KSRTC Employees Strike : ನಾವು ಮುಷ್ಕರ ವಾಪಾಸ್ ಪಡೆದಿಲ್ಲ, ಸರ್ಕಾರದ ನಡೆ ತೃಪ್ತಿತಂದಿಲ್ಲ : ಅನಂತ ಸುಬ್ಬರಾವ್
1-1-2020 ರಿಂದ ಅರಿಯರ್ಸ್ ನಮ್ಮ ಬೇಡಿಕೆ ಇದೆ. ಆದ್ರೆ 1 ಮಾರ್ಚ್ 2023 ರಿಂದ ವೇತನ ಪರಿಷ್ಕರಣೆ ಮಾಡಿದ್ದಾರೆ. 38 ತಿಂಗಳ ಅರಿಯರ್ಸ್ ಕಥೆ ಏನು? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು : ರಾಜ್ಯ ಸರ್ಕಾರ ಏಕಪಕ್ಷೀಯ ತೀರ್ಮಾನ ನಮಗೆ ಇಷ್ಟ ಆಗಿಲ್ಲ. 60 ವರ್ಷದಲ್ಲಿ ಇರದ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂದು ಸಾರಿಗೆ ನೌಕರರ ಸಂಘದ ಅಧ್ಯಕ್ಷ ಅನಂತ ಸುಬ್ಬರಾವ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನಂತ ಸುಬ್ಬರಾವ್, 1-1-2020 ರಿಂದ ಅರಿಯರ್ಸ್ ನಮ್ಮ ಬೇಡಿಕೆ ಇದೆ. ಆದ್ರೆ 1 ಮಾರ್ಚ್ 2023 ರಿಂದ ವೇತನ ಪರಿಷ್ಕರಣೆ ಮಾಡಿದ್ದಾರೆ. 38 ತಿಂಗಳ ಅರಿಯರ್ಸ್ ಕಥೆ ಏನು? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : KSRTC Employees : ಸಾರಿಗೆ ನೌಕರರ ವೇತನ ಶೇ.15 ರಷ್ಟು ಏರಿಕೆ ಮಾಡಿ ಸರ್ಕಾರದಿಂದ ಅಧಿಕೃತ ಆದೇಶ!
ಶ್ರೀನಿವಾಸ ಮೂರ್ತಿ ಕಮಿಟಿಗೆ ಈ ಅರಿಯರ್ಸ್ ವಿಚಾರ ವಹಿಸಿರೋದು ಸರಿಯಿಲ್ಲ. ಥರ್ಡ್ ಪಾರ್ಟಿ ಎಂಟ್ರಿ ಇದನ್ನ ಒಪ್ಪಲು ಸಾಧ್ಯವಿಲ್ಲ. ಇದು ಸರ್ಕಾರದ ಅಧಿಕ ಪ್ರಸಂಗತನವಾಗಿದೆ. ಬೇಸಿಕ್ 3% ಇನ್ಕ್ರಿಮೆಂಟ್ ಕೇಳಿದ್ವಿ ಅದರ ಬಗ್ಗೆ ಮಾತಾಡಿಲ್ಲ. ನಾವೀಗ ಮತ್ತೆ ಕೆಎಸ್ಆರ್ಟಿಸಿ ಆಡಳಿತ ಮಂಡಳಿ ಮೀಟ್ ಆಗ್ತಿವಿ. ಮತ್ತೆ ನಮ್ಮ ಬೇಡಿಕೆ ಇಡ್ತಿವಿ. ಅವರ ತೀರ್ಮಾನಕ್ಕೆ ಕಾಯ್ತಿವಿ. ನಾವು ಮುಷ್ಕರ ವಾಪಾಸ್ ಪಡೆದಿಲ್ಲ. ಅಲ್ಲದೆ, ಸರ್ಕಾರದ ನಡೆ ತೃಪ್ತಿತಂದಿಲ್ಲ. ಹೀಗಾಗಿ ನಾವು ಮುಷ್ಕರ ವಾಪಾಸ್ ಪಡೆದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : Karnataka Congress : ಸಚಿವ ಸೋಮಣ್ಣ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಮಹಿಳಾ ಕಾರ್ಯಕರು!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.