ಪತ್ರಿಕೋದ್ಯಮದ ದಿಗ್ಗಜ ರಾಮೋಜಿ ರಾವ್ ಅವರಿಗೆ ಈಟಿವಿ ಬಳಗದಿಂದ ನುಡಿನಮನ
ಮಾಧ್ಯಮ ದೊರೆ,ಈನಾಡು ಮುಖ್ಯಸ್ಥ,ರಾಮೋಜಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ರಾಮೋಜಿ ರಾವ್ ನಿಧನಕ್ಕೆ ಈಟಿವಿ ಬಳಗ ಕಂಬನಿ ಮಿಡಿದಿದ್ದು ನುಡಿನಮದ ಮೂಲಕ ಶ್ರದ್ದಾಂಜಲಿ ಸಲ್ಲಿಕೆ ಮಾಡಿತು. ಹಿರಿಯ ಪತ್ರಕರ್ತರು ರಾಮೋಜಿ ರಾವ್ ಅವರ ಬದ್ದತೆ,ವೃತ್ತಿಪರತೆಯೊಂದಿಗೆ ತಮ್ಮ ಬದುಕನ್ನು ರೂಪಿಸಿಕೊಂಡ ಬಗೆಯನ್ನು ಪತ್ರಕರ್ತರು ನೆನಪಿಸಿಕೊಂಡರು.
ಬೆಂಗಳೂರು: ಮಾಧ್ಯಮ ದೊರೆ,ಈನಾಡು ಮುಖ್ಯಸ್ಥ,ರಾಮೋಜಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ರಾಮೋಜಿ ರಾವ್ ನಿಧನಕ್ಕೆ ಈಟಿವಿ ಬಳಗ ಕಂಬನಿ ಮಿಡಿದಿದ್ದು ನುಡಿನಮದ ಮೂಲಕ ಶ್ರದ್ದಾಂಜಲಿ ಸಲ್ಲಿಕೆ ಮಾಡಿತು. ಹಿರಿಯ ಪತ್ರಕರ್ತರು ರಾಮೋಜಿ ರಾವ್ ಅವರ ಬದ್ದತೆ,ವೃತ್ತಿಪರತೆಯೊಂದಿಗೆ ತಮ್ಮ ಬದುಕನ್ನು ರೂಪಿಸಿಕೊಂಡ ಬಗೆಯನ್ನು ಪತ್ರಕರ್ತರು ನೆನಪಿಸಿಕೊಂಡರು.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಈಟಿವಿ ಬಳಗದವತಿಯಿಂದ ಈನಾಡು ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ರಾಮೋಜಿ ರಾವ್ ಅವರಿಗೆ ನುಡಿ ನಮನ ಕಾರ್ಯಕ್ರಮ ನಡೆಸಲಾಯಿತು.ಈಟಿವಿಯಲ್ಲಿ ಕೆಲಸ ಮಾಡಿದ್ದ ಹಿರಿಯ ಪತ್ರಕರ್ತರು ರಾಮೋಜಿ ರಾವ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಿಸಿ ಶ್ರದ್ದಾಂಜಲಿ ಸಲ್ಲಿಸಿದರು. ನಂತರ ನುಡಿನಮನದ ಮೂಲಕ ರಾಮೋಜಿ ರಾವ್ ಅವರೊಂದಿಗೆ ಕಳೆದ ಕ್ಷಣಗಳು, ಅವರ ಸಾಧನತೆಗಳು, ವೃತ್ತಿಪರತೆಗೆ ಸಿಗುತ್ತಿದ್ದ ಪ್ರೋತ್ಸಾಹ, ಸಂಪಾದಕೀಯದಲ್ಲಿ ಹಸ್ತಕ್ಷೇಪ ಮಾಡದಿರುವುದು ಸೇರಿದಂತೆ ಮಾಧ್ಯಮವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದ ಪರಿಯನ್ನು ಸ್ಮರಿಸಿದರು.
