ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಬಳಿಸಿ ಅಂತ ಎಷ್ಟೇ ಪ್ರಚಾರಾಂದೋಲನ ಮಾಡಿದರೂ ಜನ ಕೇಳ್ತಿಲ್ಲ. ಮನೆ ಮಂದಿಗೆಲ್ಲಾ ಒಂದು ಎರಡು ಮೂರು ವಾಹನ ಇಟ್ಟಿಕೊಂಡಿರೋದು ಇದೀಗ ಬೆಂಗಳೂರಿಗೆ ಮಾರಕವಾಗ್ತಿದೆ. ನಗರದಲ್ಲಿ ಹೆಚ್ಚಾಗ್ತಿರೋ ವಾಹನಗಳ ಸಂಖ್ಯೆ ಭವಿಷ್ಯದಲ್ಲಿ ಉಸಿರಾಡುವ ಗಾಳಿ ವಿಷಕಾರಿಯಾಗುವ ಆತಂಕ ಇದೆ. ವಾಹನ ದಟ್ಟನೆ ತಗ್ಗಿಸಲು ನಮ್ಮ ಮೆಟ್ರೋ ಸಂಚಾರವನ್ನು ಆರಂಭಿಸಿದ್ರೂ ನಗರದಲ್ಲಿ ಪ್ರತಿ ವರ್ಷ ಲಕ್ಷ ಲಕ್ಷ ವಾಹನಗಳು ನೋಂದಣಿಯಾಗ್ತಿರೋದು ಅಚ್ಚರಿ ಮೂಡಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಒಟ್ಟು 6 ಲಕ್ಷ ಮನೆಗಳನ್ನು ಡಿಸೆಂಬರ್ ಮಾಹೆಯೊಳಗೆ ಪೂರ್ಣಗೊಳಿಸಿ: ಸಿಎಂ ಬೊಮ್ಮಾಯಿ


ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಿದ್ದಂತೆ ವಾಹನಗಳ ಸಂಖ್ಯೆ ಹೆಚ್ಚಾಗ್ತಿದೆ. ಜನಸಂಖ್ಯೆ ಸುಮಾರು1.ಕೋಟಿ 30 ಲಕ್ಷ ಇದೆ. ಆದ್ರೆ ವಾಹನ ಸಂಖ್ಯೆ ಒಂದು ಕೋಟಿ ದಾಟುತ್ತಿದೆ. ಜನ ಸಾರ್ವಜನಿಕ ಸಾರಿಗೆ ವಾಹನಗಳ ಮೇಲೆ ಅವಲಂಬಿತವಾಗುವುದಕ್ಕಿಂತ ಹೆಚ್ಚಾಗಿ, ತಮ್ಮದೇ ಖಾಸಗಿ ವಾಹನಕೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.


ವಾಹನಗಳ ಯಾವ ವರ್ಷದಲ್ಲಿ ಏರಿಕೆ ಆಗಿವೆ:


  • ಬೆಂಗಳೂರಿನಲ್ಲಿ ಜನವರಿ2022 ರ ಅಂತ್ಯದವರೆಗೂ  98,38,156 ವಾಹನಗಳು ನೋಂದಣಿ

  •  2020 ಮಾರ್ಚ್ ನಲ್ಲಿ 94, 71,072 ವಾಹನಗಳು ಮಾತ್ರ ಇದ್ದವು.

  • ಆದ್ರೆ 2021ಮಾರ್ಚ್ ನಲ್ಲಿ 98, 38,156 ಕ್ಕೆ ಏರಿಕೆ ಕಂಡಿದೆ.

