Banglore : ಬೆಂಗಳೂರಿನ ಜಂಕ್ಷನ್‌ಗಳ ಸೌಂದರ್ಯೀಕರಣ ಕಾಮಗಾರಿಗಳು ನಡೆಯುತ್ತಿದೆ. ಬಿಬಿಎಂಪಿ ಮೇಲ್ಸೇತುವೆ ಕೆಳಗೆ ನಾಗರಿಕರಿಗೆ ಹಲವು ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಫ್ಲೈ ಓವರ್ ಕೆಳಭಾಗಲ್ಲಿ ಹೆಚ್ಚಿನ ಜಾಗವಿದೆ. ಇದು ಜನರಿಗೆ ಉಪಯೋಗವಾಗಲಿ ಅನ್ನೋ ಪ್ಲಾನ್ ಪಾಲಿಕೆಯದ್ದು, ಆದರೆ ಇದು ವೆಸ್ಟ್ ಅಂತಿದ್ದಾರೆ ಜನರು. 


COMMERCIAL BREAK
SCROLL TO CONTINUE READING

ಈಗಾಗಲೇ ಶಿವಾನಂದ ಸರ್ಕಲ್ ಬಳಿಯ ಫ್ಲೈ ಓವರ್ ಕೆಳಗೆ ಕಾಮಗಾರಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ನಗರದಲ್ಲಿರುವ ಬಹುತೇಕ ಮೇಲ್ಸೇತುವೆ ಕೆಳಗೆ ಹೈಟೆಕ್ ಸೌಲಭ್ಯ ಲಭ್ಯವಾಗುವಂತೆ ಯೋಜನೆ ರೂಪಿಸಲಾಗಿದೆ.‌‌ಜೊತೆಗೆ ಸುರಕ್ಷತೆಗಾಗಿ ಗ್ರಿಲ್‌ ಅಳವಡಿಸಲಾಗುತ್ತದೆ. ರಾಜ್ಯ ಸರ್ಕಾರದ ಅಮೃತ ನಗರೋತ್ಥಾನ ಯೋಜನೆಯಡಿ ಬಿಬಿಎಂಪಿಯ ಯೋಜನಾ ವಿಭಾಗದ ವತಿಯಿಂದ ಮೇಲ್ಸೇತುವೆ ಸೇರಿದಂತೆ ನಾಲ್ಕು ಜಂಕ್ಷನ್‌ಗಳಲ್ಲಿ ₹10.45 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ.


ಇದನ್ನೂ ಓದಿ-ನಮ್ಮಿಂದ ತಪ್ಪಾಗಿದೆ..! ಬಿಜೆಪಿಯಲ್ಲೂ ಹೊಂದಾಣಿಕೆ ರಾಜಕಾರಣ ಇದೆ


ಪಬ್ಲಿಕ್‌ ಪ್ಲಾಜಾದ ವಿಶೇಷತೆ?
 1. ಕುಳಿತುಕೊಳ್ಳಲು ಆಸನ, ಕುಡಿಯುವ ನೀರಿನ‌ ವ್ಯವಸ್ಥೆ
 2. ಮೊಬೈಲ್‌ ಚಾರ್ಚಿಂಗ್‌, ಓದಲು ಸ್ಥಳಾವಕಾಶ ಮಾಡಲಾಗುತ್ತೆ
 3.   ಮಕ್ಕಳ ಆಟದ ತಾಣ, ಅಲಂಕಾರಿಕ ಗಿಡ ನೆಟ್ಟು ಪೋಷಣೆ
 4.  ಹೈಟೆಕ್‌ ಶೌಚಾಲಯ, ಆಟೊರಿಕ್ಷಾ ಪಿಕ್‌ಅಪ್‌ ಝೋನ್‌ 
 5. ಝೀಬ್ರಾ ಕ್ರಾಸಿಂಗ್‌ ಪಾದಚಾರಿ ಸಿಗ್ನಲ್ ರ‍್ಯಾಂಪ್‌


ಈ ಪಬ್ಲಿಕ್ ಪ್ಲಾಜ್ ದಲ್ಲಿ ಜನರಿಗೆ ಕುಳಿತುಕೊಳ್ಳಲು ಆಸನ ಹಾಗೂ ಕುಡಿಯುವ ನೀರಿನ‌ ವ್ಯವಸ್ಥೆ. ಜೊತೆಗೆ ಮೊಬೈಲ್‌ ಚಾರ್ಚಿಂಗ್‌, ಓದಲು ಸ್ಥಳಾವಕಾಶ ಕಲ್ಪಿಸಲಾಗುತ್ತೆ. ಮಕ್ಕಳಿಗೆ ಆಟವಾಡಲು ವ್ಯವಸ್ಥೆ, ಹಾಗೆಯೇ ಅಲಂಕಾರಿಕ ಗಿಡ ನೆಟ್ಟು ಪೋಷಣೆ ಮಾಡಲಾಗುತ್ತೆ. ಹೈಟೆಕ್‌ ಶೌಚಾಲಯ ಸೌಲಭ್ಯ, ಮತ್ತು ಆಟೊರಿಕ್ಷಾ ಪಿಕ್‌ಅಪ್‌ ಝೋನ್‌ ಜೊತೆಗೆ ಝೀಬ್ರಾ ಕ್ರಾಸಿಂಗ್‌ ಪಾದಚಾರಿ ಸಿಗ್ನಲ್ ರ‍್ಯಾಂಪ್‌ ಕೂಡ ಮಡಲಾಗುತ್ತೆ.


ಇದನ್ನೂ ಓದಿ-Bommai: ಕಾಂಗ್ರೆಸ್ ಸರ್ಕಾರ ಜವಾಬ್ದಾರಿ ಇಲ್ಲದ ಸರ್ಕಾರ : ಮಾಜಿ ಸಿಎಂ ಬೊಮ್ಮಾಯಿ‌


ಕೆಲವೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಬಿಬಿಎಂಪಿ ಪ್ಲಾನ್ ಮಾಡಿದೆ. ಆದರೆ ಇದು ದುಂದು ವೆಚ್ಚ, ಜನರಿಗೆ ಯಾವುದೇ ಪ್ರಯೋಜನವಿಲ್ಲ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌  ಆನಂದರಾವ್‌ ಸರ್ಕಲ್, ಬಿಎಚ್‌ಇಲ್‌ ವೃತ್ತ, ಮೈಸೂರು ರಸ್ತೆಯ ಜಂಕ್ಷನ್‌ಗಳನ್ನೂ ವಿಭಿನ್ನ ರೀತಿಯಲ್ಲಿ ಅಭಿವೃದ್ಧಿಗೆ ಸದ್ಯದಲ್ಲಿಯೇ ಆರಂಭವಾಗಲಿದೆಯಂತೆ..ನೂರಾರು ಸಮಸ್ಯೆಯಿದ್ದು, ಅವಗಳನ್ನ ಬಿಬಿಎಂಪಿ ಸರಿಪಡಿಸಬೇಕಿದೆ.‌‌ ಅದನ್ನ‌ ಬಿಟ್ಟು ಅನಾವಶ್ಯಕ ಕಾಮಗಾರಿಯಿಂದ ಈ ರೀತಿ‌ ನಮ್ಮ‌ ಹಣ ವ್ಯರ್ಥ ಮಾಡುವುದು ಸರಿಯಲ್ಲ‌ ಅಂತಿದ್ದಾರೆ ಜನ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.