ತೋಟದ ಮನೆಗಳ ಸಮೀಪವೇ ಮರಿ ಹಾಕಿದ ಚಿರತೆ: ಕ್ಯಾಮರಾ ಅಳವಡಿಸಿದ ಅರಣ್ಯ ಇಲಾಖೆ
ಕಬ್ಬಿನ ಫಸಲನ್ನು ಕಟಾವು ಮಾಡುವಾಗ ಈ ಚಿರತೆ ಮರಿಗಳು ಪತ್ತೆಯಾಗಿವೆ. ಪತ್ತೆಯಾದ ಮರಿಗಳು 15-20 ದಿನಗಳ ಅವಧಿಯದಾಗಿವೆ ಎಂದು ಹೇಳಲಾಗಿದೆ.
ಚಾಮರಾಜನಗರ : ಚಿರತೆಯೊಂದು ತೋಟದ ಮನೆಗಳ ಸಮೀಪವೇ ಎರಡು ಮರಿಗಳನ್ನು ಹಾಕಿದೆ. ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಡುವ ಚಾಮರಾಜನಗರ ತಾಲೂಕಿನ ಕಟ್ನವಾಡಿ ಗ್ರಾಮದಲ್ಲಿ ಚಿರತೆ ಮರಿಗಳು ಪತ್ತೆಯಾಗಿವೆ.
ಕಟ್ನವಾಡಿ ಗ್ರಾಮದ ಗುರು ಎಂಬವರು ಕಬ್ಬಿನ ಫಸಲನ್ನು ಕಟಾವು ಮಾಡುವಾಗ ಈ ಚಿರತೆ ಮರಿಗಳು ಪತ್ತೆಯಾಗಿವೆ. ಪತ್ತೆಯಾದ ಮರಿಗಳು 15-20 ದಿನಗಳ ಅವಧಿಯದಾಗಿವೆ ಎಂದು ಹೇಳಲಾಗಿದೆ. ವಿಚಾರ ತಿಳಿದ ಚಾಮರಾಜನಗರ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಚಿರತೆ ಮರಿಗಳನ್ನು ಜಮೀನಿನಲ್ಲೇ ಬಿಟ್ಟು ನಿಗಾ ಇಟ್ಟಿದ್ದಾರೆ.
ಇದನ್ನೂ ಓದಿ : Basavaraj Bommai : ಸಚಿವ ಸಂಪುಟ ವಿಸ್ತರಣೆಗೆ ಸಿಗುತ್ತಾ ಗ್ರೀನ್ ಸಿಗ್ನಲ್ : ಇಂದು ದೆಹಲಿಗೆ ಹೊರಟ ಸಿಎಂ!
ಚಿರತೆ ಮರಿ ಹಾಕಿರುವ ಸ್ಥಳದಿಂದ 70-100 ಮೀ. ಅಂತರದಲ್ಲೇ ತೋಟದ ಮನೆಗಳು, ಜನರ ಓಡಾಟ ಹೆಚ್ಚಾಗಿದೆ. ಈ ಪ್ರದೇಶದಲ್ಲಿ ಮರಿಗಳನ್ನು ಹಾಕಿದ ಬಳಿಕವೂ ಚಿರತೆ ಜನರಿಗೆ ಕಾಣದಿರುವುದು ನಿಜಕ್ಕೂ ಆಶ್ಚರ್ಯ. ತಾಯಿ ಚಿರತೆ ಮರಿಗಳನ್ನು ಕರೆದೊಯ್ಯಲಿದೆ ಎಂದು ಅರಣ್ಯ ಇಲಾಖೆಯು ಕ್ಯಾಮರಾಗಳನ್ನು ಅಳವಡಿಸಿ ನಿಗಾ ಇಟ್ಟಿದೆ. ಮರಿಗಳು ಪತ್ತೆಯಾದ ಬಳಿಕ ರೈತರು ಮರಿಗಳೊಟ್ಟಿಗೆ ಫೋಟೋ ಕ್ಲಿಕ್ಲಿಸಿಕೊಂಡು ಸಂಭ್ರಮಿಸಿದ್ದಾರೆ. ಈ ಫೋಟ್ಗಳು ಕೂಡಾ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ : ಜಮೀನಿನಲ್ಲಿದ್ದ ಕುರುಡನ ಮೇಲೆ ಕಾಡಾನೆ ದಾಳಿ- ಕೈ-ಕಾಲು ಮುರಿತ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.