ಬೆಂಗಳೂರು: ಇತ್ತೀಚೆಗಷ್ಟೇ ನಿಧನರಾದ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಜಾಫರ್ ಶರೀಫ್ ಅವರ ಕುಟುಂಬವನ್ನು ಭೇಟಿ ಮಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಾಂತ್ವನ ಹೇಳಿದರು.


COMMERCIAL BREAK
SCROLL TO CONTINUE READING

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಜಾಫರ್ ಶರೀಫ್(85) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದ ಜಾಫರ್ ಶರೀಫ್ ಅವರ ಬೆಂಗಳೂರಿನಲ್ಲಿರುವ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಅಗಲಿದ ನಾಯಕನ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.



ಅಂದಿನ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿ ಸಚಿವ ಸಂಪುಟದಲ್ಲಿ ಜಾಫರ್ ಶರೀಫ್ ಅವರು 2 ವರ್ಷಗಳ ಕಾಲ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಹಾಗೂ ಪಿ.ವಿ.ನರಸಿಂಹ ರಾವ್ ಸಚಿವ ಸಂಪುಟದಲ್ಲಿ 5 ವರ್ಷಗಳ ರೈಲ್ವೇ ಸಚಿವರಾಗಿ ದೇಶದ ರೈಲ್ವೇ ಇಲಾಖೆಗೆ ಹೊಸ ದಿಕ್ಕು ತೋರಿಸಿದ್ದರು. ರೈಲ್ವೇ ಬಗ್ಗೆ ಸಾಕಷ್ಟು ತಿಳುವಳಿಕೆ ಹೊಂದಿದ್ದ ಶರೀಫ್ ಅವರು, ಮೀಟರ್ ಗೇಜ್, ನ್ಯಾರೋಗೇಜ್ ಹಳಿಗಳನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸುವ ಯೂನಿಗೇಜ್ ನೀತಿ ಜಾರಿಗೊಳಿಸಿ ದೇಶದ್ಯಂತ ರೈಲ್ವೆ ಸೇವೆಯಲ್ಲಿ ಮಹತ್ವದ ಬೆಳವಣಿಗೆಗೆ ಕಾರಣರಾಗಿದ್ದರು.