ಕಾವೇರಿ ನದಿಯಲ್ಲಿ ಪ್ರವಾಸಿಗರ ಡೇಂಜರಸ್ ಮೋಜು- ಕಂಡಕಂಡಲ್ಲಿ ನೀರಿನಾಟ!!
ಮಳೆಯ ಆರ್ಭಟಕ್ಕೆ ಎರಡು ವರ್ಷಗಳ ಹಿಂದೆಯೇ ವೆಸ್ಲಿ ಸೇತುವೆಯ ಒಂದು ಭಾಗ ಕೊಚ್ಚಿ ಹೋಗಿತ್ತು. ಉಳಿದ ಭಾಗದ ಮೇಲಿನ ಓಡಾಟಕ್ಕೆ ನಿರ್ಬಂಧವಿದ್ದರೂ ಇದನ್ನು ಲೆಕ್ಕಿಸದ ನೂರಾರು ಪ್ರವಾಸಿಗರು ನಿತ್ಯ ಇಲ್ಲಿ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.
ಚಾಮರಾಜನಗರ: ನೀರು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಚುಮು ಚುಮು ಚಳಿಯಿದ್ದರೂ ನೀರು ಕಂಡೊಡನೆ ನದಿಗೆ ಧುಮುಕುವವರೇ ಹೆಚ್ಚು. ಆದರೆ, ಮೋಜು ಏನೇ ಇದ್ದರೂ ನಮ್ಮ ಬಗ್ಗೆ ಕಾಳಜಿಯೂ ಇರಬೇಕು. ಆದರಿಲ್ಲಿ, ಪ್ರವಾಸಿಗರು ಅಪಾಯವನ್ನು ಲೆಕ್ಕಿಸದೇ ತಮ್ಮ ಕುಟುಂಬದೊಟ್ಟಿಗೆ, ಸ್ನೇಹಿತರೊಟ್ಟಿಗೆ ನೀರಿನಲ್ಲಿ ಮೋಜು-ಮಸ್ತಿ ಮಾಡುವ ದೃಶ್ಯ ಚಾಮರಾಜನಗರದ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ವೆಸ್ಲಿ ಸೇತುವೆ ಬಳಿ ದಿನೇ ದಿನೇ ಹೆಚ್ಚಾಗುತ್ತಿದೆ.
ವಾಸ್ತವವಾಗಿ, ಮಳೆಯ ಆರ್ಭಟಕ್ಕೆ ಎರಡು ವರ್ಷಗಳ ಹಿಂದೆಯೇ ವೆಸ್ಲಿ ಸೇತುವೆಯ ಒಂದು ಭಾಗ ಕೊಚ್ಚಿ ಹೋಗಿತ್ತು. ಉಳಿದ ಭಾಗದ ಮೇಲಿನ ಓಡಾಟಕ್ಕೆ ನಿರ್ಬಂಧವಿದ್ದರೂ ಇದನ್ನು ಲೆಕ್ಕಿಸದ ನೂರಾರು ಪ್ರವಾಸಿಗರು ನಿತ್ಯ ಇಲ್ಲಿ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.
ಇದನ್ನೂ ಓದಿ- ಸಿದ್ದರಾಮಯ್ಯ ಹಾಗೂ ಚಿಲುಮೆ ಸಂಸ್ಥೆಗೆ ಇರುವ ಸಂಬಂಧ ಏನು?: ಬಿಜೆಪಿ ಪ್ರಶ್ನೆ
ಸಾಮಾನ್ಯವಾಗಿ, ಬೇಸಿಗೆಯಿರಲಿ, ಚಳಿಗಾಲವಿರಲಿ ನೀರನ್ನು ಕಂಡ ಕೂಡಲೇ ನೀರಿಗೆ ಇಳಿಯುವ ಹುಚ್ಚು ನಮ್ಮಲ್ಲಿ ಬಹುತೇಕ ಜನರಿಗೆ ಇರುತ್ತದೆ. ಈ ಹುಚ್ಚು ಎಷ್ಟರ ಮಟ್ಟಿಗಿರುತ್ತದೆ ಎಂದರೆ ಪ್ರವಾಸಿ ಸ್ಥಳಗಳಲ್ಲಿ ಇದು ಅಪಾಯಕಾರಿ ಸ್ಥಳ, ಎಚ್ಚರದಿಂದಿರಿ ಎಂಬ ಎಚ್ಚರಿಕೆ ಫಲಕ ಹಾಕಿದ್ದರೂ, ಅದನ್ನು ನಿರ್ಲಕ್ಷಿಸುವವರೇ ಹೆಚ್ಚು. ಇಂತಹವರಲ್ಲಿ ಸ್ಥಳೀಯರಿಗಿಂತ ಹೊರ ಜಿಲ್ಲೆಗಳಿಂದ ಬಂದವರೇ ಹೆಚ್ಚು ಎಂದರೂ ತಪ್ಪಾಗುವುದಿಲ್ಲ.
ಅದರಲ್ಲೂ, ಇಂತಹವರಲ್ಲಿ ಹೆಚ್ಚು ಮಂದಿ ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿಗರೇ ಆಗಿರುತ್ತಾರೆ ಎಂದು ದೂರುವ ಸ್ಥಳೀಯರು, ಭರಚುಕ್ಕಿ ಜಲಪಾತ ವೀಕ್ಷಣೆಗೆಂದು ಬಂದವರಲ್ಲಿ ಕೆಲವರು, ವೆಸ್ಲಿ ಸೇತುವೆ ಕೆಳಗಡೆ ನೀರಿನಲ್ಲಿ ಆಟವಾಡಲು ಹೋಗುತ್ತಾರೆ. ಮದ್ಯಪಾನ ಮಾಡಿ ನೀರಿನಲ್ಲಿ ಈಜಲು ತೆರಳುವುದು ಕೂಡ ನಡೆಯುತ್ತಿದ್ದು ಇದಕ್ಕೂ ಕಡಿವಾಣ ಬೀಳಬೇಕಿದೆ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ- ಸ್ಪೋಟಕ ಮಾಹಿತಿ : ಉಗ್ರ ಶಾರಿಕ್‌ನ ಟಾರ್ಗೆಟ್ ಈ ನಗರಗಳು..!
ವಾಸ್ತವವಾಗಿ, ವೆಸ್ಲಿ ಸೇತುವೆ ಕೆಳಗಡೆ ನೀರಿನಲ್ಲಿ ಆಟವಾಡಲು ಹೋಗದಿರುವಂತೆ ನದಿಗೆ ಇಳಿಯುವ ಮಾರ್ಗದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಎಚ್ಚರಿಕೆ ಫಲಕವನ್ನು ಹಾಕಲಾಗಿದೆ. ಆದರೂ, ಪ‍್ರವಾಸಿಗರು ಇಲ್ಲಿ ಆಡಳಿತದ ಫಲಕವನ್ನು ನಿರ್ಲಕ್ಷಿಸಿ ನೀರಿಗೆ ಇಳಿಯುತ್ತಿದ್ದಾರೆ. ಎಚ್ಚರಿಕೆ ಫಲಕ ಇಲ್ಲದಿರುವ ಕಡೆಗಳಲ್ಲಿ, ಸಿಬ್ಬಂದಿ ಇಲ್ಲದಿರುವ ಜಾಗದಲ್ಲಿ ಈಜಾಟ ಅಥವಾ ನೀರಿನಲ್ಲಿ ಆಟವಾಡುವುದಕ್ಕೆ ತೆರಳುತ್ತಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದರಲ್ಲಿ ಸಂಶವಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.