ಬೆಂಗಳೂರು : ಬೆಂಗಳೂರು ಸಂಚಾರ ದಟ್ಟಣೆ ಕಡಿಮೆ ಗೊಳಿಸುವ ಉದ್ದೇಶದಿಂದ ನಿನ್ನೆ ಹಾಗೂ ಇಂದು ನಡೆದ ಸಭೆಯಲ್ಲಿ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯ ಸರ್ಕಾರಕ್ಕೆ ಹಲವು ಸಲಹೆಗಳನ್ನ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ನಗರದ ಖಾಸಗಿ ಹೋಟೆಲ್ ನಲ್ಲಿ ಎರಡು ದಿನಗಳು ನಡೆದ "Manthan" ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಸಚಿವ ಗಡ್ಕರಿ, ರಾಜ್ಯ ಸರ್ಕಾರ ಜತೆ ನಡೆಸಿದ "Bengaluru de-congestion" ಸಭೆ ಕುರಿತು ವಿವರಣೆ ನೀಡಿದರು.


ಇದನ್ನೂ ಓದಿ : Nitin Gadkari : ಮೈಸೂರು ಹೆದ್ದಾರಿ-ಪೀಣ್ಯ ಮೇಲ್ಸೇತುವೆ ದೋಷ : ತಪ್ಪು ಒಪ್ಪಿಕೊಂಡ ಗಡ್ಕರಿ


ಬಹು ಅಂತಸ್ತಿನ ರಸ್ತೆ ನಿರ್ಮಾಣ:


ಈ ಸಭೆಯಲ್ಲಿ ರಾಜ್ಯ ಸರ್ಕಾರ ಬೆಂಗಳೂರು ನೈಜ್ ಸಮಸ್ಯೆಗಳ ವಿವರಣೆ ನೀಡಿತು, ಬೆಂಗಳೂರಿನಲ್ಲಿ ಜನ ಸಂದಣಿ ಹೆಚ್ಚುತ್ತಲೇ ಇದೆ. ನಗರದಲ್ಲಿ ರಸ್ತೆ ನಿರ್ಮಾಣಕ್ಕೆ ಭೂ ಒತ್ತುವರಿ ಮಾಡುವುದು ಅಸಾಧ್ಯ ಎಂದು ತಿಳಿಸಿತು. ಇದಕ್ಕೆ ಸಲಹೆ ನೀಡಿದ ಸಚಿವ ಗಡ್ಕರಿ, ಇರುವ ರಸ್ತೆಯಲ್ಲೇ ಅಧುನಿಕ ತಂತ್ರಜ್ಞಾನ ಬಳಕೆಯಿಂದ ಹೆಚ್ಚು ಸಂಚಾರ ಮಾಡಲು ಮಾರ್ಗೋಪಾಯಗಳಿವೆ.ಮೂರು ಅಂತಸ್ತಿನ ಸಂಚಾರ ವ್ಯವಸ್ಥೆಗೆ ಅವಕಾಶವಿದೆ, ಕೆಳ ಅಂತಸ್ತಿನಲ್ಲಿ ನಗರದ ಪ್ರದೇಶದಲ್ಲಿ ಸುತ್ತಾಡುವ ವ್ಯವಸ್ಥೆ. ಕೆಳಹಂತದಲ್ಲಿ ಅಂತಸ್ತಿನಲ್ಲಿ short distance travel ವ್ಯವಸ್ಥೆ. ಮೊದಲ ಅಂತಸ್ತಿನಲ್ಲಿ  medium distance travel ವ್ಯವಸ್ಥೆ ಮಾಡಬೇಕು. ಎರಡನೇ ಅಂತಸ್ತಿನಲ್ಲಿ metro, ಸಂಚಾರ ವ್ಯವಸ್ಥೆ ಮಾಡಬೇಕು. ಈ ರೀತಿ ಸಂಚಾರ ವ್ಯವಸ್ಥೆ ಕಲ್ಪಿಸಬಹುದು ಎಂದು ಸಲಹೆ ನೀಡಿದರು.


