ನವದೆಹಲಿ: ಹರಿಯಾಣದ ಪಿಂಜೋರ್ ನಲ್ಲಿರುವ ಹಿಂದೂಸ್ತಾನ್ ಮಶೀನ್ ಆಂಡ್ ಟೂಲ್ಸ್-HMT ಕಾರ್ಖಾನೆಗೆ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.


COMMERCIAL BREAK
SCROLL TO CONTINUE READING

ನವದೆಹಲಿಯಿಂದ ಮಧ್ಯಾಹ್ನದ ನಂತರ ಕಾರ್ಖಾನೆಗೆ ಭೇಟಿ ನೀಡಿದ ಸಚಿವರು, ಇಡೀ ಕಾರ್ಖಾನೆಯನ್ನು ಒಂದು ಸುತ್ತು ಹಾಕಿ ಉತ್ಪಾದನಾ ಚಟುವಟಿಕೆ ವೀಕ್ಷಿಸಿದರು ಹಾಗೂ ಯಂತ್ರಗಳ ಕಾರ್ಯಾಚರಣೆ ವೇಳೆಯಲ್ಲೇ ಉತ್ಪಾದನೆ ಕ್ಷಮತೆಯನ್ನು ಖುದ್ದು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು, ಹೆಜ್ಜೆ ಹೆಜ್ಜೆಗೂ ಅಧಿಕಾರಿಗಳಿಂದ ಮಾಹಿತಿ ಕೇಳಿ ತಿಳಿದುಕೊಂಡರು.


ಇದನ್ನೂ ಓದಿ: ಇವು ಭಗವಾನ್ ಶ್ರೀಕೃಷ್ಣನ ಅತ್ಯಂತ ಮೆಚ್ಚಿನ ರಾಶಿಗಳು: ಬೇಡಿದ ತಕ್ಷಣ ಅನಂತ ಸಿರಿ ಸಂಪತ್ತಿನ್ನೇ ಧಾರೆ ಎರೆಯುತ್ತಾನೆ ದೇವಕಿಸುತ


ಕಾರ್ಖಾನೆ ವೀಕ್ಷಣೆ ನಂತರ ಉನ್ನತ ಅಧಿಕಾರಿಗಳ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡ ಸಚಿವರು; ಕಾರ್ಖಾನೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.


ಕಾರ್ಖಾನೆ ಹೊಂದಿರುವ ಆಸ್ತಿಗಳು, ಆಸ್ತಿಗಳಿಗೆ ಸಂಬಂಧಪಟ್ಟ ಕೋರ್ಟ್ ವ್ಯಾಜ್ಯಗಳು, ಉದ್ಯೋಗಿಗಳ ಬಿಕ್ಕಟ್ಟುಗಳು ಇತ್ಯಾದಿ ಅಂಶಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು ಅಧಿಕಾರಿಗಳು. ಕಾರ್ಖಾನೆಯ ಸದ್ಯದ ಪರಿಸ್ಥಿತಿಯ ಬಗ್ಗೆ ಸಚಿವರ ಕಳವಳ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.


ಕಾರ್ಖಾನೆಯ ವಹಿವಾಟು, ಲಾಭ, ಸಾಲ, ಬಾಕಿ ಸೇರಿದಂತೆ ಹಣಕಾಸು ಸ್ಥಿತಿಗತಿಗಳ ಬಗ್ಗೆ ಅಂಕಿ ಅಂಶಗಳನ್ನು ಪಡೆದುಕೊಂಡ ಸಚಿವರು; ಕಾರ್ಖಾನೆಯ ನೌಕರರ ಜತೆ ಮಾತುಕತೆ, ಕಾರ್ಮಿಕರ ಯೂನಿಯನ್ ಮುಖಂಡರ ಜತೆ ಚರ್ಚೆ ನಡೆಸಿದರು.


ಇದನ್ನೂ ಓದಿ:ಜಾರಕಿಹೊಳಿ ಬ್ರದರ್ಸ್ ಮಣಿಸಲು ಲಕ್ಷ್ಮಣ ಸವದಿಗೆ ಒಲಿಯುತ್ತಾ ಕೆಪಿಸಿಸಿ ಪಟ್ಟ..!?


ಸಾರ್ವಜನಿಕ ಸ್ವಾಮ್ಯದ ಕಾರ್ಖಾನೆಯನ್ನು ಉಳಿಸಿ ಬೆಳೆಸುವ ಹೊಣೆ ಎಲ್ಲರದ್ದು. ಎಲ್ಲಾರೂ ಬದ್ಧತೆ, ಕ್ಷಮತೆಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳು, ಕಾರ್ಮಿಕರಿಗೆ ಕಿವಿಮಾತು ಹೇಳಿದ ಸಚಿವರು; ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತದ ಪರಿಕಲ್ಪನೆಯಡಿ ಕೆಲಸ ಮಾಡೋಣ ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್