ಬೆಳಗಾವಿ : ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಸದನದ ಪ್ರಾರಂಭದಲ್ಲೇ ಕೇಸರಿ ಕಲಿಗಳ ಮೇಗಾ ಪ್ಲಾನ್ ಗೆ ಕದನ ಶುರುವಾಗುವ ಎಲ್ಲಾ ಸಾಧ್ಯತೆಗಳಿವೆ. ಸರ್ಕಾರದ ವಿರುದ್ಧ ಭಾರಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದ ಕೈ ಪಡೆಗೆ, ಬಿಜೆಪಿ ಕೇಸರಿ ಕದನಕ್ಕೆ ವೇದಿಕೆ ಸಿದ್ದ ಮಾಡಿದೆ. ಆ ಮೂಲಕ ಚುನಾವಣಾ ಹೊತ್ತಿನಲ್ಲಿ ಕೇಸರಿ ಕಹಳೆ ಮೊಳಗಿಸಲು ಸರ್ಕಾರ  ಅಧಿಕೃತವಾಗಿ ಸಜ್ಜಾಗಿದೆ.


COMMERCIAL BREAK
SCROLL TO CONTINUE READING

ಅಧಿವೇಶನದ ಮೊದಲ ದಿನವೇ ಕೇಸರಿ ಕಲಿಗಳು ವರ್ಸಸ್ ಕೈ ಕಲಿಗಳ ಮೇಗಾ ಫೈಟ್!


ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಸಲುವಾಗಿಯೇ ಸುವರ್ಣ ಸೌಧ ನಿರ್ಮಿಸಿ, ವರ್ಷಕ್ಕೊಮ್ಮೆ ಇಲ್ಲಿ ಅಧಿವೇಶನ ಕರೆದು ಚರ್ಚೆ ಮಾಡಲಾಗುತ್ತೆ.. ಆದ್ರೆ ಮಿಸಲಿಟ್ಟ ದಿನಗಳು ವ್ಯರ್ಥವಾಗ್ತಿರೋ‌ ಆರೋಪ ಇದ್ದು, ಈ ಭಾರಿ ಆ ಸಂಪ್ರದಾಯ ಮುಂದುವರಿಯಲಿದೆ ಎನ್ನಲಾಗಿದೆ. ಯಾಕೆಂದರೆ ನಾಳೆ ಬೆಳಿಗ್ಗೆ ಒಂದೇ ಸಮಯದಲ್ಲಿ ಮಹಾತ್ಮ ಗಾಂಧಿಜಿ, ಅಂಬೇಡ್ಕರ್, ವೀರ ಸಾವರ್ಕರ್ ಸೇರಿದಂತೆ ಏಳು ಫೋಟೋಗಳನ್ನ ಅನಾವರಣ ಮಾಡಲು ಸರ್ಕಾರ ಮುಂದಾಗಿದೆ‌.


ಇದನ್ನೂ ಓದಿ : BESCOM: ಬೆಸ್ಕಾಂ ವಿದ್ಯುತ್ ಅದಾಲತ್: 2513 ಗ್ರಾಹಕರು ಭಾಗಿ


 ವೀರ್ ಸಾವರ್ಕರ್ ಪೋಟೋ ಅನಾವರಣ ಮಾಡುವ ಮೂಲಕ ದೇಶಪ್ರೇಮಿ ಎಂದು ಪ್ರತಿಪಾದನೆ ಮಾಡಲು ಬಿಜೆಪಿ ತಯಾರಿಯಾಗಿದೆ. ಇದಕ್ಕಾಗಿ ಕೊನೆ ಹಂತದಲ್ಲಿ ಒಂದಷ್ಟು ಮೇಗಾ ಪ್ಲಾನ್ ಮಾಡಿ, ಪೋಟೊ ಅನಾವರಣ ಕಾರ್ಯಕ್ರಮಕ್ಕೆ ಸದ್ದಿಲ್ಲದೆ ಮುಂದಾಗಿದೆ. ಸರ್ಕಾರದ ವಿರುದ್ಧ ಸಮರ ಸಾರಲು ಹಲವು ದಿನಗಳಿಂದ  ಕಾಂಗ್ರೆಸ್ ಕಸರತ್ತು ನಡೆಸಿತ್ತು.


ಅಧಿವೇಶನದಲ್ಲಿ ವೋಟರ್  ಐಡಿ ಡೀಲಿಟ್ ಮಾಡಿರೋ ಪ್ರಕರಣ, ಕಾನೂನು ಸುವ್ಯವಸ್ಥೆ, 40% ಭ್ರಷ್ಟಾಚಾರ ಆರೋಪ ಹಾಗೂ ಪಿಎಸ್ಐ ಪರೀಕ್ಷೆ ನೇಮಕಾತಿ ಅಕ್ರಮದ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿ, ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಲು ಕಾಂಗ್ರೆಸ್ ಪ್ಲಾನ್ ಮಾಡಿತ್ತು. ಆದರೆ ವೀರ್ ಸಾವರ್ಕರ್ ಪೋಟೋ ಅನಾವರಣ ಕಾರ್ಯಕ್ರಮದಿಂದ ಸಹಜವಾಗಿಯೇ ಕಾಂಗ್ರೆಸ್ ನಾಯಕರು ಕೆರಳಲಿದ್ದಾರೆ..ಇದರಿಂದಾಗಿ ಮೊದಲು ದಿನವೇ ಬಿಜೆಪಿ ವರ್ಸಸ್ ಕಾಂಗ್ರೆಸ್ ಕುಸ್ತಿ ತೀವ್ರತೆ ಪಡೆಯುತ್ತದೆ.


ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ, ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ಕಾಂಗ್ರೆಸ್ ಹಲವು ದಿನಗಳಿಂದ ತಾಲೀಮು ನಡೆಸಿತ್ತು..ಆದರೆ ಬಿಜೆಪಿಯ ಪ್ರಖರ ಹಿಂದುತ್ವ ದಾಳಕ್ಕೆ ಕಾಂಗ್ರೆಸ್ ನಾಯಕರು ಕಕ್ಕಾಬಿಕ್ಕಿಯಾಗಿದ್ದಾರೆ. ಇಷ್ಟು ದಿನ ಸಾವರ್ಕರ್ ವಿಚಾರವನ್ನು ಬಹಿರಂಗವಾಗಿಯೇ ಟೀಕಿಸುತ್ತಿದ್ದ ಕೈ‌ ನಾಯಕರು, ನಾಳೆ ಸದನದಲ್ಲಿ ಪೋಟೋ ಅನಾವರಣದ ಕಾರ್ಯಕ್ರಮವನ್ನು ಹೇಗೆ ನಿಭಾಯಿಸುತ್ತಾರೆ, ಬಿಜೆಪಿಯ ಈ ಅಸ್ತ್ರಕ್ಕೆ ಯಾವ ಪ್ರತ್ಯಾಸ್ತ್ರ ಪ್ರಯೋಗಿಸುತ್ತದೆ ಎಂದು ಭಾರಿ ಕುತೂಹಲ ಮೂಡಿಸಿದೆ.


ಫೋಟೋ ಅಳವಡಿಕೆಗೆ ಪ್ರಿಯಾಂಕ್ ಖರ್ಗೆ ವಿರೋಧ 


ವಿಧಾನಸಭೆಯಲ್ಲಿ ಸಾವರ್ಕರ್ ಫೋಟೋ ಅಳವಡಿಕೆಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಿರೋಧ ಮಾಡಿದ್ದಾರೆ. ಈ ಕುರಿತಾಗಿ ವಿಜಯ ಕರ್ನಾಟಕದ ಜೊತೆ ಮಾತನಾಡಿದ ಅವರು, ವಿವಾದ ಸೃಷ್ಟಿ ಮಾಡಲು ಮಾಡಿರುವ ಯತ್ನ ಇದಾಗಿದೆ. ಬಿಜೆಪಿಗೆ ಸದನದಲ್ಲಿ ನಿಜವಾದ ವಿಚಾರಗಳು ಚರ್ಚೆ ಆಗುವುದು ಬೇಡವಾಗಿದೆ ಎಂದರು. 


ಸಾವರ್ಕರ್ ಏನು ಸಾಧನೆ ಮಾಡಿದ್ದಾರೆ ಎಂದು ಅವರ ಫೋಟೋವನ್ನು ವಿಧಾನಸಭೆಯಲ್ಲಿ  ಹಾಕಿದ್ದಾರೆ. ಬ್ರಿಟಿಷರ ಬಳಿ ಪಿಂಚಣಿ  ತೆಗೆದುಕೊಂಡವರನ್ನು ದೇಶ ಭಕ್ತ ಎಂದು ಕರೆಯಲಾಗುತ್ತಿದೆ. ಗೋ ಮಾತೆಯ ಪೂಜೆ ಮಾಡಬಾರದು ಎಂದು ಹೇಳಿದ ಸಾವರ್ಕರ್ ದೇಶ ಭಕ್ತ ಆಗಿದ್ದಾರೆ. ಬ್ರಿಟೀಷರಿಗೆ ಕ್ಷಮೆ ಕೇಳಿ ಪತ್ರ ಬರೆದ, ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಐಎನ್ ಎ ಗೆ  ತದ್ವಿರುದ್ಧವಾಗಿ ಬ್ರಿಟಿಷ್ ಆರ್ಮಿಗೆ ಸಿಬ್ಬಂದಿ ನೇಮಕ ಮಾಡಿದ ಇತಿಹಾಸ ಸಾವರ್ಕರ್ ಅವರಿಗಿದೆ‌. ಭಾರತ ವಿಭಜನೆಗೆ ಮೊದಲು ನಿಲುವು ವ್ಯಕ್ತಪಡಿಸಿದ್ದೂ ಸಾವರ್ಕರ್ ಅಂತವರ ಫೋಟೋವನ್ನು ವಿಧಾನಸಭೆಯಲ್ಲಿ ಅಳವಡಿಕೆ ಮಾಡುವ ಉದ್ದೇಶ ಏನು ಎಂದು ಪ್ರಶ್ನಿಸಿದರು.


ಇದನ್ನೂ ಓದಿ : Cyber Crime Cases: ಸೈಬರ್ ಖದೀಮರ ಪತ್ತೆ ಹಚ್ಚುವಲ್ಲಿ ಖಾಕಿ ವಿಫಲ: ಶೇ.10 ರಷ್ಟು ಮಾತ್ರ ಕೇಸ್ ಭೇದಿಸಿದ ಪೊಲೀಸರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.