ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆ : ಮಾದಪ್ಪನ ರಥೋತ್ಸವಕ್ಕೆ ಹರಿದು ಬಂದ ಭಕ್ತಸಾಗರ
ಚಾಮರಾಜನಗರ ಜಿಲ್ಲೆಯ ಮಲೆ ಮಾದೇಶ್ವರ ಬೆಟ್ಟದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಯುಗಾದಿ ಜಾತ್ರಾ ಮಹೋತ್ಸವ ನೆರವೇರಿತು.
ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾದಪ್ಪನ ರಥೋತ್ಸವ ವಿಜೃಂಭಣೆಯಿಂದ ಮಂಗಳವಾರ ಬೆಳಿಗ್ಗೆ ನಡೆಯಿತು.
ಇದನ್ನು ಓದಿ :Solar Eclipse : ಅಪರೂಪದ ಸಂಪೂರ್ಣ ಸೂರ್ಯಗ್ರಹಣ : ಕಣ್ತುಂಬಿಕೊಂಡ ಉತ್ತರ ಅಮೆರಿಕ ನಿವಾಸಿಗಳು
ಮಂಗಳವಾರ ಬೆಳಿಗ್ಗೆ 7.30 ರಿಂದ 9:30 ನಡುವಿನ ಶುಭ ಮಹೂರ್ತದಲ್ಲಿ ಮಾದಪ್ಪನ ತೇರನ್ನು ಎಳೆಯಲಾಯಿತು.
ಎಪ್ರಿಲ್ 6ರಂದು ಜಾತ್ರೆಗೆ ಚಾಲನೆ ನೀಡಲಾಗಿತ್ತು. ನಾಲ್ಕು ದಿನಗಳ ಯುಗಾದಿ ಜಾತ್ರೆಗೆ ರಥೋತ್ಸವದೊಂದಿಗೆ ತೆರೆ ಬಿತ್ತಿದೆ.
ಪ್ರತಿ ವರ್ಷವೂ ಈ ಜಾತ್ರೆಗೆ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಯವರು ಹೊರ ರಾಜ್ಯದವರು ಕೂಡ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅದೇ ರೀತಿ ಈ ವರ್ಷವೂ ರಥೋತ್ಸವಕ್ಕೆ ಇಡೀ ಭಕ್ತ ಸಾಗರವೇ ಸಾಕ್ಷಿ ಆಯಿತು.
ಉಘೇ ಉಘೇ ಮಾದಪ್ಪ, ಮಾಯ್ಕಾರ ಎಂಬ ಎಂಬ ಘೋಷಣೆಗಳು ರಥೋತ್ಸವದ ಸಂದರ್ಭದಲ್ಲಿ ಮುಗಿಲು ಮುಟ್ಟುವಂತಿದ್ದವು.
ಈ ಯುಗಾದಿ ಜಾತ್ರಾ ಮಹೋತ್ಸವದಲ್ಲಿ ಬೇಡಗಂಪಣ ಸಮುದಾಯದ ಸಂಪ್ರದಾಯದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು, ಸಮುದಾಯದ 101 ಹೆಣ್ಣು ಮಕ್ಕಳ ಬೆಲ್ಲದ ಆರತಿಯೊಂದಿಗೆ, ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತತ್ವದಲ್ಲಿ ಮಹದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಬಿಳಿ ಆನೆ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.
ಇದನ್ನು ಓದಿ : ಇಸ್ರೇಲ್-ಗಾಜಾ ಯುದ್ಧಕ್ಕ ಇಂದಿಗೆ 6 ತಿಂಗಳು : ಇಲ್ಲಿಯವೆರೆಗೆ 30 ಸಾವಿರಕ್ಕೂ ಅಧಿಕ ಸಾವು
ರಥೋತ್ಸವದ ಮೊದಲು ರಥದ ಮುಂಭಾಗದಲ್ಲಿ ನಿಂತಿದ್ದ ಹೆಣ್ಣು ಮಕ್ಕಳು ಸ್ವಾಮಿಗೆ ಬೆಲ್ಲದ ಆರತಿಯನ್ನು ಬೆಳಗಿದರು. ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.