ವಿಜಯನಗರ : ಹೊಸಪೇಟೆಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ರೀತಿಯಲ್ಲಿ ಘಟನೆಗಳು ಆಗಿವೆ, ಆಗಿಲ್ಲಾ ಅಂತ ನಾನು ಹೇಳುವುದಿಲ್ಲ. ಆದರೆ, ಹಿಂದಿನವರು ಏನು ಪಾಲನೆ ಮಾಡಿದ್ದರು, ಅದನ್ನು ಈಗಿನ ಸರ್ಕಾರವೂ ಮಾಡಬೇಕು. ಆದರೆ, ಇದೊಂದು ಭಂಡ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.


COMMERCIAL BREAK
SCROLL TO CONTINUE READING

ಹಿಂದಿನ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರ ಸಾವಿನ ವಿಚಾರದಲ್ಲಿ ಈಶ್ವರಪ್ಪನವರದ್ದೇನು ಕೂಡ ತಪ್ಪಿರಲಿಲ್ಲ ಆದರೂ,  ಈಶ್ವರಪ್ಪ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈಶ್ವರಪ್ಪ ಅವರ ವಿಚಾರದಲ್ಲಿ ವಿಪಕ್ಷನಾಯಕರಿದ್ದ ಸಿದ್ದರಾಮಯ್ಯನವರು ಮಾಡಿದ ರೋಷಾವೇಶ ಈಗ ಯಾಕೆ ಇಲ್ಲಾ. ಈಗ ಅವರೇ ಸಿಎಂ, ಅವರ ಸಚಿವ ಸಂಪುಟದ ಸಚಿವರ ವ್ಯಾಪ್ತಿಯ ವಾಲ್ಮೀಕಿ ನಿಗಮ್ ಹಣ ಲೂಟಿ ಆಗಿದೆ. 14 ಅಕೌಂಟ್ ಗಳ ಮೂಲಕ ಹಗಲು ದರೊಡೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿ ಡೆತ್ ನೋಟ್ ನಲ್ಲಿ ಎರಡು ಬಾರಿ ಸಚಿವ ನಾಗೇಂದ್ರ ಅವರ ಮೌಖಿಕ ಆದೇಶ ಇತ್ತು ಎಂದು ಉಲ್ಲೇಖ ಮಾಡಿದ್ದಾರೆ ಆದರೆ, ಇವರು ರಾಜೀನಾಮೆ ತೆಗೆದುಕೊಳ್ಳುವ ನೈತಿಕತೆ ಇಲ್ಲಾ ಇದೊಂದು ಭ್ರಷ್ಟಾಚಾರ ಕೂಟದ ಸರ್ಕಾರ ಎಂದು ಆರೋಪಿಸಿದರು. 


ಇದನ್ನೂ ಓದಿ-ರಾಷ್ಟ್ರೀಯ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ


ಈ ಪ್ರಕರಣಕ್ಕೂ, ಈಶ್ವರಪ್ಪನವರ ಪ್ರಕರಣಕ್ಕೂ ಹೊಂದಾಣಿಕೆ ಮಾಡುತ್ತಾರೆ, ನಾಚಿಕೆಯಾಗಬೇಕು ಇವರಿಗೆ. ಬಹುಕೋಟಿ ಹಗರಣ ಇದು, ಒಂದೇ ದಿನದಲ್ಲಿ 14 ಅಕೌಂಟ್ ಗೆ ಮಾಯ ಆಗುತ್ತದೆ. ಅಂದರೆ ಸಂಶಯಾಸ್ಪದ ಅಕೌಂಟ್ ಗಳಿಗೆ ಹೋಗಿದೆ. 


ಇದು ಸಿಬಿಐ ಗೆ ಹೋಗುವಂತಹ ಮುಖ್ಯವಾದ ಕೇಸ್. ಒಂದು ಬ್ಯಾಂಕ್ ಮುಖಾಂತರ ಬೇರೆ ರಾಜ್ಯಕ್ಕೆ ಹಣ ಹೋಗಿದೆ. 10 ಕೋಟಿಗೆ ಹೆಚ್ಚು ಹಗರಣ ಅವ್ಯವಹಾರ ಆಗಿದ್ದರೆ,, ಅದು ಸಿಬಿಐ ತನಿಖೆಗೆ ಹೋಗಬೇಕು ಅಂತ ಇದೆ. ಆದರೆ, ಇವರು ಯಾಕೆ ಸಿಬಿಐಗೆ ಕೊಡುತ್ತಿಲ್ಲ,, ಸಿಒಡಿ ತನಿಖೆ ಮಾಡಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.


