ಸೋನಿಯಾ, ರಾಹುಲ್ ಬೇಲ್ ಮೇಲೆ ಹೊರಗಿದ್ದಾರೆ ನೆನಪಿಡಿ: ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ
Minister Pralhad Joshi: ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, ಚುನಾವಣಾ ಬಾಂಡ್ ವಿಚಾರದಲ್ಲಿ ಕಾಂಗ್ರೆಸ್ ಸಾಚಾತನ ಪ್ರದರ್ಶನ ಮಾಡುತ್ತಿದೆ. ಆದರೆ, ಅದರ ಇಬ್ವರೂ ನೇತಾರರು ಬೇಲ್ ಮೇಲೆ ಹೊರಗಿದ್ದಾರೆ ಎಂದು ಪ್ರತ್ಯುತ್ತರ ಕೊಟ್ಟರು.
ಹುಬ್ಬಳ್ಳಿ: ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಬ್ವರೂ ಯಂಗ್ ಇಂಡಿಯಾ ಕೇಸ್ ನಲ್ಲಿ ಬೇಲ್ ಮೇಲಿದ್ದಾರೆ. ಇದನ್ನು ನೆನಪಿಟ್ಟುಕೊಳ್ಳಬೇಕು ನೀವು ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, ಚುನಾವಣಾ ಬಾಂಡ್ ವಿಚಾರದಲ್ಲಿ ಕಾಂಗ್ರೆಸ್ ಸಾಚಾತನ ಪ್ರದರ್ಶನ ಮಾಡುತ್ತಿದೆ. ಆದರೆ, ಅದರ ಇಬ್ವರೂ ನೇತಾರರು ಬೇಲ್ ಮೇಲೆ ಹೊರಗಿದ್ದಾರೆ ಎಂದು ಪ್ರತ್ಯುತ್ತರ ಕೊಟ್ಟರು.
ಇದನ್ನೂ ಓದಿ: ಇದು ಅನ್ನವೋ…? ಚಿನ್ನವೋ…? ವಿರಾಟ್ ಕೊಹ್ಲಿ ಸೇವಿಸುವ ಅಕ್ಕಿ ಬೆಲೆ 1 ಕೆಜಿಗೆ ಎಷ್ಟು ಗೊತ್ತಾ? ತಿಳಿದರೆ ಹೌಹಾರೋದು ಗ್ಯಾರಂಟಿ
ಕಾಂಗ್ರೆಸ್ ಸಾಚಾವೇ? ಯುಪಿಎ ಕಾಲದಲ್ಲಿ 12 ಲಕ್ಷ ಕೋಟಿ ಭ್ರಷ್ಟಾಚಾರ ಆಗಿದೆ. ಹಾಗಿದ್ದರೆ ಇವರು ತಮ್ಮ ಪಾರ್ಟಿಗೆ ಅದೆಷ್ಟು ಫಂಡ್ ಕಲೆಕ್ಟ್ ಮಾಡಿರಬೇಡ ಎಂದು ಜೋಶಿ ಪ್ರಶ್ನಿಸಿದರು.
ಚುನಾವಣಾ ಬಾಂಡ್ ವಿಚಾರದಲ್ಲಿ ಕಾಂಗ್ರೆಸ್ ಸಾಚಾತನ ತೋರಿಸುತ್ತಿದೆ. ನೀವೆಷ್ಟು ಸಾಚಾ ಎಂಬುದು ಜನಕ್ಕೆ ತಿಳಿದಿದೆ. ಕಾಂಗ್ರೆಸ್ ಪಕ್ಷಕ್ಕೆ 1600 ಕೋಟಿ ಬಂದಿದೆಯಲ್ಲ. ಅದು ಹೇಗೆ ಬಂತು? ಅದು ಎಲ್ಲೀದು ಹಾಗಾದ್ರೆ? ಒಂದೇ ರಾಜ್ಯದಲ್ಲಿ ಇರುವಂಥ ಟಿಎಂಸಿಗೆ ಫಂಡ್ ಬಂತು. ಇದೆಲ್ಲಾ ಎಲ್ಲಿಯದ್ದು? ಎಂದು ತಿರುಗೇಟು ನೀಡಿದರು.
