ಬೆಂಗಳೂರು: ಬಿಬಿಎಂಪಿಗೆ ನೂತನ ಸಾರಥಿಯಾಗಿ ಹಿರಿಯ IAS ಅಧಿಕಾರಿ ತುಷಾರ್ ಗಿರಿನಾಥ್ ಮುಖ್ಯ ಆಯುಕ್ತರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ತುಷಾರ್ ಅವರಿಗೆ ಬೆಳ್ಳಿ ಗದೆ ನೀಡುವ ಮೂಲಕ ಗೌರವ್ ಗುಪ್ತ ಅಧಿಕಾರ ಹಸ್ತಾಂತರಿಸಿದರು.


COMMERCIAL BREAK
SCROLL TO CONTINUE READING

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ತುಷಾರ್ ಗಿರನಾಥ್, ನನಗೆ ಬಿಬಿಎಂಪಿಯಲ್ಲಿ ಸಾಕಷ್ಟು ಸವಾಲುಗಳು ಇವೆ.ಸರ್ಕಾರ ಕೊಟ್ಟಿರುವ ಕೆಲಸವನ್ನು ನಿಭಾಯಿಸಿಕೊಂಡು ಹೋಗುತ್ತೇನೆ. ಜನರ ಬಳಿ ನೇರವಾಗಿ ತೆರಳಿ ಇರುವ ಸಮಸ್ಯೆಗಳನ್ನ ಆಲಿಸುವ ಕೆಲಸ ಮಾಡಲಾಗುತ್ತೆ ಎಂದರು.‌ಅಲ್ಲದೆ ಪ್ರತೀ ವಿಭಾಗಕ್ಕು ನಮ್ಮದೆ ಆದ ಕಾಲ್ ಸೆಂಟರ್ ಗಳು ಇವೆ. ಜನರಿಗೆ ಏನೆ ಸಮಸ್ಯೆ ಆದರೂ ಕರೆ ಮಾಡಿ ತಿಳಿಸಬಹುದು.‌ ಅದಕ್ಕೆ ನಮ್ಮ ಅಧಿಕಾರಿ ವರ್ಗ ಸದಾ ಸಿದ್ದರಿರುತ್ತಾರೆ ಎಂದು ಹೇಳಿದರು.ಒಟ್ಟು 6 ಲಕ್ಷ ಮನೆಗಳನ್ನು ಡಿಸೆಂಬರ್ ಮಾಹೆಯೊಳಗೆ ಪೂರ್ಣಗೊಳಿಸಿ: ಸಿಎಂ ಬೊಮ್ಮಾಯಿ


ಮಳೆಗಾಲ ಪ್ರಾರಂಭದಲ್ಲೇ ಎದುರಾಗಿದೆ ತುಷಾರ್ ಗಿರಿನಾಥ್ ಗೆ ಸವಾಲು


ಬೇಸಿಗೆಯಲ್ಲೆ ಶುರುವಾಗಿರುವ ಮಳೆ, ನಗರದಲ್ಲಿ ಹಲವಡೆ ಸಾಕಷ್ಟು ಸಮಸ್ಯೆಗಳನ್ನ ನೀಡಿದೆ.ಮುಂಬರುವ ಮಳೆಗಾಲದಲ್ಲಿ ಇನ್ನಷ್ಟು ಸಮಸ್ಯೆ, ಸವಾಲುಗಳು ನೂತನ ಆಯುಕ್ತ ತುಷಾರ್ ರವರಿಗೆ ಎದುರಾಗಲಿದೆ.ಇದರ ಬೆನ್ನಲ್ಲೇ ಅಧಿಕಾರ ವಹಿಸಿಕೊಂಡ ತುಷಾರ್ ಅವ್ರ ಮುಂದೆ ಸಾಲು ಸಾಲು ಸವಾಲುಗಳು ಮುಂದಾಗಲಿವೆ.ಈ ವಿಚಾರವಾಗಿ ಮಾತನಾಡಿದ ಅವರು ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳುವುದು, ರಸ್ತೆ ಗುಂಡಿ ಬೀಳದಂತೆ ಎಚ್ಚರ ವಹಿಸುವುದು, ಜಡ್ಡು ಹಿಡಿದ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಬಗ್ಗೆಯೂ ತಿಳಿಸಿದರು.


ಇದನ್ನೂ ಓದಿ : 'ಅಕ್ರಮ ಹಣದಿಂದಲೇ ಬಿಜೆಪಿ ಇಂದು ದೇಶದಲ್ಲಿ ಶ್ರೀಮಂತ ಪಕ್ಷವಾಗಿದೆ'


ಈ ಎಲ್ಲಾ ಸವಾಲುಗಳನ್ನ ಮೆಟ್ಟಿ ನಿಂತ ಸರ್ಕಾರ ನಮ್ಮ ಮೇಲಿಟ್ಟ ಜವಾಬ್ದಾರಿಯನ್ನ ನಿಭಾಯಿಸುತ್ತೇನೆ.ಇದಕ್ಕೆ ಪಾಲಿಕೆ ಅಧಿಕಾರಿಗಳ ಸಹಕಾರ ಮುಖ್ಯವಾಗಿದ್ದು, ಎಲ್ಲರೂ ಒಟ್ಟಾಗಿ ಬೆಂಗಳೂರು ಅಭಿವೃದ್ಧಿ ಮಾಡುವ ಇಂಗಿತವನ್ನ ತುಷಾರ್ ಗಿರಿನಾಥ್ ವ್ಯಕ್ತಪಡಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.