  • ನಗರದಲ್ಲಿ ಪ್ರತಿ ವರ್ಷ 5 ಲಕ್ಷಕ್ಕೂ ಹೊಸ ವಾಹನಗಳು ಸೇರ್ಪಡೆ


ಪ್ರತಿಯೊಂದು ಮನೆಯಲ್ಲಿಯೂ ಕನಿಷ್ಠ ವಾಹನಗಳಿರಬೇಕು, ಕೆಲವೊಮ್ಮೆ ಮನೆಯಲ್ಲಿ ಕೇವಲ ಇಬ್ಬರೇ ಮಂದಿಯಿದ್ದರೂ ನಾಲ್ಕೈದು ವಾಹನಗಳಿರುತ್ತವೆ. ಡೀಸೆಲ್ ವಾಹನಗಳ ನೋಂದಣಿಯನ್ನು ತಗ್ಗಿಸಬೇಕಾಗುತ್ತದೆ. ನಗರದಲ್ಲಿ ದ್ವಿಚಕ್ರ, ಕಾರುಗಳು ಆಮ್ನಿ ಬಸ್,ಸೇರಿ ಸಾರಿಗೇಯೇತರ ವಾಹನ ಸಂಖ್ಯೆ ನೇ ಬರೋಬ್ಬರಿ 86 ಲಕ್ಷ 98 ಸಾವಿರ ವಾಹನಗಳಿವೆ.


ಯಾವ ಯಾವ ವಾಹನಗಳು


  • ಟ್ರಕ್ಸ್ ಮತ್ತು ಲಾರಿಗಳೇ 1 ಲಕ್ಷ 84 ಸಾವಿರ ನೋಂದಣಿ ಆಗಿವೆ.

  • ಬಸ್ಸುಗಳು 1 ಲಕ್ಷ 15 ಸಾವಿರ ಇದ್ರೆ

  • ಟ್ಯಾಕ್ಸಿ ಗಳ ಸಂಖ್ಯೆ 2 ಲಕ್ಷ 50 ಸಾವಿರ ದಾಟಿದೆ.

  • ಒಟ್ಟಾರೆ ನಗರದಲ್ಲಿ 98 ಲಕ್ಷ 38 ಸಾವಿರದ 156 ವಾಹನಗಳು ಇಲ್ಲಿವರೆಗೂ ನೋಂದಣಿ ಆಗಿವೆ. 


ಇದನ್ನೂ ಓದಿ: 'ಅಕ್ರಮ ಹಣದಿಂದಲೇ ಬಿಜೆಪಿ ಇಂದು ದೇಶದಲ್ಲಿ ಶ್ರೀಮಂತ ಪಕ್ಷವಾಗಿದೆ'


ನಗರದಲ್ಲಿ ವಾಹನ ದಟ್ಟಣೆಯನ್ನು ಕಡಿಮೆಮಾಡಬೇಕಾಗಿದ್ದರೆ ಕಾರ್ಪೂಲಿಂಗ್ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ. ಇದರಿಂದ ಹೆಚ್ಚು ವಾಹನಗಳು ರಸ್ತೆಗೆ ಬರುವುದನ್ನು ತಡೆಯಬಹುದಾಗಿದೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಮನೆಗೆ ಕಾರ್ ಇಲ್ಲಕಾರ್ ಕೊಳ್ಳಬೇಕಾದರೆ ಮನೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಬೇಕು, ಇಲ್ಲವಾದಲ್ಲಿ ನೋಂದಣಿಗೆ ಅವಕಾಶವಿಲ್ಲ ಎಂಬ ಕಟ್ಟುನಿಟ್ಟಿನ ಕಾನೂನು ಜಾರಿಯಾಗಬೇಕಿದೆ. ಸಾರ್ವಜನಿಕರು ನಗರದಲ್ಲಿ ಓಡಾಟಕ್ಕೆ ಮೆಟ್ರೋ ಮತ್ತು ಬಿಎಂಟಿಸಿ ಬಸ್ಗಳನ್ನು ಬಳಸಬೇಕು. ಇದರಿಂದ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಗುತ್ತದೆ. ಆದರೆ ಈ ರೀತಿಯ ತೀರ್ಮಾನ ಮಾಡದೆ ಇರೋದು ನಗರದಲ್ಲಿ ಸಂಚಾರ ದಟ್ಟನೆಗೆ ಕಾರಣವಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.