ಪಾರ್ಟಿ ಫಂಡ್ ಎಂದು ನೀವು ತೆಗೆದುಕೊಂಡರೆ ಸಾಚಾತನ? ನಾವದನ್ನು ಬ್ಯಾಂಕ್ ಮೂಲಕ ಸಂದಾಯಕ್ಕೆ ಸುಧಾರಣೆ ಮಾಡಲು ಹೊರಟರೆ ತಪ್ಪೇ? ಎಂದು ಸಚಿವ ಜೋಶಿ ಕಿಡಿ ಕಾರಿದರು.
ಪಕ್ಷಗಳು ಸಂಗ್ರಹಿಸುವ ದೇಣಿಗೆಗೆ ಚುನಾವಣಾ ಬಾಂಡ್ ಮೂಲಕ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಸುಪ್ರೀಂ ಕೋರ್ಟ್ ಅದರ ಇನ್ನಷ್ಟು ಸುಧಾರಣೆ ಕ್ರಮಕ್ಕೆ ಸಲಹೆ ಮಾಡಿದೆ. ಅದನ್ನು ನಾವು ಸ್ವೀಕರಿಸುತ್ತೇವೆ ಎಂದು ಜೋಶಿ ತಿಳಿಸಿದರು.
ಚುನಾವಣೆಯಲ್ಲಿ ಕಪ್ಪು ಹಣ ದೂರವಿಡಲು ಪ್ರಯತ್ನ:
ಚುನಾವಣೆಯಲ್ಲಿ ಕಪ್ಪು ಹಣವನ್ನು ದೂರವಿಡಲು ಪ್ರಯತ್ನ ಮಾಡಿದ್ದೇವೆ. ಚುನಾವಣಾ ಬಾಂಡ್ ಗೆ ಚೆಕ್ ಮೂಲಕವೇ ಬ್ಯಾಂಕ್ ಗೆ ಹಣ ಸಂದಾಯ ಮಾಡಬೇಕಾಗಿತ್ತು. ಕೇಂದ್ರ ಸರ್ಕಾರ ಒಂದು ಒಳ್ಳೆಯ ಸುಧಾರಣೆ ಕ್ರಮಕ್ಕೆ ಮುಂದಾಗಿತ್ತು ಎಂದು ಸಚಿವ ಜೋಶಿ ಚುನಾವಣೆ ಬಾಂಡ್ ಅನ್ನು ಸಮರ್ಥಿಸಿಕೊಂಡರು.
ಚುನಾವಣೆ ಬಾಂಡ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸಲಹೆ, ಸೂಚನೆಯನ್ನು ನಾವು ಒಪ್ಪಿಕೊಂಡಿದ್ದೇವೆ. ಸುಪ್ರೀಂ ಕೋರ್ಟ್ ಸರ್ವೋಚ್ಚ. ಇನ್ನೂ ಸುಧಾರಣೆ ಆಗಬೇಕು ಎಂಬುದನ್ನು ಅದು ಬಯಸಿದರೆ ನಾವದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇವೆ ಎಂದು ಜೋಶಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: T20 ವಿಶ್ವಕಪ್’ಗೂ ಮುನ್ನ ಹೊಸ ನಾಯಕ: ಅಂದು ನಾಯಕತ್ವ ತ್ಯಜಿಸಿದ್ದ ಪ್ಲೇಯರ್ ಮತ್ತೆ ಕ್ಯಾಪ್ಟನ್!
ಕ್ಯಾಶ್ ಇದ್ದಾಗ ಚುನಾವಣೆ ಪ್ರಾಮಾಣಿಕವಾಗಿ ನಡೆದಿತ್ತೇ?:
ಕಪ್ಪು ಹಣವನ್ನು ಚುನಾವಣೆಯಿಂದ ದೂರವಿಡುವ ಪ್ರಯತ್ನವನ್ನು ನಾವು ಮಾಡಿದ್ದೇವೆ. ಆದರೆ, ಕಾಂಗ್ರೆಸ್ ಕಾಲದಲ್ಲಿ ಎಲ್ಲಾ ಕ್ಯಾಶ್ ವ್ಯವಹಾರವೇ ಇತ್ತು. ಆಗೆಲ್ಲ ಬಹಳ ಪ್ರಾಮಾಣಿಕವಾಗಿ ಚುನಾವಣೆ ನಡೆದಿದೆಯೇ? ಇಲ್ಲವಲ್ಲಾ ಎಂದು ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