SSLC - PUC ವಿದ್ಯಾರ್ಥಿಗಳ ಗಮನಕ್ಕೆ: ಶೀಘ್ರದಲ್ಲಿ ಪ್ರಕಟವಾಗಲಿದೆ ಪರೀಕ್ಷಾ ದಿನಾಂಕ!
ಕರೋನ ಕಾರಣದಿಂದಾಗಿ ಈ ವರ್ಷ 1ರಿಂದ 8ನೇ ತರಗತಿವರೆಗೆ ಶೈಕ್ಷಣಿಕ ವರ್ಷ ಇಲ್ಲ
ಬೆಂಗಳೂರು: ಕರೋನ ಕಾರಣದಿಂದಾಗಿ ಈ ವರ್ಷ 1ರಿಂದ 8ನೇ ತರಗತಿವರೆಗೆ ಶೈಕ್ಷಣಿಕ ವರ್ಷ ಇಲ್ಲ. ಆದರೆ ಬೋರ್ಡ್ ಎಕ್ಸಾಂ ಇರುವುದರಿಂದ SSLC ಹಾಗೂ ದ್ವಿತೀಯ ಪಿಯು ಪರೀಕ್ಷಾ ದಿನಾಂಕಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸುರೇಶ್ ಕುಮಾರ್(Suresh Kumar), ಡಿಸೆಂಬರ್ ಅಂತ್ಯದವರೆಗೂ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳು ತೆರೆಯುವುದಿಲ್ಲ. ಡಿಸೆಂಬರ್ ನಂತರ ಮತ್ತೊಮ್ಮೆ ಸಭೆ ನಡೆಸಿ ಚರ್ಚಿಸಲಾಗುವುದು. ಈ ವರ್ಷ 1-8ನೇ ತರಗತಿವರೆಗೆ ಶಾಲೆ ತೆರೆಯುವ ಬಗ್ಗೆ ಯೋಚನೆಯೇ ಇಲ್ಲ. ಹಾಗಂತ 'ಝಿರೋ ಇಯರ್' ಎಂದು ಪರಿಗಣಿಸಲಾಗಲ್ಲ, ಬೇರೆ ಬೇರೆ ವಿಧಗಳಲ್ಲಿ ತರಗತಿಗಳು ನಡೆಯುತ್ತದೆ ಎಂದರು.
ಸದ್ಯಕ್ಕೆ ಶಾಲೆ ಆರಂಭ ಇಲ್ಲ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಇನ್ನು SSLC ಹಾಗೂ ಪಿಯುಸಿ ಬೋರ್ಡ್ ಪರೀಕ್ಷೆ ಇರುವುದರಿಂದ ಪರೀಕ್ಷಾ ದಿನಾಂಕಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು. 10ನೇ ತರಗತಿಯಲ್ಲಿ 9,59,566 ಮಕ್ಕಳು ಪರೀಕ್ಷೆ ಬರೆಯುವವರಿದ್ದಾರೆ. ಇನ್ನು ದ್ವಿತೀಯ ಪಿಯುಸಿಯಲ್ಲಿ 5,70,126 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಹೀಗಾಗಿ ಮಕ್ಕಳಿಗೆ ಪ್ರೇರಣೆ, ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಪರೀಕ್ಷೆ ದಿನಾಂಕ ಪ್ರಕಟಿಸುತ್ತೇವೆ ಎಂದು ತಿಳಿಸಿದರು.
ಬಿಎಸ್ ವೈ ಆಪ್ತರಿಂದಲೇ 'ಸಿಎಂ ಕುರ್ಚಿಗೆ' ಆಪತ್ತು!
ಇದೇ ವೇಳೆ ಖಾಸಗಿ ಶಾಲೆಯವರು ಎರಡನೇ ಅವಧಿಯ ಶುಲ್ಕ ಪಡೆಯುವ ಬಗ್ಗೆ ಬೇಡಿಕೆ ಬಂದಿದ್ದು, ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಹೇಳಿದರು.
ಯಡಿಯೂರಪ್ಪಗೆ ರೈತರ ಹಿತಕ್ಕಿಂತ ಸರ್ಕಾರ ಉಳಿಸಿಕೊಳ್ಳೋದೇ ಮುಖ್ಯವಾಗಿದೆ: ಡಿ.ಕೆ. ಶಿವಕುಮಾರ್