ಬೆಂಗಳೂರು: ಈಗಾಗಲೇ ಡಿಸ್ಕವರಿ, ಸ್ಟಾರ್ ಸ್ಪೋರ್ಟ್ ನಂತಹ ಚಾನೆಲ್ ಗಳು ಸಹಿತ ತಮ್ಮ ಕಾರ್ಯಕ್ರಮಗಳನ್ನು ಹಾಗೂ ಪಂದ್ಯಾವಳಿಗಳನ್ನು ಕನ್ನಡದಲ್ಲಿ ಪ್ರಸಾರ ಮಾಡುತ್ತಿವೆ.ಇಂತಹ ಸಂದರ್ಭದಲ್ಲಿ ಈಗ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಕ್ರಿಕೆಟ್ ಪಂದ್ಯಾವಳಿಗೂ ಸಹಿತ ಕನ್ನಡದಲ್ಲಿ ಕಾಮೆಂಟರಿಯನ್ನು ನೀಡಬೇಕೆಂದು ಕನ್ನಡ ಗ್ರಾಹಕರ ಒಕ್ಕೂಟ ಆಗ್ರಹಿಸಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ: IND vs AUS: ಮೊದಲ ಏಕದಿನ ಪಂದ್ಯಕ್ಕೂ ಮೊದಲು ದಾಖಲೆಗಳ ಒಂದು ನೋಟ


ಈ ಬಾರಿ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಕ್ರಿಕೆಟ್ ಪಂದ್ಯಾವಳಿ ಪ್ರಸಾರವನ್ನು ಸೋನಿ ಸಂಸ್ಥೆ ವಹಿಸಿಕೊಂಡಿದೆ.ಈಗ ಕನ್ನಡದಲ್ಲಿಯೂ ಕೂಡ ಈ ಪಂದ್ಯಾವಳಿ ಪ್ರಸಾರವಾಗಬೇಕೆಂದು ಸಾಮಾಜಿಕ ಮಾಧ್ಯಮದಲ್ಲಿ #CommentaryInKannada ಮತ್ತು  #ಕನ್ನಡದಲ್ಲಿ_ಕಾಮೆಂಟರಿ ಎನ್ನುವ ಹ್ಯಾಶ್ ಟ್ಯಾಗ್ ನೊಂದಿಗೆ ಟ್ವಿಟರ್ ಅಭಿಯಾನವನ್ನು ಕನ್ನಡ ಗ್ರಾಹಕರ ಒಕ್ಕೂಟ 26 ನವಂಬರ್ ರಂದು ಸಂಜೆ 5 ಘಂಟೆಗೆ ಹಮ್ಮಿಕೊಂಡಿದೆ.


ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿ ಅಭೂತಪೂರ್ವ ಯಶಸ್ಸು ಕಾಣುತ್ತಿರುವುದು ನಮಗೆಲ್ಲ ತಿಳಿದೇ ಇದೆ. ಈ ವಾಹಿನಿಯನ್ನು ಈ ಮಟ್ಟಕ್ಕೆ ಬೆಳೆಸುವಲ್ಲಿ...

Posted by Ganesh Chetan / ಗಣೇಶ ಚೇತನ್ on Tuesday, 24 November 2020

'ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿ ಅಭೂತಪೂರ್ವ ಯಶಸ್ಸು ಕಾಣುತ್ತಿರುವುದು ನಮಗೆಲ್ಲ ತಿಳಿದೇ ಇದೆ. ಈ ವಾಹಿನಿಯನ್ನು ಈ ಮಟ್ಟಕ್ಕೆ ಬೆಳೆಸುವಲ್ಲಿ ಸಮಾನಮನಸ್ಕ ಕನ್ನಡ ಗ್ರಾಹಕರ ಕೊಡುಗೆ ಬಹಳ ಇದೆ. ಇನ್ನಷ್ಟು ಕ್ರೀಡಾ ವಾಹಿನಿಗಳು ಕನ್ನಡದಲ್ಲಿ ಬರುವಂತೆ ಮಾಡುವುದು ನಮ್ಮ ಮುಂದಿನ ಗುರಿ ಆಗಬೇಕಿದೆ. ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆಯಂತೆ ಸೋನಿ ಸ್ಪೋರ್ಟ್ಸ್ ಸಂಸ್ಥೆಯೂ ಅನೇಕ ಪಂದ್ಯಾವಳಿಗಳನ್ನು ಪ್ರದರ್ಶನ ಮಾಡುತ್ತದೆ.ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಕ್ರಿಕೆಟ್ ಪಂದ್ಯಾವಳಿ ಈ ಬಾರಿ ಸೋನಿ ಸಂಸ್ಥೆಯ ವತಿಯಿಂದ ಪ್ರಸಾರ ಆಗಲಿದೆ.ಕನ್ನಡದಲ್ಲಿ ಕಾಮೆಂಟರಿ ಕೊಡಬೇಕೆಂದು ಅವರನ್ನು ಒತ್ತಾಯಿಸೋಣ. ಕನ್ನಡ ಕಾಮೆಂಟರಿ ಮೂಲಕ ಯೋಜನೆ ಶುರುವಾದರೆ ಮುಂದೊಂದು ದಿನ ಕನ್ನಡದ್ದೇ ವಾಹಿನಿ ಯಾಗಿ ಹೊರಹೊಮ್ಮುವ ವ್ಯವಸ್ಥೆ ಬರಬಹುದು. ಮೊದಲ ಹೆಜ್ಜೆಯಾಗಿ ಕನ್ನಡದಲ್ಲಿ ಕಾಮೆಂಟರಿ ಒತ್ತಾಯಿಸೋಣ.ನಮ್ಮ ಟ್ವಿಟರ್ ಅಭಿಯಾನವನ್ನು ಬೆಂಬಲಿಸಿ' ಎಂದು ಅದು ಮನವಿ ಮಾಡಿಕೊಂಡಿದೆ.