ಪ್ರಸಿದ್ಧ ಪ್ರವಾಸಿ ತಾಣಕ್ಕೆ ನೆಕ್ಸ್ಟ್ ವೀಕೆಂಡ್ನಲ್ಲಿ ಟೂರಿಸ್ಟ್ ಬ್ಯಾನ್
Tourist Ban: ಡಿ.22ರಿಂದ 26 ರ ವರೆಗೆ ಮೂರು ದಿನಗಳ ದತ್ತಜಯಂತಿಯ ಅಂಗವಾಗಿ ಆರು ದಿನಗಳ ಕಾಲ ಗಿರಿ ಭಾಗಕ್ಕೆ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದೆ. ಈ ಸಂದರ್ಭದಲ್ಲಿ ಯಾವುದೇ ಪ್ರವಾಸಿಗರಿಗೂ ಕೂಡ ಬೆಟ್ಟ ಹತ್ತೋಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬಿಡೋದಿಲ್ಲ.
Tourist Ban: ಇಯರ್ ಎಂಡ್, ಕ್ರಿಸ್‍ಮಸ್ ಅಂತ ಕಾಫಿನಾಡಿಗೆ ಹೋಗಿ ಪಾರ್ಟಿ ಮಾಡೋಣ, ಸೆಲಬ್ರೇಷನ್ ಮಾಡೋಕ್ ಅಂತ ಲಾಡ್ಜ್, ರೆಸಾರ್ಟ್, ಗಾಡಿ ಬುಕ್ ಮಾಡಿದ್ರೆ ಈಗಲೇ ಕ್ಯಾನ್ಸಲ್ ಮಾಡಿ. ಈ ಇಯರ್ ಎಂಡ್ ಅಲ್ಲಿ ಭೂಲೋಕದ ಸ್ವರ್ಗ ಅಂತ ಕಾಫಿನಾಡಿಗೆ ಬಂದ್ರೆ ಹ್ಯಾಪ್ ಮೋರೆ ಹಾಕೊಂಡ್ ವಾಪಸ್ ಹೋಗ್ಬೇಕಾಗುತ್ತೆ. ಯಾಕಂದ್ರೆ, ಈ ತಿಂಗಳ 24, 25, ಹಾಗೂ 26ರಂದು ಕಾಫಿನಾಡಿನ ಗಿರಿಭಾಗಕ್ಕೆ ಯಾವುದೇ ಪ್ರವಾಸಿಗರಿಗೂ ನೋ ಎಂಟ್ರಿ. ಒಂದ್ ವೇಳೆ ಈ ವೇಳೆ ನೀವು ಕಾಫಿ ನಾಡಿಗೆ ಹೋಗಲೇಬೇಕು ಅಂದುಕೊಂಡಿದ್ರೆ ದತ್ತಮಾಲೆ ಹಾಕೊಂಡೇ ಹೋಗಬೇಕು.
ಅಯ್ಯೋ.... ಯಾಕಪ್ಪಾ ಪ್ರಕೃತಿ ಸೌಂದರ್ಯ ಸವಿಯೋಕೂ ಮಾಲೆ ಹಾಕ್ಬೇಕಾ ಅಂತ ಹುಬ್ಬೇರಿಸ್ಬೇಡಿ... ಈ ಸ್ಟೋರಿ ಒಮ್ಮೆ ಓದಿ...
ಹೌದು.... ಈ ತಿಂಗಳ ಕೊನೆಯ ವಾರ ಕ್ರಿಸ್ಮಸ್ ಹಾಲಿಡೇ ಅಂತ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಹೋಗಲು ಪ್ಲಾನ್ ಮಾಡಿಕೊಂಡಿದ್ರೆ ಈಗಲೇ ನಿಮ್ಮ ಪ್ಲಾನ್ ಚೇಂಜ್ ಮಾಡಿಕೊಳ್ಳಿ. ಯಾಕಂದ್ರೆ ಚಿಕ್ಕಮಗಳೂರು ಜಿಲ್ಲಾಡಳಿತ ಡಿಸೆಂಬರ್ 22 ರಿಂದ 26ರವರೆಗೆ ಚಂದ್ರದ್ರೋಣ ಪರ್ವತಗಳ ಸಾಲಿನ ಪ್ರಮುಖ ತಾಣಗಳಿಗೆ ಪ್ರವಾಸಿಗರನ್ನು ನಿಷೇಧಿಸಿದೆ.
ಡಿ.17 ರಿಂದ 26 ರವರೆಗೆ ಚಿಕ್ಕಮಗಳೂರಿನಲ್ಲಿ ನಡೆಯುವ ದತ್ತ ಜಯಂತಿ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ದತ್ತಪೀಠ, ಮುಳ್ಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯದಾರ ಸೀತಾಳ್ಳಯ್ಯನಗಿರಿ ಸೇರಿದಂತೆ ಹಲವು ತಾಣಗಳಿಗೆ ಜಿಲ್ಲಾಡಳಿತ ಪ್ರವಾಸಿಗರನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ- ನಾಲ್ಕು ತಲೆಮಾರಿನಷ್ಟು ಹಳೆಯ ಬೇಕರಿಗೆ ಮನಸೋತವರೆಷ್ಟೋ...
