ಬೆಂಗಳೂರು : ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಲು ಶಪಥ ಮಾಡಿದೆ, ಈ ನಡುವೆ ರಾಜ್ಯಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಜಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಉಪಹಾರಕ್ಕೆ ಹೋಗಿರುವ ಹಿಂದೆ ದೊಡ್ಡ ರಾಜಕೀಯ ಸಂದೇಶ ನೀಡಿದರು.


COMMERCIAL BREAK
SCROLL TO CONTINUE READING

ಯಡಿಯೂರಪ್ಪ ರಾಜಕೀಯ ಸೈಡ್ ಲೈನ್! ಪರ್ಯಾಯ ಅವರ ಪುತ್ರ?


ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ರಾಜೀನಾಮೆ ನೀಡಿದ ದಿನದಿಂದ ವಿಪಕ್ಷಗಳು ಬಿಎಸ್ ವೈ ಅವರನ್ನ ರಾಜಕೀಯವಾಗಿ ಸೈಡ್ ಲೈನ್ ಮಾಡಲಾಗಿದೆ ಎಂದು ಆರೋಪ ಮಾಡುತ್ತಲೇ ಇದ್ದಾರೆ, ಈ ಕಾರಣದಿಂದ ಲಿಂಗಾಯತ ಸಮುದಾಯದ ದೊಡ್ಡ ನಾಯಕ ಎಂದು ಗುರುತಿಸಿಕೊಂಡಿರುವ ಯಡಿಯೂರಪ್ಪ ಅವರಿಗೆ ಹಾಗೂ ಪಕ್ಷಕ್ಕೆ ಹಿನ್ನಡೆ ಆಗಿತ್ತು. ಬಿಜೆಪಿ ಪಕ್ಷದಲ್ಲಿ ಮಾಸ್ ಲೀಡರ್ ಗಳ ಪೈಕಿ ಬಿಎಸ್ ವೈ ಅಗ್ರರು ಎಂದರೆ ತಪ್ಪಿಲ್ಲ, ಚುನಾವಣೆ ಹೊಸ್ತಿಲಲ್ಲಿ ಡ್ಯಾಮೇಜ್ ಆಗುವ ಹಿನ್ನಲೆಯಲ್ಲಿ, ಡ್ಯಾಮೇಜ್ ಕಂಟ್ರೋಲ್ ಮಾಡುವುದಕ್ಕೆ ಚಾಣಕ್ಯ ಶಾ ಮುಂದಾದರು.


ಇದನ್ನೂ ಓದಿ : Go Back Somanna : ಸೋಮಣ್ಣ ಅಸೌಜನ್ಯ ನಡತೆಗೆ ಸಿಟ್ಟಾದ ಗ್ರಾಮಸ್ಥರು : ಮಾತು ತಪ್ಪಿದರೆ ಗೋ ಬ್ಯಾಕ್ ಸೋಮಣ್ಣ ಎಚ್ಚರಿಕೆ!!


ಬಿ ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಉಪಹಾರಕ್ಕೆ ಬಂದ ಅಮಿತ್ ಶಾ, ವಿಬ್ಬಿನ್ನ ನಡೆ ಬಿಜೆಪಿ ಪಕ್ಷದಲ್ಲಿನ ಕೆಲ ನಾಯಕರಿಗೆ ಹಾಗೂ ವಿರೋಧ ಪಕ್ಷಗಳಿಗೆ ಉಬ್ಬೆರಿಸುವ ರೀತಿ ಆಗಿದೆ.