ಸಿಬಿಐ ತನಿಖೆಯಾಗಬೇಕು
ಚುನಾವಣೆ ಸಮಯದಲ್ಲಿ ಹೈದ್ರಾಬಾದ್ ನ ಒಂದು ಸಹಕಾರಿ ಬ್ಯಾಂಕ್ ಗೆ ಹಣ ವರ್ಗಾವಣೆ ಆಗುತ್ತದೆ ಅಂದರೆ, ರಾಜಕೀಯದಿಂದ ಚುನಾವಣೆಗಾಗಿ ನಡೆದಿರುವ ದರೋಡೆ ಪ್ರಕರಣ ಇದು. ಸರ್ಕಾರ ಏನೇ ಸಮಾಜಾಯಿಸಿ ಕೊಟ್ಟರೂ ಕೂಡ, ಡಿಜಿಟಲ್ ಟ್ರಾಕ್, ಡಿಜಿಟಲ್ ಎವಿಡೆನ್ಸ್ ಇರುವ ಕಾರಣ ಸಿಒಡಿಯಿಂದ ತನಿಖೆಯಾಗುವ ಪ್ರಕರಣ ಅಲ್ಲ. 


ಈ ಪ್ರಕರಣದಲ್ಲಿ  ಸಚಿವ ನಾಗೇಂದ್ರ ರಾಜೀನಾಮೆ ಕೊಡಬೇಕು, ಸಿಬಿಐ ತನಿಖೆಗೆ ಒಳಪಡಿಸಿ ಎಲ್ಲಾ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಹಣ ವಾಪಾಸ್ ಬರಬೇಕು. ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿದರೆ ಹಣ ವಾಪಾಸ್ ತರಬಹುದು, ಚುನಾವಣೆಗೆ ಬಳಕೆಯಾಗಿದ್ರೆ ಏನು ಮಾಡಲು ಆಗುವುದಿಲ್ಲ. ಈ ಪ್ರಕರಣದಲ್ಲಿ ಮನಿ ಟ್ರೈಲ್ ಫಾಲೋ ಮಾಡಬೇಕು ಎಂದು ಹೇಳಿದರು.


ಕಾಂಗ್ರೆಸ್ ಸರ್ಕಾರ ಎಸ್ ಸಿ,  ಎಸ್ ಟಿ ಸಮಾಜಕ್ಕೆ ಓಟ್ ಬ್ಯಾಂಕ್ ಆಗಿ ಪರಿವರ್ತನೆ ಮಾಡುವುದು ಬಿಟ್ಟರೆ ಬೇರೆನೂ ಪ್ರಯೋಜನವಿಲ್ಲ. ಎಸ್ಸಿ, ಎಸ್ಟಿ ಸಮುದಾಯದವರು ಮೀಸಲಾತಿ ಹೋರಾಟ ಮಾಡಿದ್ದರೂ ಹೆಚ್ಚಳ ಮಾಡಲಿಲ್ಲಾ ನಾವು ಮೀಸಲಾತಿ ಹೆಚ್ಚಳ  ಮಾಡಿದ್ದೇವು.  ಇವರು ಬಂದ ಮೇಲೆ ಎಸ್ಸಿಪಿ ಟಿಎಸ್ಪಿ ಹಣ ಕಡಿತವಾಗಿದೆ. ಎಸ್ಸಿ ಎಸ್ಟಿ ಜನಾಂಗಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು.


