ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಗೃಹ ಜ್ಯೋತಿಗೆ ಭರ್ಜರಿ ಪ್ರತಿಕ್ರಿಯೆ ದೊರೆತಿದೆ.ಅರ್ಜಿ ಸಲ್ಲಿಕೆ ಆರಂಭವಾದ ಎಂಟು ದಿನಗಳಲ್ಲಿ 51 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ.ಮೊದಲ ‌ದಿನದಿಂದ ಇಲ್ಲಿಯವರೆಗೆ ಒಟ್ಟು 51 ಲಕ್ಷದ 17 ಸಾವಿರದ 693 ಜನರಿಂದ ಅರ್ಜಿ ಸಲ್ಲಿಕೆಯಾಗಿವೆ.


COMMERCIAL BREAK
SCROLL TO CONTINUE READING

ಆರಂಭದಲ್ಲಿ ಸರ್ವರ್ ಸಮಸ್ಯೆ ಕಂಡುಬಂದ ನಂತರ ತಕ್ಷಣ ಎಚ್ಚೆತ್ತುಕೊಂಡ ಇಂಧನ ಇಲಾಖೆಯು ಅಂತಿಮ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.ಭಾನುವಾರ ಸಂಜೆ ನಾಲ್ಕು ಗಂಟೆವರೆಗೆ ಸುಮಾರು 3,99,027 ಗ್ರಾಹಕರು ಗೃಹ ಜ್ಯೋತಿಗಾಗಿ ನೋಂದಣಿ ಮಾಡಿದ್ದಾರೆ.


ಇದನ್ನೂ ಓದಿ-ಈ 4 ಪದಾರ್ಥಗಳ ಸೇವನೆ ನಿಲ್ಲಿಸಿ, ಒಂದೇ ತಿಂಗಳಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ! 


ನಿನ್ನೆ 12,74,212 ಲಕ್ಷ ಜನರಿಂದ ಗೃಹ ಜ್ಯೋತಿಗಾಗಿ ನೋಂದಣಿ ಅರ್ಜಿ ಸಲ್ಲಿಸಿದ್ದಾರೆ.ಬೆಂಗಳೂರು ಒನ್, ಗ್ರಾಮ ಒನ್, ಮೊಬೈಲ್ ಹಾಗೂ ಲ್ಯಾಪ್ ಟಾಪ್‌ ಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.


ರಾಜ್ಯ ಸರ್ಕಾರ ನೋಂದಣಿಗೆ ಯಾವುದೇ ಗಡುವನ್ನು  ನಿಗದಿಪಡಿಸಿಲ್ಲ ಹೀಗಾಗಿ ಸಾರ್ವಜನಿಕರು ಆತಂಕ ಪಡದೆ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.ಈಗ ಕಳೆದ ಎರಡು ದಿನಗಳಲ್ಲಿ ಅರ್ಜಿದಾರರು ಯಾವುದೇ ಸಮಸ್ಯೆಯನ್ನು ಎದುರಿಸಿಲ್ಲ ಎನ್ನಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.