ಬೆಂಗಳೂರು: ತಮ್ಮನ್ನು ಸಾರಿಗೆ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿದ್ದ ಮುಷ್ಕರವನ್ನು ವಾಪಸ್ ಪಡೆಯಲಿದ್ದು, ನಾಳೆಯಿಂದ ಸಾರಿಗೆ ಬಸ್ ಗಳು ರಸ್ತೆಗೆ ಇಳಿಯಲಿವೆ.


COMMERCIAL BREAK
SCROLL TO CONTINUE READING

ಗ್ರಾ. ಪಂ. ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಟ್ರಿ: ಗರಂ ಆದ ಚುನಾವಣಾ ಆಯೋಗ!


ಧರಣಿ ನಿರತ ಸಾರಿಗೆ ನೌಕರರ(Transport Employee) ಜೊತೆಗಿನ ಸರ್ಕಾರದ ಸಂಧಾನ ಯಶಸ್ವಿಯಾಗಿದೆ. ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಸಚಿವರಾದ ಆರ್. ಅಶೋಕ್, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಾರಿಗೆ ನೌಕರರ 5 ಯೂನಿಯನ್ ಗಳ ಮುಖಂಡರ ಜೊತೆಗೆ ನಡೆದ ಸಭೆ ಯಶಸ್ವಿಯಾಗಿದೆ ಎಂದು ಹೇಳಲಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಮುಷ್ಕರ ವಾಪಸ್ ಪಡೆಯಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ನಾಳೆಯಿಂದ ಬಸ್ ರಸ್ತೆಗೆ ಇಳಿಯಲಿವೆ ಎನ್ನಲಾಗಿದೆ.


ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಚಿವ ಸುಧಾಕರ್..!