Top 10 News of the Day: ಲಂಚ ಪಡೆಯುವಾಗ ಪಿಡಿಓ ಲೋಕಾ ಬಲೆಗೆ,  ಸರಳತೆ ಮೆರೆದ ಶಾಸಕ ಪ್ರದೀಪ್ ಈಶ್ವರ್, ಹೆತ್ತಮ್ಮನಿಗೆ ಬೇಡವಾದ ಕಂದಮ್ಮ, ಶಾಲೆಗೆ ಕನ್ನ ಹಾಕಿದ್ದ ಆರೋಪಿ ಅಂದರ್‌ ಸೇರಿದಂತೆ ಇಲ್ಲಿದೆ ಇಂದಿನ ಪ್ರಮುಖ ಸುದ್ದಿಗಳು. 


COMMERCIAL BREAK
SCROLL TO CONTINUE READING

1) ನಟ ಅರ್ಜುನ್​ ಸರ್ಜಾ  ವಿರುದ್ಧ ಸೂಕ್ತ ಸಾಕ್ಷಿ ಸಿಕ್ಕಿಲ್ಲ 
ಕನ್ನಡ ಚಿತ್ರರಂಗದಲ್ಲಿ ಭಾರೀ ತಲ್ಲಣ ಸೃಷ್ಟಿ ಮಾಡಿದ್ದ ಮೀಟೂ ಪ್ರಕರಣಕ್ಕೆ ತಿರುವು ಸಿಕ್ಕಿದೆ. ʻವಿಸ್ಮಯʼ ಚಿತ್ರೀಕರಣದ ವೇಳೆ ನಟ ಅರ್ಜುನ್‌ ಸರ್ಜಾ ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ನಟಿ ಶ್ರುತಿ ಹರಿಹರನ್‌ 2018ರಲ್ಲಿ ದೂರು ದಾಖಲಿಸಿದ್ದರು. ಮೂರು ವರ್ಷ ಕಳೆದರು ಕೇಸ್‌ ಸಂಬಂಧ ಅರ್ಜುನ್‌ ಸರ್ಜಾ ವಿರುದ್ಧ ಯಾವುದೇ  ಸಾಕ್ಷಿ ಸಿಗದ ಕಾರಣ ಶ್ರುತಿ ಹರಿಹರನ್‌ಗೆ ಕೇಸ್‌ನಲ್ಲಿ ಹಿನ್ನೆಡೆಯಾಗಿದೆ. ಈ ಸಂಬಂಧ ಕಬ್ಬನ್​ ಪಾರ್ಕ್​ ಪೊಲೀಸರು ʼಬಿʼ ರಿಪೋರ್ಟ್​ ಸಿದ್ಧಪಡಿಸುತ್ತಿದ್ದು, ಸದ್ಯ ನಟ ಅರ್ಜುನ್‌ ಸರ್ಜಾಗೆ ಬಿಗ್​ ರಿಲೀಫ್​ ಸಿಗುವ ಸಾಧ್ಯತೆ ಇದೆ.  CRPC ನಿಯಮಾನುಸಾರ ಫಾರ್ಮ್​ ನಂಬರ್ 159ರ ಅಡಿ ನಟಿ ಶ್ರುತಿ ಹರಿಹರನ್‌ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.


2) ಟಿಪ್ಪು ಆಯ್ತು ಈಗ ರಾಜ್ಯದಲ್ಲಿ ಔರಂಗಜೇಬ್ ವಿವಾದ 
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಭಾರೀ ಗಲಾಟೆಗೆ ಕಾರಣವಾಗಿರುವ ಔರಂಗಜೇಬ್ ವಿವಾದ ಈಗ ರಾಜ್ಯಕ್ಕೂ ಕಾಲಿಟ್ಟಿದೆ. ಬೆಳಗಾವಿಯ ನಿಪ್ಪಾಣಿಯಲ್ಲೂ ಔರಂಗಜೇಬ ಬೆಂಬಲಿಸಿ ಸ್ಟೇಟಸ್ ಹಾಕಿ ಯುವಕನೊಬ್ಬ ಶಾಂತಿ ಸುವ್ಯವಸ್ಥೆ ಕದಡುವ ಕೆಲಸ ಮಾಡಿದ್ದಾನೆ. ನಿಪ್ಪಾಣಿಯ ಜುನೈಲ್ ಎಂಬಾತ ವಾಟ್ಸಪ್‌ ಸ್ಟೇಟಸ್‌ ಹಾಕಿದ್ದು, ಹಿಂದೂಪರ ಸಂಘಟನೆಗಳು ಕಿಡಿಕಾರಿವೆ. ಸದ್ಯ ಆರೋಪಿ ಜುನೈಲ್ ಎಂಬುವವನ ವಿರುದ್ಧ ದೂರು ದಾಖಲಾಗಿದ್ದು, ಕೊಲ್ಲಾಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನಲೆ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ


3) ಸಚಿವ ಚಲುವರಾಯಸ್ವಾಮಿ ಬೆಂಬಲಿಗರ ದರ್ಬಾರ್?
ಕಾಂಗ್ರೆಸ್‌ ಗ್ಯಾರಂಟಿ ಕೇವಲ ಚುನಾವಣೆ ಗಿಮಿಕ್‌ ಅಂತ ಹೇಳಿ ಕೃಷಿ ಸಚಿವ  ಎನ್. ಚಲುವರಾಯ ಸ್ವಾಮಿ ಸ್ವಪಕ್ಷದವರಿಂದಲೇ ಟೀಕೆಗೆ ಒಳಗಾಗಿದ್ರು . ಈ ಬೆನ್ನಲ್ಲೇ ಸಚಿವರು ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ನಾಗಮಂಗಲ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಶಿಕ್ಷಕರೊಬ್ಬರಿಗೆ ಸಚಿವರ ಬೆಂಬಲಿಗರು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಸರ್ಕಾರಿ ಶಿಕ್ಷಕರ ಸಂಘದ ಅಧ್ಯಕ್ಷ CJ ಕುಮಾರ್‌ಗೆ, ಸಚಿವರ ಬೆಂಬಲಿಗ ರಾಜೇಶ್‌ ಏಕವಚನದಲ್ಲೇ ನಿಂದಿಸುತ್ತಿದ್ದರೂ ಸಹ ಕ್ಯಾರೆ ಅನ್ನದೆ ಕುಳಿತಿದ್ದ ಸಚಿವರ  ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.


4) ಲಂಚ ಪಡೆಯುವಾಗ ಪಿಡಿಓ ಲೋಕಾ ಬಲೆಗೆ!
ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರ ದಾಳಿ ಮುಂದುವರೆದಿದೆ. ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಂಚ ಪಡೆಯುವಾಗ ಲೋಕಾಯುಕ್ತರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ  ನೆಲಮಂಗಲದ ಅಗಳಕುಪ್ಪೆಯ ಪ್ರವಾಸಿಮಂದಿರಲ್ಲಿ ನಡೆದಿದೆ. ಪಿಡಿಓ ನರಸಿಂಹಮೂರ್ತಿ ಎನ್. ಲೋಕಾಯುಕ್ತ ಬಲೆಗೆ ಬಿದ್ದಿದ್ದು ಖಾತೆ ಮಾಡಿಕೊಡಲು ಸಾರ್ವಜನಿಕರಿಂದ 2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ. ಈ ವೇಳೆ ಲೋಕಾಯುಕ್ತ DYSP ರೇಣುಕಾ ಪ್ರಸಾದ್ ನೇತೃತ್ವದಲ್ಲಿ ದಾಳಿ ಮಾಡಿ ಅಧಿಕಾರಿಯನ್ನು ವಶಕ್ಕೆ ಪಡೆಯಲಾಗಿದೆ.


5) ಸರಳತೆ ಮೆರೆದ ಶಾಸಕ ಪ್ರದೀಪ್ ಈಶ್ವರ್
ಚುನಾವಣೆಯ ನಂತರ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಾಗ್ತಾನೆ ಇರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ ಈಶ್ವರ್‌, ಸದ್ಯ 'ನಮಸ್ತೆ ಚಿಕ್ಕಬಳ್ಳಾಪುರ' ಎಂಬ ಹೆಸರಲ್ಲಿ ಅಭಿಯಾನ ಆರಂಭಿಸಿದ್ದಾರೆ. ಸದಾ ಜನಸಾಮಾನ್ಯರ ಸಮಸ್ಯೆಗೆ ಕಿವಿಗೊಡಲು ಇಚ್ಛಿಸುವುದರಿಂದ, ಇಂದು ಮುಂಜಾನೆ 6:30ಯಿಂದಲೇ ಚಿಕ್ಕಬಳ್ಳಾಪುರ ನಗರ ರೌಂಡ್ಸ್ ಹಾಕಿದ್ರು. ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗೆ ಕಿವಿಗೊಟ್ಟು, ಸಾಮಾನ್ಯನಂತೆ ಬೀದಿ ಬದಿ ಹೋಟೆಲ್‌ನಲ್ಲಿ ತಿಂಡಿ ಸವಿದು, ಎಲ್ಲರಂತೆ ಬಿಲ್‌ ಪಾವತಿ ಮಾಡಿದ್ದಾರೆ.


