ಟ್ವಿಟ್ಟರ್ ನಲ್ಲಿ ದೇಶಾದ್ಯಂತ ಟ್ರೆಂಡ್ ಆದ ಉಪ್ಪಿ ಪ್ರಜಾಕೀಯದ #UPPforKARNATAKA
ಬೆಂಗಳೂರು: ಪ್ರಜಾಕೀಯದ ಮೂಲಕ ರಾಜಕೀಯಕ್ಕೆ ಕಾಲಿಟ್ಟಿರುವ ನಟ ಉಪೇಂದ್ರ ಅವರು ಇಂದು ಕರೆ ಕೊಟ್ಟಿರುವ ಪ್ರಜಾಕೀಯಕ್ಕಾಗಿ #UPPforKARNATAKA ಟ್ವಿಟರ್ ಅಭಿಯಾನ ಈಗ ದೇಶಾದ್ಯಂತ ಟಾಪ್ ಟ್ರೆಂಡಿಂಗ್ ನಲ್ಲಿದೆ.
ಉಪೇಂದ್ರ ಅವರು ಹೇಳುವಂತೆ ಈ ಟ್ರೆಂಡಿಂಗ್ ನ ಮೂಲ ಉದ್ದೇಶ ಪ್ರಜಾಕೀಯದ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಮತ್ತು ವಿಚಾರಗಳನ್ನು ಅನಿಸಿಕೆಗಳನ್ನು ಈಗ ಹ್ಯಾಷ್ಟ್ಯಾಗ್ ಮೂಲಕ ಬಳಸಿ ತಿಳಿಸುವುದು ಇದರ ಮೂಲ ಉದ್ದೇಶವಾಗಿದೆ. ಉಪೇಂದ್ರ ಅವರು ಈ ಟ್ವಿಟ್ಟರ್ ಅಭಿಯಾನಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಗಳನ್ನು ಮಾಡಿದ್ದು, ಅದರಲ್ಲಿ ಅವರು ಸತ್ ಪ್ರಜೆ ಕುರಿತಾಗಿ ಮಾಡಿರುವ ಟ್ವೀಟ್ ಗಳನ್ನು ಜನರನ್ನು ಗಮನ ಸೆಳೆಯುತ್ತಿವೆ.
'ಸತ್ ಪ್ರಜೆ....ದೇಶವನ್ನೇ ತನ್ನ ಮನೆ ಎಂದು ನೂರ್ಕಾಲ ನಡೆಸಿದ್ದ ರಾಜಮಹಾರಾಜರನ್ನು ಕೆಳಗಿಳಿಸಿ,ಪ್ರಜೆಯೇ ಪ್ರಭುವೆಂದು ಮೂರ್ಕಾಲಕ್ಕೊಬ್ಬ ಪ್ರಜೆಯನ್ನು ಪ್ರಭು ಮಾಡಿ, ಪ್ರಜಾಪ್ರಭುತ್ವದ ನಿಜ ಸತ್ವ ನೀ ರಾಜನೆಂಬುದ ಮರೆತೆಯಲ್ಲೊ ಕಣ್ಮುಚ್ಚಿ ಹಾಲ್ಕುಡಿವ ಮಾರ್ಜಾಲ !!!.
ಇನ್ನೊಂದು ಟ್ವೀಟ್ ನಲ್ಲಿ ಉಪೇಂದ್ರ ತಮ್ಮ ಪ್ರಜಾಕೀಯದ ವಾಖ್ಯಾನ ಮಾಡುತ್ತಾ ' “ ಅಧಿಕಾರ “ ನನಗೆ ಕೊಡಿ ಎನ್ನುವುದು ರಾಜಕೀಯ. “ ಅಧಿಕಾರ “ ನೀವೇ ಇಟ್ಟುಕೊಳ್ಳಿ ಎನ್ನುವುದೇ ಪ್ರಜಾಕೀಯ' ಎಂದು ಸಾರುತ್ತಾರೆ.