ಬೆಂಗಳೂರು : ಕೊರೊನಾ ಬೆನ್ನಲ್ಲೇ ಮತ್ತೊಂದು ಮಹಾಮಾರಿ ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆಯಾ ಎನ್ನುವ ಆತಂಕ ಇದೀಗ ಕಾಡುತ್ತಿದೆ. ಹೌದು ಶಂಕಿತ ಟೊಮೊಟೊ ವೈರಸ್  ರಾಜ್ಯದಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಕೇರಳ ಗಡಿಭಾಗ ಉಡುಪಿಯಲ್ಲಿ ವೈರಸ್ ಪತ್ತೆಯಾಗಿದೆ.  ಇದೀಗ ಕೇರಳ ಗಡಿ ಪ್ರದೇಶದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. 


COMMERCIAL BREAK
SCROLL TO CONTINUE READING

ಕರ್ನಾಟಕ ಗಡಿ ರಾಜ್ಯವಾದ ಕೇರಳದಲ್ಲಿ ಕಳೆದ ಕೆಲವು ಸಮಯಗಳಿಂದ ಮಕ್ಕಳಲ್ಲಿ  ಟೊಮೊಟೋ ಜ್ವರ ಕಾಣಿಸಿಕೊಂಡಿದೆ. ಐದು ವರ್ಷದ ಕೆಳಗಿನ ಮಕ್ಕಳನ್ನು ಈ  ಟೊಮೊಟೋ ಜ್ವರ ಬಾಧಿಸುತ್ತಿದೆ. ಇದೀಗ ರಾಜ್ಯದಲ್ಲಿಯೂ ಶಂಕಿತ ಟೊಮೊಟೊ ವೈರಸ್  ಪತ್ತೆಯಾಗಿದೆ ಎನ್ನಲಾಗಿದೆ. ಕೇರಳ ಗಡಿಭಾಗವಾದ ಉಡುಪಿ ಜಿಲ್ಲೆಯಲ್ಲಿ ಶಂಕಿತ ಟೊಮೊಟೊ ವೈರಸ್  ಪತ್ತೆಯಾಗಿದೆ ಎನ್ನಲಾಗಿದೆ. 


ಇದನ್ನೂ ಓದಿ : Shocking News: ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಮಗು ಸ್ಮಶಾನದಲ್ಲಿ ಜೀವಂತ!


ಕೇರಳದಲ್ಲಿ ಕಂಡು ಬಂದ ಮಹಾಮಾರಿ ರಾಜ್ಯಕ್ಕೂ ಎಂಟ್ರಿಕೊಟ್ಟಿರುವ ಬಗ್ಗೆ ಇದೀಗ ಆತಂಕ ಹೆಚ್ಚಿಸುತ್ತಿದೆ. ಉಡುಪಿಯ ನಾಲ್ಕು ವರ್ಷ ಮಗುವಿನಲ್ಲಿ ಟೊಮೆಟೊ ವೈರೆಸ್ ಕಾಣಿಸಿಕೊಂಡಿದೆ ಎನ್ನಲಾಗಿದೆ. ಮಗುವಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣ ಇದೀಗ ಗಡಿಭಾಗ ಜಿಲ್ಲೆಯಲ್ಲಿ  ಆತಂಕ ಹೆಚ್ಚಿಸಿದೆ. ವೈರಸ್ ಪತ್ತೆ ಬಗ್ಗೆ ಇದುವರೆಗೂ ಆರೋಗ್ಯ  ಇಲಾಖೆ ಧೃಡೀಕರಿಸಿಲ್ಲ. 


ಶಂಕಿತ ವೈರಸ್ ಪತ್ತೆ ಹಿನ್ನೆಲೆ ರಾಜ್ಯದ ಗಡಿ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಉಡುಪಿ, ಮಂಗಳೂರು, ಕೊಡಗು, ಚಾಮರಾಜ ನಗರ ಜಿಲ್ಲೆಯಲ್ಲಿ ಆರೋಗ್ಯ ಅಧಿಕಾರಿಗಳು ಹದ್ದಿನ ಕಣ್ಣು
ಇರಿಸಿದ್ದಾರೆ. 


ಇದನ್ನೂ ಓದಿ : Vegetable Price: ಗ್ರಾಹಕರೇ ಗಮನಿಸಿ...ಇಲ್ಲಿದೆ ಇಂದಿನ ತರಕಾರಿ ಬೆಲೆ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್