ಸಹಜವಾಗಿ ಕೇಂದ್ರ ಸಚಿವರೊಬ್ಬರೂ ರಾಜ್ಯ ನಾಯಕರ ನಿವಾಸಕ್ಕೆ ಆಗಮಿಸದಾಗ ಬರಮಾಡಿಕೊಳ್ಳುವುದು ಪದ್ಧತಿ, ಅಮಿತ್ ಶಾ ಅವರಿಗೆ ಸ್ವಾಗತಕ್ಕೆ ಹೂ ಗುಚ್ಚ ಹಿಡಿದು ಬಿ ಎಸ್ ವೈ ಸಜ್ಜಗಿದ್ದರು, ಆಗ ಕಾವೇರಿ ನಿವಾಸಕ್ಕೆ ಆಗಮಿಸಿದ ಅಮಿತ್ ಶಾ ಬಿ ಎಸ್ ವೈ ಪುತ್ರ ವಿಜಯೇಂದ್ರ ಅವರಿಗೆ ಹೂ ಗುಚ್ಚ ನೀಡಲು ಹೇಳಿ ಬಿ ವೈ ವಿಜಯೇಂದ್ರ ಸ್ವಾಗತ ಮಾಡಲಿ ಎಂದು ಹೇಳಿದರು. ಸಂತಸದಿಂದ ಹೂ ನೀಡಿ ವಿಜಯೇಂದ್ರ ಸ್ವಾಗತ ಮಾಡಿದರು. ಆಗ ಬೆನ್ನು ತಟ್ಟಿದ ಶಾ ಆದರವನ್ನು ಸ್ವೀಕರಿಸಿದರು.


ಸ್ವಾಗತ ವಿಜಯೇಂದ್ರ ಮಾಡಲಿ ಎಂಬ ಮಾತಲ್ಲಿ ಅಡಗಿದೆ ರಾಜಕೀಯ ಸಂದೇಶ!


ಇನ್ನು ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಆಕಾಂಕ್ಷಿ ಆಗಿರುವ ಬಿ ವೈ ವಿಜಯೇಂದ್ರ ಹೆಚ್ಚು ಕಡಿಮೆ ಬಿ ಫಾರಂ ನೀಡುವುದು ನಿಶ್ಚಯ ಆಗಿದಂತಿದೆ. ಇದರ ಜೊತೆಗೆ ಚುನಾವಣೆ ರಾಜಕೀಯದಿಂದ ನಿವೃತ್ತ ಪಡೆದ ಯಡಿಯೂರಪ್ಪ ಅವರನ್ನು ಪಕ್ಷ ಕಡೆಗಣಿಸಿಲ್ಲ. ಇವರ ಪರ್ಯಾಯವಾಗಿ ಪುತ್ರ ರಾಜಕೀಯವನ್ನು ಮುನ್ನಡೆಸುತ್ತಾರೆ ಎಂಬ ಸ್ಪಷ್ಟ ಸಂದೇಶ ನೀಡಲಾಗಿದೆ.


ಒಟ್ಟಿನಲ್ಲಿ ರಾಜಕೀಯವಾಗಿ ಚರ್ಚೆ ಆಗುತ್ತಿದ್ದ ಯಡಿಯೂರಪ್ಪ ಕಡೆಗಣನೆ ವಿಚಾರಕ್ಕೆ ಇಂದು ಸ್ಪಷ್ಟ ಉತ್ತರ ಸಿಕ್ಕಿದೆ, ಆದರೆ ಲಿಂಗಾಯತ ಸಮುದಾಯದ ನಾಯಕ ಆಗಿದ್ದ ಯಡಿಯೂರಪ್ಪ ಬದಲಿಗೆ ಮತದಾನ ಪ್ರಭು ವಿಜಯೇಂದ್ರ ಅವರನ್ನ ಒಪ್ಪುತ್ತಾರ ಎಂದು ಕಾದುನೋಡಬೇಕಿದೆ.


ಇದನ್ನೂ ಓದಿ : SC ST Reservation: ಎಸ್‌ಸಿ, ಎಸ್‌ಟಿ ಮೀಸಲಾತಿ ವಿಳಂಬ, ರಾಜಭವನ ಚಲೋಗೆ ಯತ್ನ : ಕಾಂಗ್ರೆಸ್ ನಾಯಕರು ಪೊಲೀಸ್ ವಶಕ್ಕೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.