ಯುವ ಸಾಹಿತಿ ಸವಿರಾಜ್ ಆನಂದೂರಗೆ ವಿಭಾ ಸಾಹಿತ್ಯ ಪುರಸ್ಕಾರ
10ನೇ ಮೇ ಸಾಹಿತ್ಯ ಮೇಳದ ಹಿನ್ನೆಲೆಯಲ್ಲಿ ನೀಡಲಾಗುವ ವಿಭಾ ಸಾಹಿತ್ಯ ಪುರಸ್ಕಾರಕ್ಕೆ ಯುವ ಸಾಹಿತಿ ಸವಿರಾಜ್ ಆನಂದೂರ ಪಾತ್ರರಾಗಿದ್ದಾರೆ.
ಕೊಪ್ಪಳ: 10ನೇ ಮೇ ಸಾಹಿತ್ಯ ಮೇಳದ ಹಿನ್ನೆಲೆಯಲ್ಲಿ ನೀಡಲಾಗುವ ವಿಭಾ ಸಾಹಿತ್ಯ ಪುರಸ್ಕಾರಕ್ಕೆ ಯುವ ಸಾಹಿತಿ ಸವಿರಾಜ್ ಆನಂದೂರ ಪಾತ್ರರಾಗಿದ್ದಾರೆ.
ಸವಿರಾಜ್ ಆನಂದೂರು ಹುಟ್ಟಿದ್ದು 1987 ರಲ್ಲಿ, ಆಗುಂಬೆ ಸಮೀಪದ ಆನಂದೂರ ಹುಟ್ಟಿದ ಊರು. ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವೀಧರ. ಹವ್ಯಾಸಿ ತಾಳಮದ್ದಲೆ ಅರ್ಥಧಾರಿ, ರಂಗಭೂಮಿ ಕಲಾವಿದ. ಪ್ರಸ್ತುತ ಬೆಂಗಳೂರಿನ ಗೋಪಾಲನ್ ಕಾಲೇಜ್ ಆಫ್ ಇಂಜಿನಿಯರಿಂಗ್ ನೇಜೆಂಟ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಥೆಗಾರರಾಗಿಯೂ ಹಲವು ಕಥಾಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ. 'ಬ್ಲೂಬುಕ್' ಹಾಗೂ 'ನಕ್ಷತ್ರಕಡ್ಡಿ' ಅವರ ಈವರೆಗಿನ ಪ್ರಕಟಿತ ಕೃತಿಗಳು.
2023 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಸವಿರಾಜ್ ಆನಂದೂರು ಅವರ 'ಗಂಡಸರನ್ನು ಕೊಲ್ಲಿರಿ ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ.ಕವಿ, ವಿಮರ್ಶಕರಾದ ಡಾ. ಸಬಿಹಾ ಭೂಮಿಗೌಡ ಮತ್ತು ಡಾ. ಚಂದ್ರಶೇಖರ ತಾಳ್ಯ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು.
'ನಿರೂಪಣೆಯ ಹೊಸತನ, ಸೂಕ್ಷ್ಮ ವ್ಯಂಗ್ಯ, ಕಟಕಿ, ಬೆರಗುಗೊಳಿಸುವ ವಿಪರ್ಯಾಸದ ವಿನ್ಯಾಸಗಳನ್ನು ಹೆಣೆಯುತ್ತಾ ವಿರುದ್ಧ ದಿಕ್ಕಿನಲ್ಲಿ ಸಾಗಿ ಸರಿದಾರಿಗೆ ಬಂದಂತೆ ಮಾಡುವ ಗ್ರಹಿಕೆಯ ಕ್ರಮ, ಗದ್ಯಗಂಧೀಲಯದಲ್ಲೇ ಪರವಶಗೊಳಿಸುವಂತಿರುವ ಶೈಲಿ ಗಮನಸೆಳೆಯುವ ಕಾರಣಕ್ಕೆ 'ಗಂಡಸರನ್ನು ಕೊಲ್ಲಿರಿ ನಮ್ಮ ಆಯ್ಕೆ' ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ.ಈ ಪುರಸ್ಕಾರವು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ.ಈ ಪ್ರಶಸ್ತಿಯನ್ನು ಲಡಾಯಿ ಪ್ರಕಾಶನ ಪ್ರಾಯೋಜಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.