ಕಾನೂನು ಎಲ್ಲರಿಗೂ ಒಂದೆ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಎಸ್ ಐಟಿ ತನಿಖೆಯಾಗುತ್ತಿದೆ, ಪ್ರಕರಣ ತನಿಖೆ ಹಂತದಲ್ಲಿದೆ. ಅಪರಾಧ ಮಾಡಿದವರು, ಶೋಷಣೆ ಮಾಡಿದವರು, ಅದನ್ನು ಪ್ರಚಾರ ಮಾಡಿದವರು ಎಲ್ಲಾ ವಿಚಾರದಲ್ಲಿ ಕಾನೂನು ಇದೆ ತನಿಖೆ ನಡೆಯುತ್ತಿದೆ ಕಾನೂನು ಎಲ್ಲರಿಗೂ ಒಂದೇ ಎಂದರು.


ಇದನ್ನೂ ಓದಿ-ಕನಿಷ್ಠ ಬೆಂಬಲ ಯೋಜನೆಯಡಿ ಜೋಳ ಖರೀದಿ; ನೋಂದಣಿ ಅವಧಿ ವಿಸ್ತರಣೆ


ಕಾನೂನು ಸುವ್ಯವಸ್ಥೆ ಹಾಳಾಗಿದೆ
ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತವಾಗಿಲ್ಲ. ನಮ್ಮ ಮಕ್ಕಳು ಶಾಲೆ, ಕಾಲೇಜ್ ಗೆ ಹೋದರೆ ಸುರಕ್ಷಿತವಾಗಿ ವಾಪಾಸ್ ಬರುತ್ತಾರೆ ಅನ್ನುವ ನಂಬಿಕೆ ಇಲ್ಲಾ. ಸಾಮಾನ್ಯ ಜನರಿಗೆ ರಕ್ಷಣೆ ಇಲ್ಲಾ. ರಾಜ್ಯದಲ್ಲಿ ಸಾಮೂಹಿಕ ಕೊಲೆಗಳು ಆಗುತ್ತಿವೆ. ಒಂದೇ ಸಮಯಕ್ಕೆ ಮೂರು ನಾಲ್ಕು ಜನರ ಕೊಲೆ ಆಗುತ್ತಿವೆ.  ಸಮಾಜಘಾತುಕರಿಗೆ ಹೆದರಿಕೆ ಇಲ್ಲಾ, ಅವರಿಗೆ ಪೊಲೀಸ್ ಠಾಣೆಗಳಲ್ಲಿ ಅವರಿಗೆ ರಾಜ ಮರ್ಯಾದೆ ಸಿಗುತ್ತಿದೆ. ಆ ಕಾರಣಕ್ಕೆ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿವೆ.  ಸಮಾಜಘಾತುಕ ಶಕ್ತಿಗಳಿಗೆ ಎಲ್ಲಿಯವರೆಗೆ ಕಠಿಣ ಕ್ರಮ ಕೈಗೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಈ ರೀತಿಯ ಕೃತ್ಯ ತಪ್ಪುವುದಿಲ್ಲ. ಸಮಾಜಘಾತುಕರಿಗೆ ಭಯ ಹುಟ್ಟಿಸಬೇಕಿದೆ, ಇಲಾಖೆಯ  ಸಡಿಲತನ ನಿಯಂತ್ರಣ ಆಗಬೇಕು. ರಾಜ್ಯ ಸರ್ಕಾರವೇ ಇದಕ್ಕೆ ಹೋಣೆ, ಅವರನ್ನ ನಿಯಂತ್ರಣ ಮಾಡುವ ಅವಶ್ಯಕತೆ ಇದೆ. ಇಲ್ಲದಿದ್ದರೆ  ರಾಜ್ಯಕ್ಕೆ ಬರುವ ಬಂಡವಾಳ ವಾಪಾಸ್ ಹೋಗುತ್ತದೆ ಎಂದರು. 


ಬೇಜವಾಬ್ದಾರಿ ಹೇಳಿಕೆ
ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ  ಟಕಾ, ಟಕ್ ಹಣದ ಆಸೆಗೆ ಮಹಿಳೆಯರು ಸಾಲುಗಟ್ಟಿ ನಿಲ್ಲುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬೇಜವಬ್ದಾರಿಯ ಹೇಳಿಕೆಗಳಿಂದ ಈ ರೀತಿಯಲ್ಲಿ ಆಗುತ್ತದೆ. ಏನು ಹೇಳಬೇಕೋ, ಬೇಡವೋ ಅನ್ನುವುದು ಯೋಚಿಸಿ ಮಾತನಾಡಬೇಕು ಎಂದು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