ಇದನ್ನು ಓದಿ : CM Oath Ceremony : ಆಂಧ್ರಪ್ರದೇಶದಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಚಿವರು, ಸಂಪೂರ್ಣ ಪಟ್ಟಿ ಇಲ್ಲಿದೆ
ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯಾಯ ಮಾತನಾಡಿ, ರಾಮೋಜಿ ರಾವ್ ಅವರು ನಿಜವಾಗಿಯೂ ನಮಗೆಲ್ಲಾ ಅನ್ನದಾತರೇ ಆಗಿದ್ದರು, ಖಾಸಗಿ ಮಾಧ್ಯಮದಲ್ಲಿ ರೈತರಿಗಾಗಿ ಅನ್ನದಾತದಂತಹ ಕಾರ್ಯಕ್ರಮ ಮಾಡಿದ್ದು ಇವರೇ ಮೊದಲ ಇವರೇ ಕೊನೆ, ಉಪ್ಪಿನ ಕಾಯಿಯಿಂದ ಮಾಧ್ಯಮದವರೆಗೂ ಹಲವು ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದರು, ಪತ್ರಕರ್ತರೂ ಆಗಿ ಪತ್ರಿಕಾ ಹಿನ್ನಲೆ ಇದ್ದ ಕಾರಣ ಮಾಧ್ಯಮ ನಡೆಸಲು ಪರಿಪಕ್ವತೆ ಇತ್ತು,ಹಾಗಾಗಿ ಅವರ ಚಾನೆಲ್ ಯಾವ ರೀತಿ ಇರಬೇಕು ಎನ್ನುವ ಕಲ್ಪನೆ ಇತ್ತು, ನಾನು ಆಂಗ್ಲ ಮಾಧ್ಯಮದ ಪತ್ರಕರ್ತನಾಗಿದ್ದರೂ ನನಗೆ ಈಟಿವಿ ಕನ್ನಡದ ಆರಂಭದ ವೇಳೆ ನನಗೆ ಆಹ್ವಾನ ಬಂತು, ಬೆಂಗಳೂರು ಡೆಸ್ಕ್ ಅಗತ್ಯತೆ ಪರಿಗಣಿಸಿ ಡೆಸ್ಕ್ ರಚಿಸಿದರು, ನಮಗೆ ಆರಂಭದಲ್ಲೇ ರಾಜ್ ಅಪರಹರಣ ಎದುರಾಯ್ತು, ಇಂತಹ ಸಂದರ್ಭದಲ್ಲಿ ಚಾನೆಲ್ ಆರಂಭ ಬೇಡ ಎಂದು ರಾಜ್ ಬಿಡುಗಡೆವರೆಗೂ ನಾವು ಡೆಮ್ಮಿ ಬುಲೆಟಿನ್ ರನ್ ಮಾಡಿದೆವು,ರಾಜ್ ಬಿಡುಗಡರ ನಂತರ ನಾವು ಆರಂಭಿಸಿದೆವು, ರಾಮೋಜಿರಾವ್ ನಿತ್ಯ ಮಾಧ್ಯಮ ನಿರ್ವಹಣೆಯ ಮಾನಿಟರಿಂಗ್ ಮಾಡುತ್ತಿದ್ದರು, 30 ನಿಮಿಷದ ಬುಲೆಟಿನ್ ಗೆ 40 ಸುದ್ದಿ ಬಳಸಬೇಕಿತ್ತು,ಅವರ ತಂಡದಲ್ಲಿ ಕೆಲಸ ಮಾಡಿದ್ದಕ್ಕೆ ಹೆಮ್ಮೆ ಇದೆ.ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಎಲ್ಲ ಪರಿಶೀಲನೆ ನಡೆಸುತ್ತಿದ್ದರು, ಅಂದು ಸುದ್ದಿ ರಿಪೀಟ್ ಆಗುವಂತಿರಲಿಲ್ಲ, ಹೊಸತನ ಇರಬೇಕಿತ್ತು,ಇಂದಿನ ಟಿವಿ ಮಾಧ್ಯಮಗಳಲ್ಲಿ ಅದು ಮಿಸ್ ಎನಿಸುತ್ತಿದೆ ಎಂದು ಸ್ಮರಿಸಿದರು.
