ಬೆಂಗಳೂರು: ಇಂದು ಬೆಂಗಳೂರಿನ  ಮುರುಗೇಶಪಾಳ್ಯದಲ್ಲಿ ಬಿಜೆಪಿ ಪರಿವರ್ತನೆ ಯಾತ್ರೆ ನಡೆಯಲಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12ಗಂಟೆಗೆ  ರಾಜನಾಥ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಆರ್. ಅಶೋಕ್, ಪಿ.ಸಿ. ಮೋಹನ್ ಮತ್ತಿತರ ನಾಯಕರು ಇಂದಿನ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.


COMMERCIAL BREAK
SCROLL TO CONTINUE READING

ಹಳೇ ವಿಮಾನ ನಿಲ್ದಾಣ ರಸ್ತೆಯ ವಿಶ್ವೇಶ್ವರಯ್ಯ ಆಟದ ಮೈದಾನದಲ್ಲಿ ಪರಿವರ್ತನಾ ಯಾತ್ರೆಯ ಬೃಹತ್ ಸಾರ್ವಜನಿಕ ಸಮಾವೇಶವನ್ನು ಬಿಜೆಪಿ ಆಯೋಜಿಸಿದೆ. ಬಿಜೆಪಿ ಈ ಸಮಾರಂಭಕ್ಕೆ 8ವಿಧಾನ ಸಭೆ ಕ್ಷೇತ್ರದ ಕಾರ್ಯಕರ್ತರನ್ನು ಕರೆಸುತ್ತಿದೆ. ಮಹದೇವಪುರ, ಸಿ.ವಿ.ರಾಮನ್ ನಗರದಲ್ಲಿ ಮಾತ್ರ ಬಿಜೆಪಿ ಶಾಸಕರನ್ನು ಹೊಂದಿದೆ. ಕೇವಲ ಎರಡು ಕ್ಷೇತ್ರದಲ್ಲಿ ಮಾತ್ರ ಶಾಸಕರನ್ನು ಹೊಂದಿರುವ ಬಿಜೆಪಿ. ಶಾಸಕರು ‌ಕಡಿಮೆ ಇರುವ ಪ್ರದೇಶಗಳಲ್ಲಿ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿದೆ. 


ನ.2 ರಂದು ಆದ ವೈಫಲ್ಯ, ಕಳೆದುಕೊಂಡ ಘನತೆಯನ್ನು ಮತ್ತೆ ಸಾಧಿಸಲು ಬಿಜೆಪಿ ಪ್ಲಾನ್ ಮಾಡಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮೂರು ಕಡೆ ಪರಿವರ್ತನ ಯಾತ್ರೆ ನಡೆಸುತ್ತಿದೆ. ಡಿ.10ರಂದು ಪುಟ್ಟೇನಗಳ್ಳಿಯಲ್ಲಿ ಪರಿವರ್ತನ ಯಾತ್ರೆ ನಡೆಸಿದ್ದ ಬಿಜೆಪಿ, ಇಂದು ಮುರುಗೇಶ್ ಪಾಳ್ಯದಲ್ಲಿ ಪರಿವರ್ತನ ಯಾತ್ರೆ ನಡೆಸುತ್ತಿದೆ. ಇಂದಿನ ಪರಿವರ್ತನಾ ಯಾತ್ರೆಯಲ್ಲಿ ಸರ್ವಜ್ಞ ನಗರ, ಮಹದೇವಪುರ, ಪುಲಿಕೇಶಿ ನಗರ, ಸಿ.ವಿ.ರಾಮನ್ ನಗರ, ಶಾಂತಿನಗರ, ಚಾಮರಾಜಪೇಟೆ, ಗಾಂಧಿನಗರ, ಕೆ.ಆರ್.ಪುರ ಕ್ಷೇತ್ರದ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. 


ಏರ್ಪೋರ್ಟ್ ರಸ್ತೆಯುದ್ದಕ್ಕೂ ಫ್ಲೆಕ್ಸ್, ಬ್ಯಾನರ್ಗಳ ಹಾವಳಿ


ಇಂದು ಬಿಜೆಪಿ ಪರಿವರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಹೆಚ್ಎಎಲ್ ಏರ್ ಪೊರ್ಟ್ ರಸ್ತೆಯುದ್ದಕ್ಕೂ ಫ್ಲೆಕ್ಸ್, ಬ್ಯಾನರ್ ಗಳನ್ನು ಹಾಕಲಾಗಿದೆ. ಎಲ್ಲಾ ಕಡೆಗಳಲ್ಲೂ ಪರಿವರ್ತನಾ ಸಮಾವೇಶಕ್ಕೆ ಶುಭಕೋರುವ, ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ.