ಬೆಂಗಳೂರು: ನವರಾತ್ರಿ ಮುಗಿದು ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಹೂವು, ಹಣ್ಣು, ತರಕಾರಿ, ದ್ವಿದಳ ಧಾನ್ಯದ ಬೆಲೆ ಗಗನಕ್ಕೇರಿದೆ. ರಾಜ್ಯದಲ್ಲಿ ಸಮೃದ್ಧ ಮಳೆ ಆಗಿದ್ದರೂ ಬಹುತೇಕ ತರಕಾರಿ ಬೆಲೆ ಗಗನದತ್ತ ಮುಖ ಮಾಡಿವೆ ಈರುಳ್ಳಿ ದರ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ.ಇದರಿಂದ ಗ್ರಾಹಕರಿಗೆ ಭಾರಿ ಆರ್ಥಿಕ  ಹೊಡೆತ ಬೀಳುತ್ತಿದೆ.


COMMERCIAL BREAK
SCROLL TO CONTINUE READING

ತರಕಾರಿ ಹೆಚ್ಚು ಪೂರೈಕೆಯಾಗುವ ಬಯಲು ಸೀಮೆಯಲ್ಲಿ ಅಧಿಕ ಮಳೆಯಿಂದ ತರಕಾರಿ, ಈರುಳ್ಳಿ ಬೆಳೆ ಹಾನಿಗೊಂಡಿದೆ. ಇದರಿಂದ ತರಕಾರಿ ಪೂರೈಕೆ ಕಡಿಮೆಯಾಗಿದೆ. ಮಾರ್ಚ್, ಮೇ, ಜೂನ್‌ನಲ್ಲಿ 25 ರೂ. ಇದ್ದ ಟೊಮೇಟೋ ಈಗ 50 ರೂ. ವರೆಗೆ ಏರಿಕೆಯಾಗಿದೆ. ಈರುಳ್ಳಿ ಬೆಲೆ 80 ರೂ. ವರೆಗೆ ಏರಿಕೆ ಕಂಡಿದ್ದು, ಆಲೂಗಡ್ಡೆ, ಬೀನ್ಸ್‌, ಕ್ಯಾರೆಟ್‌, ನುಗ್ಗೆ, ಹಸಿ ಮೆಣಸು ಬೆಲೆಯು ದುಪ್ಪಟ್ಟಾಗಿದೆ. ಇದರ ಹೊರತಾಗಿ ಹೂವು, ಹಣ್ಣು ಬೆಲೆಯಲ್ಲಿಯೂ ಏರಿಕೆಯಾಗಿದೆ.


ಆಲೂಗಡ್ಡೆ-20


ಬೀನ್ಸ್‌- 80


ಕ್ಯಾರೆಟ್‌-50


ನುಗ್ಗೆ -60


ಹಸಿ ಮೆಣಸು-40


ಕೊರೊನಾ ಲಾಕ್‌ಡೌನ್‌ ವೇಳೆ ತರಕಾರಿ ಕೊರತೆ ಉಂಟಾಗದಂತೆ ರೈತರು ಬೆಳೆದ ಫಸಲಿಗೆ ಉತ್ತಮ ಮಾರುಕಟ್ಟೆ ದೊರೆಯಲೆಂದು ಸರ್ಕಾರವು ರಾಜ್ಯದ ನಗರಗಳಲ್ಲಿ ಹಾಪ್‌ಕಾಮ್ಸ್‌ ಮಳಿಗೆ ಆರಂಭಿಸಿತ್ತು. ಆದರೆ, ಈಗ ತರಕಾರಿ ಬೆಲೆ ದುಪ್ಪಟ್ಟು ಆಗಿರುವುದರಿಂದ ಗ್ರಾಹಕರು ತರಕಾರಿ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.