ಬೆಂಗಳೂರು: ತುಮಕೂರು ಜಿಲ್ಲೆಯ ಕುಣಿಗಲ್ ಬಳಿ ಸೋಮವಾರ ಮಧ್ಯರಾತ್ರಿ ನಡೆದ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸಿ.ಟಿ.ರವಿ ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ಅಪಘಾತ ಉದ್ದೇಶಪೂರ್ವಕ ಅಲ್ಲ. ಇದು ನಿಜಕ್ಕೂ ದುರದೃಷ್ಟಕರ. ಘಟನೆಯಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದು, ಸದ್ಯದಲ್ಲೇ ಮೃತರ ಕುಟುಂಬವನ್ನು ಭೇಟಿ ಮಾಡಲಿದ್ದೇನೆ. ಮೃತರ ಕುಟಂಬಕ್ಕೆ ದೇವರು ದುಖಃವನ್ನು ಭರಿಸುವ ಶಕ್ತಿ ಕೊಡಲಿ ಎಂದು ಹೇಳಿರುವ ಸಿ.ಟಿ.ರವಿ ಅವರು ಫೇಸ್ಬುಕ್'ನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.


"ನಿನ್ನೆ ರಾತ್ರಿ ಕುಣಿಗಲ್ ಬಳಿ ನಡೆದ ಅಪಘಾತ ದುರದೃಷ್ಟಕರ. ನಾನು ರಾತ್ರಿ 11.30ಕ್ಕೆ ಚಿಕ್ಕಮಗಳೂರಿನಿಂದ ಹೊರಟೆ. ಮಧ್ಯದಲ್ಲಿ ನಾನು ನಿದ್ದೆ ಮಾಡ್ತಾ ಇದ್ದೆ. ಆಗ ನನ್ನ ಡ್ರೈವರ್​ ಆಕಾಶ್​​​ ಅಂತಾ, ಅವನು ಕಾರು ಡ್ರೈವ್​ ಮಾಡ್ತಾ ಇದ್ದ. ಕಾರಲ್ಲಿ ನಾನು, ಡ್ರೈವರ್​​ ಆಕಾಶ್, ಗನ್​ ಮ್ಯಾನ್​​ ರಾಜಾ ನಾಯಕ್​​ ಒಟ್ಟು ಮೂರು ಜನ ಪ್ರಯಾಣ ಮಾಡ್ತಾ ಇದ್ದೆವು. ಏರ್​ ಬ್ಯಾಗ್​ ಓಪನ್​ ಆಗಿ ಕಾರು ನಿಂತ ಮೇಲೆ ನನಗೆ ಎಚ್ಚರವಾಗಿದ್ದು. ಆಮೇಲೆ ಕಾರಿಗೆ ಏನೋ ಆಗಿದೆ ಅಂತಾ ಅನಿಸಿತು. ಅದುವರೆಗೂ ಏನ್​ ಆಗಿದೆ ಅಂತಾ ಗೊತ್ತಿರಲಿಲ್ಲ. ತಕ್ಷಣ ನಾನು ಎದ್ದೆ, ಅಷ್ಟರಲಿ ನನಗೆ ಎದೆ ನೋವು ಉಂಟಾಯ್ತು ಹಾಗೂ ಮೈಕೈ ತರಚಿತು ಗಾಯಗಳಾಗಿದ್ದವು . ತಕ್ಷಣ ನೋಡಿದೆ ಇಬ್ಬರು ನಿಧನರಾಗಿದ್ದರು. ನಾನೇ ಸ್ವತಃ ಆ್ಯಂಬುಲೆನ್ಸ್​​ಗೆ ಫೋನ್​ ಮಾಡಿದೆ. ಪೊಲೀಸ್​ ಸಬ್​ ಇನ್ಸ್​​​​ಪೆಕ್ಟರ್ ಹಾಗೂ ಆ್ಯಂಬುಲೆನ್ಸ್ ಬಂದ ನಂತರ ಗಾಯಾಳುಗಳನ್ನು ಮತ್ತು ಮೃತರನ್ನು ಸ್ಥಳಾಂತರಿಸಿದೆ. ಬಳಿಕ ನಾನು ವಿಕ್ರಂ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದೆ......... ನನಗೆ ಮೃತರ ಕುಟುಂಬದವರ ನೋವು ಅರ್ಥ ಆಗುತ್ತೆ. ಯಾರೂ ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ, ಅನ್ನೋದನ್ನಷ್ಟೇ ನಾನು ಈ ಸಂದರ್ಭದಲ್ಲಿ ಹೇಳಲು ಬಯಸುತ್ತೇನೆ" ಎಂದು ವೀಡಿಯೋದಲ್ಲಿ ಸಿ.ಟಿ.ರವಿ ಹೇಳಿದ್ದಾರೆ.



ಸೋಮವಾರ ಮಧ್ಯರಾತ್ರಿ ಕುಣಿಗಲ್‌ನ ಹೇರೂರು ಬಳಿಯ ಬೈಪಾಸ್ ನಲ್ಲಿ ಸಿ.ಟಿ.ರವಿ ಅವರು ಪ್ರಯಾಣಿಸುತ್ತಿದ್ದ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಆ ಬಳಿಕ ಸಿ.ಟಿ.ರವಿ ಅವರು ಅಪಘಾತ ಎಸಗಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿ ಸ್ಥಳಿಯರು ಶಾಸಕರ ವಿರುದ್ಧ ಘೋಷಣೆಗಳನ್ನೂ ಕೂಗಿ ಪ್ರತಿಭಟನೆ ನಡೆಸಿದ್ದಾರೆ.