ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಓಜಿ ಕುಪ್ಪಂ ಗ್ಯಾಂಗ್ ಕಳ್ಳರ ಬಂಧನ
Robbers arrested: ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಓಜಿ ಕುಪ್ಪಂ ಗ್ಯಾಂಗ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಗಮನ ಬೇರೆಡೆ ಸೆಳೆದು ಕಳ್ಳತನ (theft) ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಲಾಗಿದೆ.
ಕುಖ್ಯಾತ ಓಜಿ ಕುಪ್ಪಂ ಗ್ಯಾಂಗ್:
ಗಿರಿ ಕುಮಾರ್ ಹಾಗೂ ಷಣ್ಮುಗಂ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಇವರು ಕುಖ್ಯಾತ ಓಜಿ ಕುಪ್ಪಂ ಗ್ಯಾಂಗ್ ಗೆ (OG Kuppam Gang) ಸೇರಿದವರು ಎಂದು ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಸರ್ಕಾರಿ ಬಸ್ ಅಪಘಾತ: ಇಬ್ಬರು ಸಾವು, ನಿರ್ವಾಹಕ ಸೇರಿ 8 ಜನರಿಗೆ ಗಾಯ
ಮನೆ ಕೆಲಸ ಮಾಡಿಸಲು ಬ್ಯಾಂಕ್ ನಿಂದ ನಾಲ್ಕು ಲಕ್ಷ ಡ್ರಾ ಮಾಡಿ ಬರುತಿದ್ದವರನ್ನ ಹಿಂಬಾಲಿಸಿ ದರೋಡೆ (Robbery) ಮಾಡಿದ್ದರು. ಈ ಸಂಬಂಧ ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಬ್ಯಾಕ್ ಟೂ ಬ್ಯಾಕ್ ಮೂರು ಪ್ರಕರಣ:
ಇವರ ವಿರುದ್ಧ ಕೊತ್ತನೂರು ಠಾಣೆ ವ್ಯಾಪ್ತಿ ಬ್ಯಾಕ್ ಟೂ ಬ್ಯಾಕ್ ಮೂರು ಪ್ರಕರಣ ದಾಖಲಾಗಿದ್ದವು. ಈ ಹಿನ್ನೆಲೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.
ರೆಡ್ ಆ್ಯಂಡ್ ಆಗಿ ಸಿಕ್ಕಿ ಬಿದ್ದ ಗ್ಯಾಂಗ್:
ಇಂದ್ರ ನಗರದಲ್ಲಿ ದರೋಡೆಗೆ ಹೊಂಚು ಹಾಕಿ ಬ್ಯಾಂಕ್ ಮುಂದೆ ಕಾಯುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೊತ್ತನೂರು ಠಾಣೆ ಪೊಲೀಸರು, ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಗಮನ ಬೇರೆಡೆ ಸೆಳೆದು ಕಳ್ಳತನ:
ಬೆಂಗಳೂರು, ಕೋಲಾರ ಸೇರಿ ಆರೋಪಿಗಳ ಮೇಲೆ ಏಳು ಪ್ರಕರಣಗಳಿವೆ. ಕೊತ್ತನೂರು, ಅಮೃತಹಳ್ಳಿ, ಯಲಹಂಕ, ಮಾರತ್ತಹಳ್ಳಿ ಸೇರಿ ಹಲವು ಠಾಣೆ ವ್ಯಾಪ್ತಿಯಲ್ಲಿ ದರೋಡೆ ಮಾಡಿದ್ದಾರೆ.
ಬ್ಯಾಂಕ್ ಬಳಿ ಹೊಂಚು ಹಾಕಿ ಕಾದು ಹಣ ಡ್ರಾ ಮಡಿಕೊಂಡು ಬರುವವರನ್ನು ಹಿಂಬಾಲಿಸುತ್ತಿದ್ದ ಈ ಗ್ಯಾಂಗ್, ಅವರ ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ದರೋಡೆ ಮಾಡುತ್ತಿತ್ತು.
ಆರೋಪಿಗಳಿಂದ ನಾಲ್ಕು ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ವಿದೇಶಿ ಕರೆನ್ಸಿ ಕಳ್ಳ ಸಾಗಾಟ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬಂಧನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.