ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಕೊರೊನಾ ಧೃಡ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೊರೊನಾ ಇರುವುದು ಧೃಢಪಟ್ಟಿದೆ.ಈಗ ಈ ವಿಷಯವನ್ನು ಸ್ವತಃ ಸಚಿವರೇ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೊರೊನಾ ಇರುವುದು ಧೃಢಪಟ್ಟಿದೆ.ಈಗ ಈ ವಿಷಯವನ್ನು ಸ್ವತಃ ಸಚಿವರೇ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.
'ಆತ್ಮೀಯರೆ ಕೋವಿಡ್ ಪರೀಕ್ಷೆಯಲ್ಲಿ ನನಗೆ ಸೋಂಕು ದೃಢಪಟ್ಟಿದೆ. ಯಾವುದೇ ರೋಗ ಲಕ್ಷಣಗಳು ಇರುವದಿಲ್ಲ. ವೈದ್ಯರ ಸಲಹೆಯಂತೆ ಹೋಮ್ ಕ್ವಾರಂಟೈನ್ ಆಗಿದ್ದೇನೆ' ಎಂದು ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ಈಗ ಕೊರೊನಾ ಪ್ರಕರಣ ಸಂಖ್ಯೆ 6,764,710 ಆಗಿದೆ, ಇದರಲ್ಲಿ 5,750,403 ಜನರ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. ಇನ್ನು ಮೃತಪಟ್ಟವರ ಸಂಖ್ಯೆ 104,651ಕ್ಕೆ ತಲುಪಿದೆ.