Video: ಕೋಟೆನಾಡಿನಲ್ಲಿ ಪುಟ್ಟ ಬಾಲಕನೊಂದಿಗೆ ಡಿಪ್ಸ್ ಹೊಡೆದ ರಾಹುಲ್ ಗಾಂಧಿ
ಕೋಟೆ ನಾಡು ಚಿತ್ರದುರ್ಗದಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ಇತ್ತ ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಪಾದಯಾತ್ರೆಗೆ ಮೊಡ ಕವಿದ ವಾತಾವರಣದಲ್ಲೂ ಮುಂದುವರಿದಿದೆ. ಮಂಗಳವಾರ (ಅಕ್ಟೋಬರ್ 11) ಹರ್ತಿಕೋಟೆ ಇಂದ ಹೊರಟ ಪಾದಯಾತ್ರೆ ಚಳ್ಳಕೆರೆ ತಲುಪಿತು. ಈ ಮಧ್ಯೆ, ಭಾರತ್ ಜೋಡೋ ಯಾತ್ರೆಯಲ್ಲಿ ಪುಟ್ಟ ಬಾಲಕನೊಂದಿಗೆ ರಾಹುಲ್ ಗಾಂಧಿ ಒಡನಾಟ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಚಿತ್ರದುರ್ಗ: ಸಾಲು ಸಾಲು ಜನ, ಎಲ್ಲಿ ನೋಡಿದರೂ ಕಾಂಗ್ರೆಸ್ ನಾಯಕರ ಭಾವುಟ, ಮೋಡ ಕವಿದ ವಾತಾವರಣ, ತುಂತುರು ಹನಿಮಳೆ. ಮಳೆಯಲ್ಲಿ ನೆನೆದರೂ ಭಾರೀ ಉತ್ಸಾಹದಿಂದ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಕಾಂಗ್ರೆಸ್ ನಾಯಕರು. ಈ ದೃಶ್ಯ ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗದಲ್ಲಿ.
ವಾಸ್ತವವಾಗಿ, ಕೋಟೆ ನಾಡು ಚಿತ್ರದುರ್ಗದಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ಇತ್ತ ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಪಾದಯಾತ್ರೆಗೆ ಮೊಡ ಕವಿದ ವಾತಾವರಣದಲ್ಲೂ ಮುಂದುವರಿದಿದೆ. ಮಂಗಳವಾರ (ಅಕ್ಟೋಬರ್ 11) ಹರ್ತಿಕೋಟೆ ಇಂದ ಹೊರಟ ಪಾದಯಾತ್ರೆ ಚಳ್ಳಕೆರೆ ತಲುಪಿತು. ಈ ಮಧ್ಯೆ, ಭಾರತ್ ಜೋಡೋ ಯಾತ್ರೆಯಲ್ಲಿ ಪುಟ್ಟ ಬಾಲಕನೊಂದಿಗೆ ರಾಹುಲ್ ಗಾಂಧಿ ಒಡನಾಟ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಇದನ್ನೂ ಓದಿ- ಬಿಜೆಪಿಗೆ ರೈತರ ಹಾಗೂ ಬಡವರ ಬಗ್ಗೆ ಕಾಳಜಿ ಇಲ್ಲ: ರಾಹುಲ್ ಗಾಂಧಿ
ಕೋಟೆನಾಡು ಚಿತ್ರದುರ್ಗದಲ್ಲಿ ರಾಹುಲ್ ಕ್ರೇಜ್:
ಚಳ್ಳಕೆರೆ ರಸ್ತೆಯ ಸಾಣಿಕೆರೆ ಬಳಿ ಇರುವ ಚೇತನ್ ಹೋಟೆಲ್ ವಿಶ್ರಾಂತಿ ಪಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾದಯಾತ್ರೆ ಮುಂದುವರಿಸಿದರು. ಸೋಮವಾರ ಹಿರಿಯೂರು ತಲುಪಿದ್ದ ಭಾರತ್ ಜೋಡೋ ಪಾದಯಾತ್ರೆ ಮಂಗಳವಾರ ಬೆಳಗ್ಗೆ ಹರ್ತಿಕೋಟೆಯಿಂದ ಸಾಣಿಕೆರೆ ತಲುಪಿ ಅಲ್ಲಿಂದ ಚಳ್ಳಕೆರೆ ಕಡೆಗೆ ಸಾಗಿತು. ಚಳ್ಳಕೆರೆ ರಸ್ತೆ ಮಾರ್ಗದಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಗಳು ರಾರಾಜಿಸುತ್ತಿದ್ದವು.
ಇದನ್ನೂ ಓದಿ- ಚುನಾವಣೆ ಮೂಡ್ಗೆ ಜಾರಿದ ರಾಜಕೀಯ ಪಕ್ಷಗಳು ; 3 ಪಾರ್ಟಿಯಿಂದ ಯಾತ್ರೆ ಪಟ್ಟಿ ಸಿದ್ದ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿಗೆ ಎಂಟ್ರಿಯಾದ ಭಾರತ್ ಜೋಡೋ ಪಾದಯಾತ್ರೆ ವೇಳೆ ಸಿಕ್ಕ ಬಾಲಕನೊಬ್ಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮಸಲ್ ಮುಟ್ಟಿ ಅವರ ಶಕ್ತಿ ಚೆಕ್ ಮಾಡಿದನು. ಪುಟ್ಟ ಬಾಲಕನೊಂದಿಗೆ ಮಗುವಾಗಿಯೇ ವರ್ತಿಸಿದ ರಾಹುಲ್ ಗಾಂಧಿ ಕೊನೆಗೆ ರಸ್ತೆಯಲ್ಲಿಯೇ ಆ ಬಾಲಕನೊಂದಿಗೆ ಡಿಪ್ಸ್ ಹೊಡೆದಿದ್ದಾರೆ. ರಸ್ತೆಯಲ್ಲಿಯೇ ಬಾಲಕನೊಟ್ಟಿಗೆ ಡಿಪ್ಸ್ ಹೊಡೆದ ರಾಹುಲ್ ಗಾಂಧಿ ಅವರ ಸರಳತೆಗೆ ಸಖತ್ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.
ರಸ್ತೆಯಲ್ಲೇ ಬಾಲಕನೊಟ್ಟಿಗೆ ರಾಗಾ ವರ್ಕೌಟ್ ಹೇಗಿದೆ ನೀವೇ ನೋಡಿ...
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.