ಬೆಂಗಳೂರು : ನಾಳೆ ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆ ಇಂದು ಬೆಳ್ಳಂ ಬೆಳಗ್ಗೆ ನಗರದ ಕೆಆರ್ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ-ವಹಿವಾಟು ಆರಂಭವಾಗಿದೆ. ಕೊರೊನಾ ನಡುವೆ ಮಾರುಕಟ್ಟೆಯಲ್ಲಿ ದೈಹಿಕ ಅಂತರವಿಲ್ಲ, ಜನರ ಮುಖದಲ್ಲಿ ಮಾಸ್ಕ್ ಮಾಯವಾಗಿ ಭಾರಿ ಜನಜಂಗುಳಿ ಉಂಟಾಗಿರುವುದು ಆತಂಕಕ್ಕೆ ಈಡಾಗಿದೆ. 


COMMERCIAL BREAK
SCROLL TO CONTINUE READING

ಗ್ರಾಹಕರು ಹಾಗೂ ವ್ಯಾಪಾರಿಗಳು ಹೂವು, ಹಣ್ಣು, ತರಕಾರಿ(Fruits and Vegetables) ಖರೀದಿಗೆ ಮುಗಿಬಿದಿದ್ದಾರೆ. ಬೆಲೆ ಏರಿಕೆ ಬಿಸಿ ನಡುವೆಯೂ ಖರೀದಿ ಭರಾಟೆ ಜೋರಾಗಿದೆ, ಆದರೆ ರಾಜ್ಯದಲ್ಲಿ ಭಾರಿ ಏರಿಕೆಯಾಗುತ್ತಿದೆ. ಸರ್ಕಾರ ಹೊರಡಿಸಿರುವ ಕೊರೊನಾ ಮಾರ್ಗ ಸೂಚಿಗಳು ಪಾಲನೆಯಾಗುತ್ತಿಲ್ಲ. ಬಿಬಿಎಂಪಿ ಮಾರ್ಷಲ್ಸ್ ಗಳು ಮಾಸ್ಕ್ ಹಾಕದವರಿಗೆ ದಂಡ ಹಾಕುತ್ತಿದ್ದಾರೆ. ಮಡಿವಾಳ ಮಾರುಕಟ್ಟೆಯಲ್ಲೂ ಜನರಿಂದ ತುಂಬಿ ತುಳುಕ್ಕುತ್ತಿದೆ. ಕೊರೊನ ಆತಂಕವಿಲ್ಲದೆ ಜನ ಖರೀದಿಗೆ ಮುಗಿ ಬಿದಿದ್ದಾರೆ.


[[{"fid":"226897","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದನ್ನೂ ಓದಿ : JOBS: ಆಡಳಿತ ಸಹಾಯಕ ಹುದ್ದೆ ಭರ್ತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ


ವ್ಯಾಪಾರಿಗಳ ಅಳಲು :


ಕೊರೊನ ಪ್ರಕರಣಗಳು(Corona Cases) ಹೆಚ್ಚುತ್ತಿರುವ ಹಿನ್ನೆಲೆ ಮತ್ತೆ ಲಾಕ್ ಡೌನ್ ಆಗುತ್ತಾ ಎಂಬ ಭಯದಲ್ಲಿ  ಸಣ್ಣಪುಟ್ಟ ವ್ಯಾಪಾರಿಗಳು ಬದುಕುತ್ತಿದ್ದಾರೆ. ಲಾಕ್ ಡೌನ್ ಮಾಡಿದ್ರೆ ತರಕಾರಿ, ಹಣ್ಣುಗಳ ದರ 2ರಿಂದ 3 ಪಟ್ಟು ಹೆಚ್ಚಾಗುವ ಭೀತಿ ಇದೆ. ಬೆಲೆ ಏರಿಕೆ ಬಿಸಿ ನಡುವೆ ಸಣ್ಣಪುಟ್ಟ ವ್ಯಾಪಾರಿಗಳ ವ್ಯಾಪಾರಕ್ಕೆ ಪರದಾಡುತ್ತಿದ್ದಾರೆ. 


[[{"fid":"226898","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]


ಮಾರುಕಟ್ಟೆ ಶಿಫ್ಟ್ : 


ಕೆ.ಆರ್. ಮಾರುಕಟ್ಟೆ(KR Market) ಸೇರಿದಂತೆ ದೊಡ್ಡ ದೊಡ್ಡ ಮಾರುಕಟ್ಟೆಗಳ ಸ್ಥಳಾಂತರಕ್ಕೆ ಬಿಬಿಎಂಪಿ ಪ್ಲ್ಯಾನ್ ಮಾಡುತ್ತಿದೆ. ಈ ಬಗ್ಗೆ ನಿನ್ನೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸುಳಿವು ನೀಡಿದ್ದಾರೆ. 


