Vijay Mallya ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಹೇಳಿದ್ದೇನು?
Contempt Matter Against Vijay Mallya - ವಿಜಯ್ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್: ನಾವು ಸಾಕಷ್ಟು ಸಮಯ ಕಾಯುತ್ತಿದ್ದೇವೆ, ಇನ್ನು ಮುಂದೆ ಕಾಯಲು ಸಾಧ್ಯವಿಲ್ಲ.
Vijay Mallya Contempt Case: ದೇಶದ ಬ್ಯಾಂಕ್ ಗಳಿಗೆ ಕೋಟ್ಯಾಂತರ ರೂಪಾಯಿಗಳ ಪಂಗನಾಮ ಹಾಕಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಮದ್ಯ ದೊರೆ, ಉದ್ಯಮಿ ವಿಜಯ್ ಮಲ್ಯ (Vijay Mallya) ಅವರ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಜನವರಿ 18 ರಂದು ಪರಿಗಣಿಸಲಿದೆ. 2017ರಲ್ಲಿ ಸುಪ್ರೀಂ ಕೋರ್ಟ್ (Supreme Court) ನಿಂದ ಮಲ್ಯ ದೋಷಿ ಎಂದು ತೀರ್ಪು ನೀಡಿತ್ತು. ಅಪರಾಧಿಯನ್ನು ಹಸ್ತಾಂತರಿಸಬೇಕೆ ಅಥವಾ ಬೇಡವೇ, ಶಿಕ್ಷೆಯ ತೀರ್ಪಿಗೆ ಇನ್ನು ಮುಂದೆ ಕಾಯುವುದಿಲ್ಲ ಎಂದು ನ್ಯಾಯಾಲಯ ಇಂದು ಹೇಳಿದೆ. ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ (Justice UU Lalit) ಮೂವರು ನ್ಯಾಯಾಧೀಶರ ಪೀಠವು (SC) ಅಪರಾಧಿ ತನ್ನ ವಕೀಲರ ಮೂಲಕ ತನ್ನ ವಾದವನ್ನು ಮಂಡಿಸಬಹುದು ಎಂದು ಹೇಳಿದೆ. ನ್ಯಾಯಾಲಯವು ಈ ವಿಷಯದಲ್ಲಿ ಸಹಾಯ ಮಾಡಲು ಹಿರಿಯ ವಕೀಲ ಜೈದೀಪ್ ಗುಪ್ತಾ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸಿದೆ.
9 ಮೇ 2017 ರಂದು ಸುಪ್ರೀಂ ಕೋರ್ಟ್ ಮಲ್ಯ ಅವರನ್ನು ಅಪರಾಧಿ ಎಂದು ಘೋಷಿಸಿತ್ತು. ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸಿದ ನಂತರ ಮಲ್ಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು. ಡಿಯಾಗೋ ಡೀಲ್‌ನ 40 ಮಿಲಿಯನ್ ಡಾಲರ್‌ಗಳನ್ನು ತನ್ನ ಮಕ್ಕಳ ವಿದೇಶಿ ಖಾತೆಗಳಿಗೆ ವರ್ಗಾಯಿಸಿದ್ದಕ್ಕಾಗಿ ಮತ್ತು ನಿಖರವಾದ ಆಸ್ತಿ ವಿವರಗಳನ್ನು ನೀಡಲು ವಿಫಲವಾದ ಕಾರಣಕ್ಕಾಗಿ ಅವರಿಗೆ ನ್ಯಾಯಾಂಗ ನಿಂದನೆಯ ದೋಷಿ ಎಂದು ಘೋಷಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅವರ ಮರುಪರಿಶೀಲನಾ ಅರ್ಜಿಯನ್ನೂ ಸಹ ವಜಾಗೊಳಿಸಲಾಗಿದೆ.
ಇದನ್ನೂ ಓದಿ-Kingfisher House Sold: ಕೊನೆಗೂ ಹರಾಜಾದ ವಿಜಯ್ ಮಲ್ಯಗೆ ಸೇರಿದ Kingfisher House, ಎಷ್ಟು ಬೆಲೆ ಬಂತು ಗೊತ್ತಾ?
ಇದಕ್ಕೂ ಮೊದಲು ಅಕ್ಟೋಬರ್ 5, 2020 ರಂದು, ಈ ವಿಷಯವನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸಲಾಗಿತ್ತು. ಆ ಸಂದರ್ಭದಲ್ಲಿ ಬ್ರಿಟನ್‌ನಲ್ಲಿ (UK Court) ನಡೆದ ಹಸ್ತಾಂತರ ಕಾನೂನು ಹೋರಾಟದಲ್ಲಿ ವಿಜಯ್ ಮಲ್ಯ ಸೋತ ನಂತರವೂ ಅಲ್ಲಿಯೇ ಹೇಗೆ ಉಳಿದುಕೊಂಡಿದ್ದಾರೆ ಎಂದು ನ್ಯಾಯಾಧೀಶರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ-PNB Scam: ನಿರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದ UK ನ್ಯಾಯಾಲಯ, ಆದರೆ...?
ಈ ಸಂದರ್ಭದಲ್ಲಿ ಭಾರತ ಸರ್ಕಾರವು ಹಸ್ತಾಂತರಿಸುವ ಎಲ್ಲಾ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಈಗ ಯುಕೆಯಲ್ಲಿ ರಹಸ್ಯ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಪರ ವಕೀಲ ನ್ಯಾಯಾಲಯಕ್ಕೆ ತಿಳಿಸಿದ್ದರು. ಭಾರತ ಸರ್ಕಾರವನ್ನು ಇದರಲ್ಲಿ ಪಕ್ಷವನ್ನಾಗಿ ಮಾಡಲಾಗಿಲ್ಲ. ಹಾಗಾಗಿ, ಇದು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದು ತಿಳಿದಿಲ್ಲ. ಕೇಂದ್ರದ ಪರ ವಕೀಲರು ಇಂದು ಕೂಡ ಅದನ್ನೇ ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ,
ಇದನ್ನೂ ಓದಿ-ದಯವಿಟ್ಟು ನಿಮ್ಮ ಹಣ ವಾಪಸ್ ಪಡೆಯಿರಿ; ಬ್ಯಾಂಕ್‌ಗಳಿಗೆ ಮಲ್ಯ ಮನವಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