ಬೆಂಗಳೂರು: ವಿಧಾನಸಭೆಯ ಅಧಿವೇಶನದ (Session) ಶೂನ್ಯ ವೇಳೆಯಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ (UT Khadar), ಹಿಜಾಬ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ಪ್ರಕರಣದಲ್ಲಿ ಹೈಕೋರ್ಟ್ (High court) ಮಧ್ಯಂತರ ತೀರ್ಪು ನೀಡಿರುವುದು ಮಕ್ಕಳ ಸಮವಸ್ತ್ರದ ಬಗ್ಗೆ, ಆದರೆ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಹಿಜಾಬ್ ಹಾಕುವಂತಿಲ್ಲ ಎಂಬ ಸರ್ಕಾರದ ನಡೆ ಸರಿಯಿಲ್ಲ ಎಂದು ಎಂದು ಹೇಳಿದರು.


ಇದನ್ನೂ ಓದಿ: ಹಿಜಾಬ್ ಬೇಕಾ? ಕಿತಾಬ್ ಬೇಕಾ? ಕಾಂಗ್ರೆಸ್ ಹೇಳಲಿ : ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ ಪ್ರಶ್ನೆ


ಶಿವಮೊಗ್ಗದಲ್ಲಿ (Shivamogga) ಪರೀಕ್ಷೆ ಬರೆಯಲು ಬಿಟ್ಟಿಲ್ಲ. ನ್ಯಾಯಾಲಯ ಆದೇಶ ಏನು ಬರುತ್ತೆ ಎಂಬ ಗೊಂದಲ ಜನರಲ್ಲಿದೆ. ಮಧ್ಯಂತರ ಆದೇಶದಲ್ಲಿ ಕಾಲೇಜು ಆಡಳಿತ ಮಂಡಳಿ ಎಂದು ಉಲ್ಲೇಖ ಮಾಡಿದೆ. ಆದರೆ ಇದನ್ನು ಹೈಸ್ಕೂಲ್ ನಲ್ಲಿ ಜಾರಿಗೆ ತರಲು ಮುಂದಾಗುತ್ತಿದ್ದಾರೆ. ಹೈಕೋರ್ಟ್ ಆದೇಶದಲ್ಲಿ ವಿದ್ಯಾರ್ಥಿಗಳಿಗೆ ಎಂದಿದ್ದರೂ ಶಿಕ್ಷಕರಿಗೆ ಹಿಜಾಬ್ (Hijab) ಧರಿಸಲು ಅವಕಾಶ ನೀಡದೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದರು.


ಇದನ್ನೂ ಓದಿ: Fodder Scam Case: ಮೇವು ಹಗರಣದ ಅತಿ ದೊಡ್ಡ ಪ್ರಕರಣದಲ್ಲಿ Lalu Yadav ದೋಷಿ


ಸರ್ಕಾರ ಜವಾಬ್ದಾರಿ ಶಿಕ್ಷಣ ನೀಡಬೇಕು. ಶಿಕ್ಷಣ ತಡೆ ಹಿಡಿಯುವುದು ಅಲ್ಲ. ನ್ಯಾಯಾಲಯದ ಆದೇಶ ತಳಮಟ್ಟದಲ್ಲಿ ಅನುಷ್ಠಾನ ಆಗಬೇಕು. ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು. ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವುದು ಸರ್ಕಾರದ ‌ಜವಾಬ್ದಾರಿ. ನ್ಯಾಯಾಲಯದ ಮಧ್ಯಂತರ ‌ಆದೇಶದ ಹಿನ್ನೆಲೆಯಲ್ಲಿ ಗೊಂದಲ ಪರಿಹಾರವಾಗಬೇಕು ಎಂದು ತಿಳಿಸಿದರು. 


ಇವರ ಪ್ರಶ್ನೆಗೆ ಉತ್ತರಿಸಿದ ಸಚಿವ ಮಾಧುಸ್ವಾಮಿ (Mahuswamy), ಖಾದರ್ ಪ್ರಶ್ನೆಗೆ ಶಿಕ್ಷಣ ಸಚಿವರ ಜೊತೆ ಮಾತನಾಡಿ ಉತ್ತರ ತರಿಸಿಕೊಡುತ್ತೇವೆ. ನ್ಯಾಯಾಲಯದ ಆದೇಶ ಪಾಲನೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.