ಬೆಂಗಳೂರು : ಜುಲೈ 5ರಿಂದ ರಾಜ್ಯದಲ್ಲಿ ಅನ್‌ಲಾಕ್ 3.O ಜಾರಿಯಾಗುವ ಸಾಧ್ಯತೆಗಳಿವೆ. ಈ ಅನ್‌ಲಾಕ್ 3.O ನಲ್ಲಿ  ಸಿನಿಮಾ ಥೇಟರ್,  ಶಾಪಿಂಗ್ ಮಾಲ್‌, ಪಬ್-ಕ್ಲಬ್, ಬಾರ್‌ಗಳಿಗೆ ಅನುಮತಿ ನೀಡುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಕಳೆದ ಏಪ್ರಿಲ್ 27ರಿಂದ ರಾಜ್ಯದಲ್ಲಿ ಕೊರೋನಾ ಲಾಕ್‌ಡೌನ್‌(Karnataka Lockdown) ಜಾರಿ ಮಾಡಲಾಗಿತ್ತು. ನಂತ್ರ ಅದು ಜೂ.14ರ ನಂತ್ರ ಸ್ವಲ್ಪ ಸಡಿಲಿಕೆ ನೀಡಲಾಯಿತು. ಆಮೇಲೆ ಜೂ. 21  ರಿಂದ ಅನ್‌ಲಾಕ್ 2.0 ಜಾರಿಗೆ ತರಲಾಯಿತು. ಕೆಲವು ನಿರ್ಬಂಧಗಳೊಂದಿಗೆ ಹಲವು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿತ್ತು. ಮೊದಲು 16 ಜಿಲ್ಲೆಗಳಲ್ಲಿ ಅನ್‌ಲಾಕ್ ಘೋಷಣೆ ಮಾಡಿ ನಂತರ ಆ ಪಟ್ಟಿಗೆ 6 ಜಿಲ್ಲೆಗಳನ್ನು ಸೇರಿಸಲಾಗಿತ್ತು.


ಇದನ್ನೂ ಓದಿ : CM of Karnataka : ಕೇರಳ ಸಿಎಂಗೆ ಪತ್ರ ಬರೆದ ಸಿಎಂ ಯಡಿಯೂರಪ್ಪ


ಕೋವಿಡ್ ಪಾಸಿಟಿವಿಟಿ ಪ್ರಮಾಣ ಕಡಿಮೆ ಆದ್ರೆ ಮಾತ್ರ ಅನ್‌ಲಾಕ್ 3.O(Karnataka Unlock 3.O) ಜಾರಿಗೆ ತರಬಹುದು ಎಂದು ತಜ್ಞರು ಸಲಹೆ ನೀಡಿದ್ದು, ಸದ್ಯಕ್ಕೆ ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 1.97 ರಷ್ಟಿದೆ. ಹಾಗಾಗಿ ಅನ್ ಲಾಕ್ 3.O ಜರಿ ಆಗುವ ಸಾಧ್ಯತೆಗಳಿವೆ. 


ಇದನ್ನೂ ಓದಿ : BS Yediyurappa : 'ಶಿಕ್ಷಣ ಸಚಿವರು ನನ್ನೊಂದಿಗೆ ಚರ್ಚಿಸಿಯೇ SSLC ಪರೀಕ್ಷೆ ದಿನಾಂಕ ನಿಗದಿಪಡಿಸಿದ್ದಾರೆ'


ಕೊರೋನಾ ಪ್ರಕರಣಗಳ(Corona Case) ಸಂಖ್ಯೆ ಕಡಿಮೆಯಾದ ಕಾರಣ ರಾಜ್ಯದಲ್ಲಿ ಹಂತ ಹಂತವಾಗಿ ಅನ್‌ ಲಾಕ್ ಪ್ರಕ್ರಿಯೆ ಕೂಡ ಆರಂಭವಾಗಿದೆ. ಹೀಗಾಗಲೆ ಕೆಲವು ಜಿಲ್ಲೆಗಳಿಗೆ ಅನ್‌ ಲಾಕ್ ಘೋಷಿಸಲಾಗಿದೆ.


ಇದನ್ನೂ ಓದಿ : Heavy Rain in Karnataka : ರಾಜ್ಯದಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆ : ಹವಾಮಾನ ಇಲಾಖೆ ಮಾಹಿತಿ


ಈಗ ಅಂಗಡಿಗಳಿಗೆ ಅವಕಾಶ ಕೊಟ್ಟಿರುವಂತೆಯೇ ಶಾಪಿಂಗ್ ಮಾಲ್‌ಗಳಿಗೆ(Shoping Mall)  ಸಂಜೆವರೆಗೂ ತೆರೆಯಲು ಅನುಮತಿ ನೀಡಬಹುದಾಗಿದೆ. ಅತೀ ಕಡಿಮೆ ಜನರ ಪ್ರವೇಶಕ್ಕೆ ಅನುಮತಿ ನೀಡಲಿದ್ದು, ಮಕ್ಕಳಿಗೆ ಪ್ರವೇಶ ನಿರ್ಬಂಧ ಹೇರುವ ಸಂಭವವಿದೆ. ಬಾರ್‌ಗಳಲ್ಲಿಯೂ ಟೇಬಲ್ ಸರ್ವೀಸ್‌ಗೆ ಅವಕಾಶ ಎಂದು ಹೇಳಲಾಗುತ್ತಿದೆ. ಆದರೆ ಸಿನಿಮಾ ಥೇಟರ್ ಗಳಿಗೆ ಇಷ್ಟು ಬೇಗ ಅವಕಾಶ ನೀಡುವುದು ಅನುಮಾನವಿದ್ದು, ನೈಟ್ ಮತ್ತು , ವೀಕೆಂಡ್ ಕರ್ಫ್ಯೂ ಇನ್ನಷ್ಟು ದಿನ ಮುಂದುವರೆಯುವ ಸಾಧ್ಯತೆಯಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.