ಡಿ.22ರಿಂದ 26 ರ ವರೆಗೆ ಮೂರು ದಿನಗಳ ದತ್ತಜಯಂತಿಯ ಅಂಗವಾಗಿ ಆರು ದಿನಗಳ ಕಾಲ ಗಿರಿ ಭಾಗಕ್ಕೆ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದೆ. ಈ ಸಂದರ್ಭದಲ್ಲಿ ಯಾವುದೇ ಪ್ರವಾಸಿಗರಿಗೂ ಕೂಡ ಬೆಟ್ಟ ಹತ್ತೋಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬಿಡೋದಿಲ್ಲ.
ಗಿರಿಧಾಮದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ದತ್ತಜಯಂತಿ ಕಾರ್ಯಕ್ರಮಕ್ಕೆ ಯಾವುದೇ ರೀತಿ ತೊಂದರೆಯಾಗದಂತೆ ನಿಗಾ ವಹಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರವಾಸಿಗರಿಗೆ ಸಂಪೂರ್ಣ ಬ್ರೇಕ್ ಹಾಕಿದ್ದು, ಈ ನಿಗದಿತ ದಿನಗಳಲ್ಲಿ ಯಾರೂ ಕಾಫಿನಾಡಿನ ಗಿರಿಭಾಗದತ್ತ ಬರಬೇಡಿ. ಬಂದ್ರು ಬಿಡ್ಲಿಲ್ಲ ಅಂತ ಬೇಜಾರಾಗಿ ಹೋಗ್ಬೇಡಿ...
ಇನ್ನು ಚಿಕ್ಕಮಗಳೂರು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಆ ದಿನಗಳ ಕಾಲ ಗಿರಿ ಭಾಗದ ಎಲ್ಲಾ ಪ್ರವಾಸಿ ತಾಣಗಳಿಗೆ ನಿಷೇಧ ಹೇರಿದೆ. ಮಾಹಿತಿ ತಿಳಿಯದೆ ಬಂದ್ರೆ ಗಿರಿಭಾಗದ ಪ್ರವಾಸಿ ತಾಣಗಳಿಗೆ ಎಂಜಾಯ್ ಮಾಡ್ಬೇಕು ಅಂತ ದೂರದೂರುಗಳಿಂದ ಬರೋ ಟೂರಿಸ್ಟ್ ಸಮಸ್ಯೆಗೆ ಸಿಲುಕೋದಂತು ನಿಶ್ಚಿತ. ಕಿರಿದಾದ ರಸ್ತೆಗಳಲ್ಲಿ ವಾಹನಗಳು ಸಿಲುಕಿ ಪ್ರವಾಸಿಗರು ಪರದಾಡುವ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ- ಹದಗೆಟ್ಟ ರಸ್ತೆಗೆ ಡಾಂಬಾರು... ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಈ ಮೂರು ದಿನ ನೋ ಎಂಟ್ರಿ!!
ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಈ ಬಾರಿಯ ದತ್ತ ಜಯಂತಿಯನ್ನು ನಾಡ ಉತ್ಸವದಂತೆ ಆಚರಿಸಲು ನಿರ್ಧರಿಸಿದೆ. ಇನ್ನು ಈ ಬಾರಿ ದತ್ತ ಜಯಂತಿಗೆ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸುಮಾರು 30 ಸಾವಿರಕ್ಕೂ ಹೆಚ್ಚು ದತ್ತಮಾಲಾಧಾರಿಗಳು ಆಗಮಿಸುವ ನಿರೀಕ್ಷೆಯಿದ್ದು, ರಾಜ್ಯದ ಪ್ರಮುಖ ಸಾಧು ಸಂತರು ಭಾಗವಹಿಸಲಿದ್ದಾರೆ.
ಈ ಹಿನ್ನೆಲೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಇರಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ನಿಗಾ ವಹಿಸಿದೆ.
ಒಟ್ಟಾರೆ, ದತ್ತಜಯಂತಿ ಕಾರ್ಯಕ್ರಮದ ವೇಳೆ ಶಾಂತಿ ಕಾಪಾಡುವ ಉದ್ದೇಶದಿಂದ ಜಿಲ್ಲಾಡಳಿತದ ನಡೆ ಸೂಕ್ತವೆನ್ನಿಸಿದ್ರು, ಮಾಹಿತಿ ತಿಳಿಯದೆ ನೂರಾರು ಪ್ರವಾಸಿಗರು ಬರೋದ್ ಮಾತ್ರ ತಪ್ಪಲ್ಲ. ಆದಾಗ್ಯೂ, ವರ್ಷಾಂತ್ಯದಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ನಿಷೇಧ ಹೇರಿರೋದು ಮಾತ್ರ ಪ್ರವಾಸಿಗರಲ್ಲಿ ಬೇಸರ ಮೂಡಿಸಿರುವುದಂತೂ ಸುಳ್ಳಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.