6) ಹೆತ್ತಮ್ಮನಿಗೆ ಬೇಡವಾದ ಕಂದಮ್ಮ
ಒಂಭತ್ತು ತಿಂಗಳು ಹೆತ್ತು ಹೊತ್ತ ತಾಯಿ ನವಜಾತ ಶಿಶುವನ್ನು ಮುಳ್ಳಿನ ಪೊದೆ ಮಧ್ಯೆ ಬಿಸಾಡಿ ಹೋಗಿದ್ದಾಳೆ. ಇಂತಹ ಧಾರುಣ ಘಟನೆ ನಡೆದಿದ್ದು, ಕೊಪ್ಪಳದ ಗಂಗಾವತಿ ತಾಲೂಕಿನ ಪ್ರಗತಿನಗರ ಗ್ರಾಮದಲ್ಲಿ. ರಾತ್ರೋ ರಾತ್ರಿ ನವಜಾತ ಶಿಶುವನ್ನು  ಮುಳ್ಳಿನ ಪೊದೆಯಲ್ಲಿ ಬಿಟ್ಟು ಹೋಗಿದ್ದಾಳೆ. ಬೆಳಗಿನ ಜಾವ  ಮಗುವಿನ ಅಳಲನ್ನು ಕೇಳಿದ ಗ್ರಾಮಸ್ಥರು ಶಿಶುವನ್ನು ರಕ್ಷಿಸಿದ್ದಾರೆ. ಸದ್ಯ ಮಗು ಪ್ರಗತಿನಗರ ಗ್ರಾಮದ ಗಂಗಮ್ಮ ಎಂಬುವವರ ಮನೆಯಲ್ಲಿ ಆರೈಕೆಯಲ್ಲಿದೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಗಂಗಾವತಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.


7) ಶಾಲೆಗೆ ಕನ್ನ ಹಾಕಿದ್ದ ಆರೋಪಿ ಅಂದರ್‌ 
ಸರ್ಕಾರಿ ಪ್ರೌಢ ಶಾಲೆಯಲ್ಲಿ ಹೇಳೋರಿಲ್ಲ, ಕೇಳೋರಿಲ್ಲ ಎನ್ನುವ ಪರಿಸ್ಥತಿ ಬಂದೊದಗಿದೆ. ವಿಜಯಪುರದ ಸರ್ದಾರ್ ಸರ್ಕಾರಿ ಶಾಲೆಯ ಪರಿಕರಗಳನ್ನು ಪದೇ ರಾಜರೋಷವಾಗಿ ಕಳ್ಳತನ ಮಾಡಲಾಗಿತ್ತು. ಶಾಲೆಯ ಕಿಟಕಿ ಮುರಿದು ಪುಂಡಾಟಿಕೆ ನಡೆಸುತ್ತಿದ್ದ ಆರೋಪಿ ಆನಂದ್‌ನನ್ನು (22) ಪೊಲೀಸರು ಬಂಧಿಸಿದ್ದಾರೆ. ಕಳ್ಳತನದ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರು ಪೊಲೀಸರ ಮೊರೆ ಹೊಗಿದ್ದರು. ಈ ಸಂಬಂಧ ಆರೋಪಿಯನ್ನು ಅರೆಸ್ಟ್‌ ಮಾಡಲಾಗಿದ್ದು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಗಸ್ತು ತಿರುಗುವುದನ್ನು ಜಾಸ್ತಿ ಮಾಡಿದ್ದಾರೆ. ಜೊತೆಗೆ ಶಾಲೆಯ ಡೆಸ್ಕ್‌ ಸೇರಿದಂತೆ ಶಾಲಾ ಪರಿಕರಗಳನ್ನು ಯಾರು ಖರೀದಿಸ ಬಾರದೆಂದು ಗುಜರಿ ಅಂಗಡಿ ಮಾಲೀಕರಿಗೆ ಪೊಲೀಸರು ತಾಕೀತು ಮಾಡಿದ್ದಾರೆ.


8) ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ
ಧಾರಾಕಾರ ಮಳೆಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾರೀ ಅನಾಹುತ ಸೃಷ್ಟಿಯಾಗಿದೆ. ಕಡೂರು ತಾಲೂಕಿನ ಸಖರಾಯಪಟ್ಟಣ, ಹುಲಿಕೆರೆ, ಕೇತಮಾರನಹಳ್ಳಿ ಸೇರಿದಂತೆ ಇತರ ಭಾಗಗಳಲ್ಲಿ ವರುಣ ಅಬ್ಬರಿಸಿದ್ದಾನೆ. ಧಾರಕಾರ ಮಳೆಯಿಂದ ಕೆರೆ ಕೋಡಿ ಬಿದ್ದು, ಮಳೆ ನೀರು ರಸ್ತೆ, ರೈತರ ಗದ್ದೆ, ಜಮೀನಿಗೆ ಇಳಿದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಬೆಳೆ ಚಿಗುರುವ ಸಮಯದಲ್ಲೇ ವರುಣನ ಅಬ್ಬರದಿಂದ ರೈತರಿಗೆ ವಿಪರೀತ ನಷ್ಟ ಉಂಟಾಗಿದೆ. ಗ್ರಾಮೀಣ ಭಾಗದ  ರಸ್ತೆಗಳಲ್ಲಿ ನೀರು ಹರಿದು ಕೆಲ ಕಾಲ ಸಂಪರ್ಕ ಕಡಿತಗೊಂಡು ಜನರು ಪರದಾಡುವಂತಾಗಿದೆ.


9) ಯಾದಗಿರಿ ಜೆಲ್ಲೆಯಲ್ಲಿ ಮಳೆರಾಯನ ಆರ್ಭಟ‌
ಯಾದಗಿರಿ ಜೆಲ್ಲೆಯ ನಿನ್ನೆ ರಾತ್ರಿ ಧಾರಕಾರ ಮಳೆ ಸುರುದಿದೆ.  ಸುರಪುರ, ಹುಣಸಗಿ, ಶಹಾಪುರ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ವರುಣ ಅಬ್ಬರಿಸಿದ್ದು ಅನೇಕ ಅವಘಡಗಳು ಸಂಭವಿಸಿದೆ. ಶತಮಾನ ಮರವೊಂದು ಧರೆಗುರುಳಿದ್ದು, ರಸ್ತೆಯಲ್ಲಿದ್ದ ಆಟೋ, ಬೈಕ್‌ಗಳು ಜಖಂ ಆಗಿವೆ. ಇನ್ನೂ ಸುರಪುರ ಹೊರ ವಲಯದಲ್ಲಿ ಟ್ರಾಪೀಕ್ ಜಾಮ್ ಕಂಡುಬಂದಿತ್ತು. ಕೆಲವೆಡೆ ಮನೆಗಳ ಮೇಲಿನ ಶೀಟ್‌ ಹಾರಿ ಹೋಗಿವೆ. ಉತ್ತಮ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.


10) ಗರ್ಭಗುಡಿಯ ದೇವರ ಮೈಮೇಲೆ ಬೆಳೆಯುತ್ತಿರುವ ಹುತ್ತ
ದಿನೇ ದಿನೇ ಗರ್ಭಗುಡಿಯ ದೇವರ ಮೂರ್ತಿ ಮೇಲೆ ಹುತ್ತ ಬೆಳೆಯುತ್ತಿರುವ ಅಚ್ಚರಿ ಘಟನೆ ಚಿಕ್ಕಮಗಳೂರಿನ ಕೆಂಪಮ್ಮ ದೇವಸ್ಥಾನದಲ್ಲಿ ನಡೆದಿದೆ. ಪ್ರತಿ 15 ವರ್ಷಕ್ಕೊಮ್ಮೆ ಇಂತಹ ಪವಾಡ ನಡೆಯುತ್ತಂತೆ. ಆದ್ರೆ ಈ ಬಾರಿ ಐದೇ ವರ್ಷಕ್ಕೆ ನಡೆದಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ. ಈ ಬಾರಿ ಹುತ್ತ ಆವರಿಸಿದ ನಂತರ ಕಲ್ಲಿನ ಮೂರ್ತಿ ಮಾಡಿಸುವಂತೆ ದೇವಿ ಕೆಂಪಮ್ಮ ಅಪ್ಪಣೆ ನೀಡಿದೆ ಎನ್ನಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