ತುಂಡು ಬಟ್ಟೆ ಬಿಟ್ಟು ಸೀರೆಯಲ್ಲಿ ಮಿಂಚಿದ ದೀಪಿಕಾ! ಆಹಾ.. ಕನ್ನಡತಿ ಎಂದ ಫ್ಯಾನ್ಸ್
ಹಿರಿಯ ಪತ್ರಕರ್ತ ಸಮೀವುಲ್ಲ ಮಾತನಾಡಿ,ಹೊಸತನ, ಪ್ರಯೋಗಶೀಲತೆಗೆ ರಾಮೋಜಿರಾವ್ ಉತ್ತಮ ಉದಾಹರಣೆ, ಸಿನಿಮಾ, ಚಾನೆಲ್ ಎಲ್ಲವೂ ಪ್ರಯೋಗಗಳೇ ಆಗಿದ್ದವು, ಹೊಸತನದಲ್ಲೇ ಇರುತ್ತಿದ್ದವು,ಅವರೊಬ್ಬ ಮಹಾತ್ವಾಕಾಂಕ್ಷೆಯ ಕನಸುಗಾರರಾಗಿದ್ದರು ಎಂದರು.
ಹಿರಿಯ ಪತ್ರಕರ್ತ ರವಿಗೌಡ ಮಾತನಾಡಿ, ಉದ್ಯೋಗಿಗಳ ಕಷ್ಟದಲ್ಲಿ ರಾಮೋಜಿ ರಾವ್ ಅವರ ಸದಾ ನಿಲ್ಲುತ್ತಿದ್ದರು, ನಾನು ಈಟಿವಿ ಭಾರತ್ ಬಿಟ್ಟು ಬೇರೆ ಸಂಸ್ಥೆ ಸೇರುವ ವೇಳೆ ಅವರನ್ನು ಭೇಟಿಯಾಗಿ ಮತ್ತೊಂದು ಅವಕಾಶದ ಬಗ್ಗೆ ಹೇಳಿದಸಗ ಖುಷಿಯಿಂದ ಸಿಹಿ ಕೊಟ್ಟು ಬೆನ್ನು ತಟ್ಟಿ ಸಂಸ್ಥೆಯ ಬಾಗಿಲು ತೆರೆದಿದೆ ಎನ್ನುವ ಅಭಯದೊಂದಿಗೆ ಕಳಿಸಿಕೊಟ್ಟಿದ್ದರು ಎಂದು ಸ್ಮರಿಸಿದರು.
ಈಟಿವಿ ಭಾರತ್ ಬೆಂಗಳೂರು ಬ್ಯೂರೋ ಮುಖ್ಯಸ್ಥ ಸೋಮಶೇಖರ್ ಕವಚೂರು ಮಾತನಾಡಿ, ಮಾಧ್ಯಮದಲ್ಲಿ ಮೌಲ್ಯಗಳ ಜೊತೆಗೆ ಕನ್ನಡದ ಬಗ್ಗೆ ಹೆಚ್ಚಿನ ಕಾಳಜಿ ರಾಮೋಜಿ ರಾವ್ ಅವರಿಗೆ ಇತ್ತು, ಇಡೀ ಮಾಧ್ಯಮ ಸಂಸ್ಥೆಯನ್ನು ಗುಣಮಟ್ಟದಲ್ಲಿ ಮೊದಲ ಸ್ತರದಲ್ಲಿ ಇರುವಂತೆ ನೋಡಿಕೊಂಡಿದ್ದರು,ಎಲ್ಲ ಪ್ರಯತ್ನದಲ್ಲಿಯೂ ಅವರ ಯಶಸ್ವಿಯಾಗಿದ್ದರು, ಈಟಿವಿ ಭಾರತ್ ಅವರ ಕನಸು ಇದೂ ಕೂಡ ಸಫಲತೆಯ ಹಾದಿಯಲ್ಲಿ ಸಾಗುತ್ತಿದೆ ಅವರು ಮತ್ತಷ್ಟು ಕಾಲ ಇರಬೇಕಿತ್ತು ಎನಿಸುತ್ತಿದೆ ಎನ್ನುತ್ತಾ ರಾಮೋಜಿ ಮತ್ತೆ ಹುಟ್ಟಿ ಬರಲಿ ಎನ್ನುವ ಆಶಯ ವ್ಯಕ್ತಪಡಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