ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ದೇಶದ ಪ್ರಮುಖ ಪ್ರಾದೇಶಿಕ ಪಕ್ಷಗಳ ನಾಯಕರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದ ಹೆಚ್ ಡಿ ಕುಮಾರಸ್ವಾಮಿಯವರಿಗೆ ನಾಳೆ ವಿಶ್ವಾಸಮತ ಪರೀಕ್ಷೆ ಎದುರಾಗಲಿದೆ. 


COMMERCIAL BREAK
SCROLL TO CONTINUE READING

ವಿಶ್ವಾಸಮತದ ಕೊರತೆಯ ಕಾರಣದಿಂದಾಗಿ ಪ್ರಮಾಣವಚನ ಸ್ವೀಕರಿಸಿದ 55 ಗಂಟೆಗಳ ವರೆಗೆ  ಮಾತ್ರ ಅಧಿಕಾರದಲ್ಲಿದ್ದ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಮೂಲಕ  ಅತಿ ಕಡಿಮೆ ಅವಧಿಯವರೆಗೆ ಮುಖ್ಯಮಂತ್ರಿಯಾದ ಖ್ಯಾತಿಗೆ ಪಾತ್ರರಾಗಿದ್ದರು. 


ಈ ಬಾರಿಯ ಚುನಾವಣೆಯಲ್ಲಿ  ಬಿಜೆಪಿ 104 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿದ್ದರೂ ಸಹಿತ ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ ತಲುಪುವಲ್ಲಿ ವಿಫಲವಾಗಿತ್ತು.ಆಧ್ಯಾಗೂ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಿಸಲು ಆಹ್ವಾನ ನೀಡಿದ್ದರು. ಆದರೆ ಅದು  ವಿಶ್ವಾಸ ಮತ ಸಾಬೀತುಪಡಿಸುವಲ್ಲಿ  ವಿಫಲವಾಗಿತ್ತು. ಈಗ ನಾಳೆ  ಕುಮಾರ ಸ್ವಾಮಿಯವರು ಸದನದಲ್ಲಿ ವಿಶ್ವಾಸಮತವನ್ನು ಸಾಬೀತುಪಡಿಸಬೇಕಾಗಿದೆ. 


ಜೆಡಿಎಸ್ ಮತ್ತು ಕಾಂಗ್ರೆಸ್ ನ ಮೈತ್ರಿಕೂಟ ಸರ್ಕಾರವಾಗಿರುವುದರಿಂದ ವಿಶ್ವಾಸಮತಕ್ಕೆ ಬೇಕಾದ ಎಲ್ಲ ನಂಬರ್ ಕೂಡ ಇದೆ.ಆದರೆ ಕೊನೆಯ ಸಂದರ್ಭದಲ್ಲಿ  ಏನಾದರೂ ಆಗಬಹುದು ಆ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ತಮ್ಮ ಶಾಸಕರನ್ನು ರೆಸಾರ್ಟ್ ಗಳಲ್ಲಿ ಕೂಡಿ ಹಾಕಿ ವಿಶ್ವಾಸಮತಕ್ಕೂ ಮುನ್ನ ಎಚ್ಚರಿಕೆಯ ಕ್ರಮವನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.