ಬೆಂಗಳೂರು: ವಾಲ್ಮೀಕಿ ಮೀಸಲಾತಿ ವಿಚಾರವಾಗಿ ಸೇರಿದಂತೆ SC-ST ಸಮುದಾಯ ಮೀಸಲಾತಿ ಪರಿಷ್ಕರಣೆ ಕುರಿತು ಮುಂದಿನ ವಾರ ಸರ್ವ ಪಕ್ಷಗಳ ಸಭೆ ಕರೆದು ಚರ್ಚೆ ನಡೆಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಇಂದು ವಿಧಾನ ಸಭೆಯಲ್ಲಿ ಘೋಷಣೆ ಮಾಡಿದರು.


COMMERCIAL BREAK
SCROLL TO CONTINUE READING

ಮೀಸಲಾತಿ ವಿಚಾರವಾಗಿ ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ಹಾಗೂ ಸುಭಾಷ್ ಅಡಿ ವರದಿ ಆಧಾರದ ಮೇಲೆ, ಸರ್ವ ಪಕ್ಷಗಳ ಸಭೆಯಲ್ಲಿ ಸಂವಿಧಾನಾತ್ಮಕ ಹಾಗೂ ಕಾನೂನು ವಿಚಾರದ ಬಗ್ಗೆ ಚರ್ಚೆ ಮಾಡಲಾಗುವುದು ಎಂದು, ಸಿಎಂ ತಿಳಿಸಿದರು.


ಎಸ್ ಸಿ, ಎಸ್ ಟಿ, ಒಬಿಸಿ ಎಲ್ಲಾ ಮೀಸಲಾತಿ ಬಗ್ಗೆ ನಮ್ಮ ಸಹಾನುಭೂತಿ ಇದೆ. ಅವರಿಗೆ ನ್ಯಾಯ ಕೊಡಿಸಬೇಕು ಎಂಬ ಉದ್ದೇಶ ಇದೆ.ಮೀಸಲಾತಿ ಜನಸಂಖ್ಯೆ ಅನುಗುಣವಾಗಿ ತಕ್ಕ ಹಾಗೆ ನ್ಯಾಯ ಕೊಡಿಸಲು ಸರ್ಕಾರ ಬದ್ಧವಾಗಿದೆ,ಅವರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ.‌ಈ ನಿಟ್ಟಿನಲ್ಲಿ ಮೀಸಲಾತಿ ಬೇಡಿಕೆ ಇಟ್ಟು ವಾಲ್ಮೀಕಿ ‌ಸ್ವಾಮೀಜಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವನ್ನು ಕೈಬಿಡಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಮನವಿ ಮಾಡಿದರು‌.


ಈ ಮಧ್ಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ SC, ST ಗಳಿಗೆ  ಶಿಕ್ಷಣ, ಉದ್ಯೋಗ, ರಾಜಕೀಯದಲ್ಲಿ ಮೀಸಲಾತಿ ಸಿಗಬೇಕು.ಮೀಸಲಾತಿ ಆಗ್ರಹಿಸಿ ವಾಲ್ಮೀಕಿ ಸಮಾಜದ ಸ್ವಾಮೀಜಿ 200 ದಿನಗಳಿಂದ ಧರಣಿ ಕೂತಿದ್ದಾರೆ.ಸಮಿಶ್ರ ಸರ್ಕಾರ ಇದ್ದಾಗ ನಾಗಮೋಹನ್ ದಾಸ್ ಕಮಿಟಿ ವರದಿ ನೀಡಿದೆ.ಅದರಲ್ಲಿ ಸ್ಪಷ್ಟವಾಗಿ ಹೇಳಿದೆ. SC ಗಳಿಗೆ‌ ಮೀಸಲಾತಿಯನ್ನು 15-17% ಗೆ ಹೆಚ್ಚಿಸಬೇಕು, ST ಗಳಿಗೆ 7% ಮಾಡಬೇಕು ಅಂತ. ಈ ಎಲ್ಲ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ಕರೆದು ಚರ್ಚೆ ಮಾಡಬೇಕು. ವಿಳಂಬ ಮಾಡಬಾರದು ಎಂದು ಆಗ್ರಹಿಸಿದರು.


ಇದನ್ನೂ ಓದಿ : 'ನಾನು ಆರೋಗ್ಯವಾಗಿದ್ದೇನೆ'; ಮುಖಂಡರು, ಕಾರ್ಯಕರ್ತರಿಗೆ ಹೆಚ್.ಡಿ.ದೇವೇಗೌಡರ ಸಂದೇಶ


ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಾತನಾಡಿ, ಮೀಸಲಾತಿ ವಿಚಾರವಾಗಿ ವಿಪಕ್ಷ ನಾಯಕರು ಪ್ರಸ್ತಾಪ ಮಾಡಿದ್ದಾರೆ.ನಮ್ಮ ಪಕ್ಷದ ಸಹಮತವಿದೆ. ಸ್ವಾಮೀಜಿ ಅವರು 220 ದಿನಗಳಿಂದ ಸತ್ಯಾಗ್ರಹ ಮಾಡ್ತಿದ್ದಾರೆ.ಧರಣಿಯನ್ನ ಹಿಂಪಡೆಯಲು ಮನವಿ ಮಾಡ್ತೇನೆ ಎಂದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.