ಸರ್ಕಾರದಿಂದ ಟಫ್ ರೂಲ್ಸ್(Corona Guidelines) ವಿಸ್ತರಣೆ ಹಿನ್ನೆಲೆಯಲ್ಲಿ ಪಾಲಿಕೆ ನಗರದಲ್ಲಿ ಜನಸಂದಣಿ ಪ್ರದೇಶಗಳಿಗೆ ನಿಯಂತ್ರಣಕ್ಕೆ ಮುಂದಾಗಿದೆ. ಮಾರುಕಟ್ಟೆಗಳ ವಿಕೇಂದ್ರೀಕರಣ ಫಿಕ್ಸ್ ಮಾಡಲಾಗಿದೆ. ಸದ್ಯಕ್ಕೆ ಅಕ್ಕ ಪಕ್ಕದ ರಸ್ತೆಯಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಂದರೆ, ಮಾರುಕಟ್ಟೆ ಸುತ್ತಮುತ್ತ 1ರಿಂದ ಅರ್ಧ ಕಿಮೀ ಒಳಗೆ ಮಾರುಕಟ್ಟೆ ವಿಕೇಂದ್ರಿಕರಣ ಆಗಲಿದೆ. ಅಲ್ಲದೆ, ನ್ಯಾಷನಲ್ ಕಾಲೇಜು ಸೇರಿದಂತೆ ಓಪನ್ ಜಾಗಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಶೀಘ್ರ ಪೊಲೀಸರ ಜತೆ ಚರ್ಚಿಸಿ ತೀರ್ಮಾನ ಆಗಲಿದೆ ಎಂದಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ. 


[[{"fid":"226899","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"3":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"3"}}]]


ಇದನ್ನೂ ಓದಿ : ಗಂಡಸ್ತನ ತೋರಿಸುವುದಕ್ಕೆ ಹೋಗಿ ಮೇಕೆದಾಟನ್ನು ಮಸಣ ಮಾಡುವುದು ಬೇಡ- ಎಚ್.ಡಿ.ಕುಮಾರಸ್ವಾಮಿ


ಸಂಕ್ರಾಂತಿ ಹಿನ್ನೆಲೆ ತರಕಾರಿ ಬೆಲೆ ದುಪ್ಪಟ್ಟು!


                 ಮಾಮೂಲಿ ದರ               ಹಬ್ಬದ ದರ
ಕ್ಯಾರೇಟ್:            60                               75
ಬೀನ್ಸ್:                 45                               60
ಅವರೆಕಾಯಿ:       60                               100
ಗೆಣಸು:                30                               60
ಕಬ್ಬು:                  60                              100
ಟೊಮ್ಯಾಟೊ:      30                              50 


ಸಂಕ್ರಾಂತಿ ಹಬ್ಬಕ್ಕೆ ವೀಕೆಂಡ್ ಕರ್ಫ್ಯೂ ಅಡ್ಡಿ: 


ನಾಳೆ ಸಂಕ್ರಾಂತಿ ಹಬ್ಬ(sankranti festival) ಇರುವುದರಿಂದ ಇಂದಿನಿಂದಲೇ ಜನ ಹಬ್ಬಕ್ಕೆ ಬೇಕಾದ ಸಾಮಾಗ್ರಿಗಳ ಖರೀದಿಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. 


ನಾಳೆ ರಾತ್ರಿ 10 ರಿಂದಲೇ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆ, ಹಬ್ಬಕ್ಕೆ ಬೇಕಾದ ಕಬ್ಬು, ಎಳ್ಳು-ಬೆಲ್ಲ, ಸಿಹಿ ಗೆಣಸು, ಕಡಲೇಕಾಯಿ, ಅವರೇಕಾಯಿ ಕಬ್ಬಿನ ಜಲ್ಲೆಯನ್ನು  ಖರೀದಿ ಮಾಡಿ ವಾಹನಗಳಲ್ಲಿ ಸಿಟಿ ಮಂದಿ ಹೊತ್ತೊಯ್ಯುತ್ತಿದ್ದಾರೆ. ಇಂದು ಮತ್ತು ನಾಳೆ ಮಾತ್ರ ಖರೀದಿಗೆ ಅವಕಾಶ ನೀಡಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.