ಸ್ಕೈ ಬಸ್ - ಟ್ರಾಲಿ ಬಸ್.. ಸಾರ್ವಜನಿಕ ಸಾರಿಗೆ ಅಭಿವೃದ್ಧಿ :


ಮುಖ್ಯವಾಗಿ ಸಚಿವ ಗಡ್ಕರಿ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನ ಬಳಪಡಿಸಿ ಎಂದು ಸಲಹೆ ನೀಡಿದ್ದು, ಇತರೆ ರಾಜ್ಯಗಳಲ್ಲಿ ಪರ್ಯಾಯ ಸಾರಿ ವ್ಯವಸ್ಥೆ ಉದಾಹರಣೆಗಳನ್ನ ನೀಡಿದರು.


ಪ್ರಯಾಣಿಕರಿಗೆ ಸುಲಭವಾಗಿ ಸಂಚಾರ ವ್ಯವಸ್ಥೆ ಸಿಗಬೇಕು, ಮುಂಬೈ ನಗರದಲ್ಲಿ ಉದ್ಯೋಗಿಗಳು ಕಚೇರಿಯಲ್ಲೇ,ಕುಳಿತ ಆನಲ್ ಲೈನ್ ಟಿಕೆಟ್ ಖರೀದಿಸುವ ವ್ಯವಸ್ಥೆ ಹೊದಗಿಸಲಾಗಿದೆ. ಈ ರೀತಿಯ ಹೊಸ ಚಿಂತನೆಗಳನ್ನು ನಗರದಲ್ಲಿ ಪ್ರಾರಂಭಿಸಬೇಕು. ವಿದ್ಯುತ್ ಚಾಲಿತ ಟ್ರಾಲಿ ಬಸ್ ಗಳನ್ನು ಪರಿಚಯ ಮಾಡಬೇಕು. ಕಡಿಮೆ ದರದಲ್ಲಿ- ಪರಿಸರ ಕಾಳಜಿಯೊಂದಿಗೆ ಏಕಕಾಲದಲ್ಲಿ ಅನೇಕ ಪ್ರಯಾಣ ಮಾಡಬಹುದು. ಎಂಬತ್ತಕ್ಕೂ ಹೆಚ್ಚು ಜನ ಪ್ರಯಾಣ ಮಾಡಬಹುದು, ಆದ್ದರಿಂದ ಟ್ರಾಲಿ ಬಸ್ ಗಳ ಬಗ್ಗೆ  ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು.


ಇದನ್ನೂ ಓದಿ : Kodi Shree : ದೇಶಾದ್ಯಂತ ಜಲಪ್ರಳಯ ಎದುರಾಗಲಿದೆ : ಕೋಡಿ ಶ್ರೀಗಳ ಭವಿಷ್ಯ


ಪರ್ಯಾಯ ರೂಪದಲ್ಲಿ ಸ್ಕೈ ಬಸ್ ಯೋಜನೆ ಜಾರಿ  ಸೂಳಿವು ನೀಡಿದ ಇವರು, ಸ್ಕೈ ಬಸ್ ಪರಿಚಯದ ಸಿಎಂ ಜೊತೆಗೆ ಗಡ್ಕರಿ ಮಹ್ವದ ಸಭೆ ನಡೆಸಿದ್ದಾರೆ. ವಾರಾಣಸಿ ಸೇರಿದಂತೆ ಹಲವು ನಗರಗಳಲ್ಲಿ ಸ್ಕೈ ಬಸ್ ಪ್ರಸ್ತಾಪವಿದೆ, ಇದನ್ನು ಬೆಂಗಳೂರಿಗೂ ವಿಸ್ತರಣೆ ಮಾಡಬಹುದು ಎಂದು ರಾಜ್ಯ ಸರ್ಕಾರಕ್ಕೆ ಆಹ್ವಾನ ನೀಡಲಾಗಿದೆ. ಜರ್ಮನಿ ಹಾಗೂ ಪ್ರಾನ್ಸ್ ನಲ್ಲಿ ತಯಾರಕರು ಯಶಸ್ವಿಯಾಗಿದ್ದಾರೆ. ಭಾರತದಲ್ಲಿ ಈ ವ್ಯವಸ್ಥೆ ಜಾರಿ ಆದ್ರೆ ಸಂಚಾರ ದಟ್ಟಣೆ ಕಡಿಮೆ ಆಗಲಿದೆ. ಮೂರು ತಿಂಗಳಲ್ಲಿ ಸ್ಕೈ ಬಸ್ ಕುರಿತಾದ ವರದಿ ನೀಡಲಿದ್ದಾರೆ ಎಂದು ಮಾಧ್ಯಮಗೋಷ್ಟಿಯಲ್ಲಿ ವಿವರಿಸಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.