರ ಕೃಷಿ ವಿರೋಧಿ ಕಾಯ್ದೆಗಳನ್ನು ಜನರಿಗೆ ಮನಮುಟ್ಟುವಂತೆ ಪ್ರಸ್ತುತಪಡಿಸಿದರು.
https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.