ಬೆಂಗಳೂರು: ಸಾಮಾನ್ಯವಾಗಿ ಕಪ್ಪು ಶಿಲೀಂಧ್ರ ಎಂದು ಕರೆಯಲ್ಪಡುವ ಮ್ಯೂಕೋರ್ಮೈಕೋಸಿಸ್ ಸೋಂಕು ಈಗ ರಾಜ್ಯದ ಇಬ್ಬರು ಮಕ್ಕಳಲ್ಲಿ ಪತ್ತೆಯಾಗಿದೆ.


COMMERCIAL BREAK
SCROLL TO CONTINUE READING

ಬಳ್ಳಾರಿ ಜಿಲ್ಲೆಯ 11 ವರ್ಷದ ಬಾಲಕಿ ಮತ್ತು ಚಿತ್ರದುರ್ಗ ಜಿಲ್ಲೆಯ 14 ವರ್ಷದ ಬಾಲಕ ಶಿಲೀಂಧ್ರ ರೋಗದಿಂದ ಸೋಂಕಿಗೆ ಒಳಗಾಗಿದ್ದು, ಕೃಷಿ ಕಾರ್ಮಿಕರ ಮಕ್ಕಳು ಇಬ್ಬರೂ ಸೋಂಕಿಗೆ ಒಂದು ಕಣ್ಣು ಕಳೆದುಕೊಳ್ಳಲಿದ್ದಾರೆ."ಸರ್ಕಾರಿ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗಳಲ್ಲಿ ಇಬ್ಬರು ಮಕ್ಕಳು ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.ಅವರು ಎಜೆಡಿಯಿಂದ ಬಳಲುತ್ತಿದ್ದಾರೆ" ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.


ಇದನ್ನೂ ಓದಿ: "ಜುಲೈ ಅಂತ್ಯದ ವೇಳೆ ಪ್ರತಿ ದಿನಕ್ಕೆ 1 ಕೋಟಿ ಭಾರತೀಯರಿಗೆ ಕೊರೊನಾ ಲಸಿಕೆ"


ಅವರಿಗೆ ಕೊರೊನಾ ಸೋಂಕು ತಗುಲಿತ್ತು, ಆದರೆ ಇದರ ಬಗ್ಗೆ ತಿಳಿದಿರಲಿಲ್ಲ ಎಂದು ಆರೋಗ್ಯ ಅಧಿಕಾರಿಯೊಬ್ಬರು ಹೇಳಿದರು, ತದನಂತರ ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ.ರಾಜ್ಯದಲ್ಲಿ ಸುಮಾರು 1,250 ಕಪ್ಪು ಶಿಲೀಂಧ್ರ ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ 1,193 ಮಂದಿ ಚಿಕಿತ್ಸೆಯಲ್ಲಿದ್ದಾರೆ ಮತ್ತು 18 ಮಂದಿ ಗುಣಮುಖರಾಗಿದ್ದರೆ, 39 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.


ಇದನ್ನೂ ಓದಿ- ಗಣರಾಜ್ಯೋತ್ಸವದಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಭಾಗವಹಿಸುವುದು ಅನುಮಾನ 


ಏತನ್ಮಧ್ಯೆ, ಆರೋಗ್ಯ ಸಚಿವ ಕೆ ಸುಧಾಕರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಶಿಲೀಂಧ್ರಗಳ ಸೋಂಕಿನ ಚಿಕಿತ್ಸೆಗಾಗಿ ಬಳಸಲಾಗುವ ಸುಮಾರು 10,000 ಬಾಟಲುಗಳ ಆಂಫೊಟೆರಿಸಿನ್-ಬಿ ಔಷಧವನ್ನು ರಾಜ್ಯವು ಸ್ವೀಕರಿಸಿದೆ ಎಂದು ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.