ತುಮಕೂರು: ತಮ್ಮ ಕುಟುಂಬದ ಸದಸ್ಯನಂತದ್ದ ಗಿಳಿ ಕಾಣೆಯಾಗಿದ್ದಕ್ಕೆ ತುಮಕೂರಿನ ಕುಟುಂಬವೊಂದು ಕಂಗಲಾಗಿತ್ತು. ಇದೀಗ ಒಂದು ವಾರದ ಬಳಿಕ ತಮ್ಮ ಗಿಳಿ ಕೈಸೇರಿದ್ದು, ಮಾಲೀಕರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.


COMMERCIAL BREAK
SCROLL TO CONTINUE READING

ಶಿವಮೊಗ್ಗದ ಭದ್ರಾವತಿಯ ಅರ್ಜುನ್ ಮತ್ತು ರಂಜನಾ ದಂಪತಿ ಕಳೆದ 3 ವರ್ಷದಿಂದ 2 ಗಿಳಿಗಳನ್ನು ಸಾಕುತ್ತಿದ್ದರು. ಕಳೆದ 20 ದಿನಗಳ ಹಿಂದಷ್ಟೇ ಈ ದಂಪತಿ ತುಮಕೂರಿನ ಜಯನಗರಕ್ಕೆ ಶಿಫ್ಟ್ ಆಗಿದ್ದರು. ಜುಲೈ 16ರಂದು ‘ರುಸ್ತುಮಾ’ ಹೆಸರಿನ ಆಫ್ರಿಕನ್ ಗ್ರೇ ತಳಿಯ ಗಿಳಿ ಕಾಣೆಯಾಗಿತ್ತು. ಈ ಗಿಳಿ ನಾಪತ್ತೆ ಬಗ್ಗೆ ತುಮಕೂರಿನ ಅರ್ಜುನ್ ಕುಟುಂಬಸ್ಥರು ಪ್ರಕಟಣೆ ಹೊರಡಿಸಿದ್ದರು. ಆಟೋದಲ್ಲಿ ಪ್ರಚಾರ ನಡೆಸಿ ಕರಪತ್ರವನ್ನೂ ಹಂಚಿದ್ದರು. ಅಲ್ಲದೆ ಗಿಳಿ ಹುಡುಕಿ ಕೊಟ್ಟವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು.


ಇದನ್ನೂ ಓದಿ: ಇಂದೇ ಪ್ರಕಟಗೊಳ್ಳಲಿದೆ ಕೆಸಿಇಟಿ ಫಲಿತಾಂಶ 2022! ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ನೀಡಿ


ರುಸ್ತುಮಾ’ ಪತ್ತೆಯಾಗಿದ್ದು, ಇಂದು ತನ್ನ ಗೂಡಿಗೆ ಮರಳಿ ಸಂಗಾತಿಯನ್ನು ಸೇರಿದೆ. ತಾವು ಪ್ರೀತಿಯಿಂದ ಸಾಕಿದ್ದ ಗಿಳಿ ಮತ್ತೆ ಮನೆ ಸೇರಿದ್ದಕ್ಕೆ ಅರ್ಜುನ್ ಕುಟುಂಬಸ್ಥರು ಸಂತಸ ಪಟ್ಟಿದ್ದಾರೆ. ಇದೇ ಖುಷಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.  


ಇದನ್ನೂ ಓದಿ:  'ಬಿಜೆಪಿ ಸರ್ಕಾರ ಪಾಲಿಸ್ಟರ್ ಧ್ವಜಗಳ ಬಳಕೆಯ ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು'


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.