ಬೆಂಗಳೂರು : ರಾಜ್ಯದಲ್ಲಿ ನಾಳೆಯಿಂದ ಕೆಲವು ಜಿಲ್ಲೆಗಳಲ್ಲಿ ಹಂತಹಂತವಾಗಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದು ಜನರು ನಿಧಾನಕ್ಕೆ ಸಹಜ ಜೀವನಕ್ಕೆ ತೆರೆದುಕೊಳ್ಳಲಿದೆ‌. ಆದರೆ ಈ ಮಧ್ಯೆ ಕೊರೋನಾ ಮೂರನೇ ಅಲೆಯನ್ನು ತಡೆಯುವುದು ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲಾಗಿದೆ. 


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ಲಸಿಕೆ ಅರ್ಹ ಫಲಾನುಭವಿಗಳಿಗೆ ಇನ್ನೂ ಶೇಕಡಾ 95ರಷ್ಟು ತಲುಪಿಲ್ಲ, ಹೀಗಿರುವಾಗ ಅನ್ ಲಾಕ್(Unlock) ಮಾಡಿದರೆ ಮತ್ತೆ ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ ಎಂಬ ಆತಂಕ ಎದುರಾಗಿದೆ.


ಇದನ್ನೂ ಓದಿ : S Suresh Kumar : 'ಪ್ರಥಮ ಪಿಯುಸಿ ವಿದ್ಯಾರ್ಥಿ'ಗಳಿಗೆ ಗುಡ್ ನ್ಯೂಸ್..!


ಕೊರೋನಾ ಮೊದಲನೇ ಅಲೆಗಿಂತ ಎರಡನೇ ಅಲೆ(Corona Second Wave) ಇನ್ನಷ್ಟು ಭಯಾನಕವಾಗಿರುವಾಗ ಅನ್ ಲಾಕ್ ಪ್ರಕ್ರಿಯೆ ಮತ್ತಷ್ಟು ಸವಾಲಾಗಿದೆ.ಕೊರೋನಾ ಮೊದಲನೇ ಅಲೆಯ ಸಂದರ್ಭದಲ್ಲಿ ದಿನನಿತ್ಯದ ಕೋವಿಡ್ ಸೋಂಕಿನ ಸಂಖ್ಯೆಯಲ್ಲಿ ಅತಿಹೆಚ್ಚು ಕಳೆದ ವರ್ಷ ಅಕ್ಟೋಬರ್ 7ರಂದು 10 ಸಾವಿರದ 947 ದಾಖಲಾಗಿತ್ತು.


ಇದನ್ನೂ ಓದಿ : Heavy Rain in Karnataka : ನಾಳೆಯಿಂದ 5 ದಿನ ರಾಜ್ಯದಲ್ಲಿ ಭಾರೀ ಮಳೆ : ಕೆಲ ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್'


ಎರಡನೇ ಅಲೆಯಲ್ಲಿ ಅತಿಹೆಚ್ಚು ಕಳೆದ ಮೇ 5ರಂದು 50 ಸಾವಿರದ 112 ದಾಖಲಾಗಿದೆ. ನಿನ್ನೆ ಶನಿವಾರ ರಾಜ್ಯದಲ್ಲಿ ಸೋಂಕಿತರ(Infected) ಸಂಖ್ಯೆ 9 ಸಾವಿರದ 785 ಇದೆ. ಅದು ಮೊದಲನೇ ಅಲೆಯ ಸಂದರ್ಭದಲ್ಲಿ ದಾಖಲಾದ ಅತಿ ಹೆಚ್ಚು ಸೋಂಕಿನ ಪ್ರಮಾಣಕ್ಕೆ ಹತ್ತಿರದಲ್ಲಿದೆ.


ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ವೇದಾಂತ ಕೇರ್ಸ್ ಕೋವಿಡ್ ಫೀಲ್ಡ್ ಆಸ್ಪತ್ರೆ ಲೋಕಾರ್ಪಣೆ


ಮೊದಲ ಅಲೆಯ ಸಂದರ್ಭದಲ್ಲಿ ಅತಿಹೆಚ್ಚು ಸಕ್ರಿಯ ಸೋಂಕಿತರು ಕಳೆದ ವರ್ಷ ಅಕ್ಟೋಬರ್ 10ರಂದು ರಾಜ್ಯದಲ್ಲಿ ತಲುಪಿದ್ದು, ಅದು 1 ಲಕ್ಷದ 20 ಸಾವಿರದ 929 ಆಗಿತ್ತು. ನಿನ್ನೆ ರಾಜ್ಯದಲ್ಲಿ 1 ಲಕ್ಷದ 91 ಸಾವಿರದ 796 ದಾಖಲಾಗಿದೆ. ಇನ್ನೂ ಸಾಕಷ್ಟು ಜನಸಂಖ್ಯೆಯಲ್ಲಿ ಲಸಿಕೆ(Corona Vaccine) ಅಭಿಯಾನ ತಲುಪಿಲ್ಲ.


ಇದನ್ನೂ ಓದಿ : DK Shivakumar : 'ಹೆಣದಲ್ಲೂ ಹಣ ಲೂಟಿ ಹೊಡೆಯುವ ಸರ್ಕಾರವಿದು'


ಲಸಿಕೆ ಅಭಿಯಾನ ಜೊತೆಗೆ ಅಂತರ ಜಿಲ್ಲೆಗಳಲ್ಲಿ ಪ್ರಯಾಣಿಕರ ಓಡಾಟ ಕೂಡ ಮುಂದಿನ ದಿನಗಳಲ್ಲಿ ಕೊರೋನಾ(Corona) ಹರಡುವಿಕೆಗೆ ಪ್ರಮುಖ ಕಾರಣವಾಗಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.