Road Accident: ಗೋವಿನಜೋಳದ ಸೊಪ್ಪೇ ತುಂಬಿಕೊಂಡು ಹೊರಟ್ಟಿದ್ದ ಟ್ರ್ಯಾಕ್ಟರ್ ಟಿಲ್ಲರ್ ಸಮೇತ ಪಲ್ಟಿಯಾಗಿರುವ ಘಟನೆ  ನಿನ್ನೆ (25 ಮೇ, ಗುರುವಾರ)  ಸಾಯಂಕಾಲ ಕುಂದಗೋಳ ಕಡಪಟ್ಟಿ ನಡೆದಿದೆ. ಟ್ರ್ಯಾಕ್ಟರ್ ಟಿಲ್ಲರ್ ಸಮೇತ ಪಲ್ಟಿಯಾದರೂ ಸಹ ಅದರಲ್ಲಿದ್ದ ಮೂರು ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 


COMMERCIAL BREAK
SCROLL TO CONTINUE READING

ಲಕ್ಷ್ಮೇಶ್ವರ ಮೂಲಕ ಕುಸುಗಲ್ ಗ್ರಾಮಕ್ಕೆ ಹೊರಟಿದ್ದ ಸೊಪ್ಪೆ ತುಂಬಿದ ಟ್ರ್ಯಾಕ್ಟರ್ ಕುಂದಗೋಳ ಕಡಪಟ್ಟಿ ದಾರಿಯಲ್ಲಿ  ಪಟ್ಟಣ ಪಂಚಾಯಿತಿ ಘನ ತ್ಯಾಜ್ಯ ವಿಲೇವಾರಿ ಘಟಕ ಬಳಿ ಪಲ್ಟಿ ಆಗಿದೆ. ಈ ಸಂದರ್ಭದಲ್ಲಿ  ಟ್ರ್ಯಾಕ್ಟರ್ ಇಂಜಿನ್ ಮೇಲೆ ಕುಳಿತು ಸಾಗುತ್ತಿದ್ದ ಮೂರು ಮಂದಿ ಪ್ರಾಣಾಪಾಯದಿಂದ ಪಾರಾಗಿರುವುದು ದೇವರು ಇದ್ದಾನೆಂಬುದಕ್ಕೇ ಸಾಕ್ಷಿ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. 


ಇದನ್ನೂ ಓದಿ- ಚಿಕ್ಕಬಳ್ಳಾಫುರದಲ್ಲಿ ಅನ್ಯಕೋಮಿನ ಯುವಕರಿಂದ ನೈತಿಕ ಪೊಲೀಸ್ ಗಿರಿ


ಆದರೆ, ಟ್ರ್ಯಾಕ್ಟರ್ ಟಿಲ್ಲರ್ ಸಮೇತ ಪಲ್ಟಿಯಾದರೂ ಕೂಡ ಈ ಮೂವರೇನೋ ಬದುಕುಳಿದರು. ಜೆಸಿಬಿ ಸಹಾಯದಿಂದ ಪಲ್ಟಿ ಹೊಡೆದಿದ್ದ ಟ್ರ್ಯಾಕ್ಟರ್ ಟಿಲ್ಲರ್ ಅನ್ನು ಮೇಲೆತ್ತಿ ಲಕ್ಷ್ಮೇಶ್ವರ ರೈತರು ತೆಗೆದುಕೊಂಡು ಹೋದರೂ. ಆದರೆ, ಈ ರಸ್ತೆಯಲ್ಲಿ ಪ್ರತಿ ದಿನ ಓಡಾಡುವವರ ಸ್ಥಿತಿ ಏನು? ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸರಿಯಾಗಿ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. 


ಇದನ್ನೂ ಓದಿ- Karnataka cabinet expansion: ಶನಿವಾರದಂದು 24 ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ


ಕುಂದಗೋಳ ತಾಲೂಕಿನ ರಸ್ತೆ ಅವ್ಯವಸ್ಥೆ ಪ್ರಶ್ನಿಸಿದರೆ ರಸ್ತೆ ನಾಳೆ ಮಾಡ್ತೇವಿ, ಇವತ್ತ್ ಮಾಡ್ತೇವಿ, ಟೆಂಡರ್ ಬಂದಿಲ್ಲಾ, ಅನುದಾನ ಬಂದಿಲ್ಲಾ ಅಂತ್ಹೇಳಿ ದಿನಕ್ಕೊಂದು ಕಥಿ ಹೇಳಿ ಪರಸ್ಥಳದ ಮಂದಿ ಮುಂದ್ ತಾಲೂಕಿನ ಮರ್ಯಾದೆ ಹಾಗೂ ನಮ್ಮ ಜನಪ್ರತಿನಿಧಿಗಳ ಮರ್ಯಾದೆ ತಗಿಬ್ಯಾಡ್ರೀ. ಆದಷ್ಟೂ ಬೇಗ ಈ ರಸ್ತೆ ಅಭಿವೃದ್ಧಿಗೆ ಕ್ರಮ ತಗೋರಿ ಅಂತಾ ಆಡಳಿತ ವ್ಯವಸ್ಥೆಗೆ ಛೀಮಾರಿ ಹಾಕಿದ್ದಾರೆ ಈ ಭಾಗದ ಜನರು.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.