Vijay Mallya - ದೇಶದ ಬ್ಯಾಂಕುಗಳಿಗೆ ಪಂಗನಾಮ ಹಾಕಿ ಲಂಡನ್ ನಲ್ಲಿ ತಲೆ ಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯ (Vijay Mallya) ಅವರನ್ನು ಯುಕೆ ನ್ಯಾಯಾಲಯವೊಂದು ದಿವಾಳಿ (Bankrupt) ಎಂದು ಘೋಷಿಸಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ಪಾಲಿಗೆ ಇದು ಭಾರಿ ನೆಮ್ಮದಿಯ ಸುದ್ದಿ ಎಂದೇ ಹೇಳಲಾಗುತ್ತಿದ್ದು, ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆತರುವುದು ಇದರಿಂದ ಸುಲಭವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಮುಖ್ಯ ದಿವಾಳಿತನ ಮತ್ತು ಕಂಪನಿಗಳ ನ್ಯಾಯಾಲಯ (ICC) ನ್ಯಾಯಾಧೀಶ ಮೈಕೆಲ್ ಬ್ರಿಗ್ಸ್ ಅವರು ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ತಮ್ಮ ತೀರ್ಪಿನಲ್ಲಿ, "ನಾನು ಯುಕೆ ಕಾಲಮಾನದ ಪ್ರಕಾರ 15.42ಕ್ಕೆ ಡಾ. ಮಲ್ಯ ಅವರನ್ನು ದಿವಾಳಿಯೆಂದು ಘೋಷಿಸುತ್ತೇನೆ" ಎಂದು ಹೇಳಿದ್ದಾರೆ.


ಭಾರತೀಯ ಬ್ಯಾಂಕುಗಳ ಪರವಾಗಿ ಮಲ್ಯ ವಿರುದ್ಧ ದಿವಾಳಿತನಕ್ಕಾಗಿ ಕಾನೂನು ಸಂಸ್ಥೆ ಟಿಎಲ್‌ಟಿ ಎಲ್‌ಎಲ್‌ಪಿ (TLT LLP) ಮತ್ತು ನ್ಯಾಯವಾದಿ ಮಾರ್ಸಿಯಾ ಶೆಕರ್ಡೆಮಿಯನ್ (Marcia Shekerdemian) ನ್ಯಾಯಾಲಯದಲ್ಲಿ (UK Court) ತಮ್ಮ ವಾದ ಮಂಡಿಸಿದ್ದರು.


ಮಲ್ಯ ವಿನಂತಿಯನ್ನು ತಿರಸ್ಕರಿಸಿದ ನ್ಯಾಯಾಲಯ
65 ವರ್ಷದ ಉದ್ಯಮಿ ವಿಜಯ್ ಮಲ್ಯ ಪ್ರಸ್ತುತ ಯುಕೆ ನಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ವಿರುದ್ಧ ಗೌಪ್ಯ ಕಾನೂನು ಪ್ರಕರಣವೂ (Secret Case) ನಡೆಯುತ್ತಿದೆ. ಈ ವಿಷಯ ಮುಂದುವರಿಯುವವರೆಗೂ ತನ್ನ ಆದೇಶವನ್ನು ಮುಂದೂಡಬೇಕೆಂದು ಮಲ್ಯ ಅವರ ವಕೀಲ ಫಿಲಿಪ್ ಮಾರ್ಷಲ್ (Philip Marshall) ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. 


ಇದನ್ನೂ ಓದಿ- ಫ್ರಾನ್ಸ್‌ನಲ್ಲಿ 1.6 ಮಿಲಿಯನ್ ಯೂರೋ ಮೌಲ್ಯದ ವಿಜಯ್ ಮಲ್ಯ ಆಸ್ತಿ ಇಡಿ ವಶಕ್ಕೆ


ಆದರೆ ಅವರ ಈ ವಿನಂತಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ ಮತ್ತು ತಮ್ಮ ತೀರ್ಪಿನಲ್ಲಿ, ಅರ್ಜಿದಾರರಿಗೆ ಅವರು ನೀಡಿದ ಸಾಲವನ್ನು ಸಮಂಜಸವಾದ ಮಿತಿಯೊಳಗೆ ಸಂಪೂರ್ಣವಾಗಿ ಮರುಪಾವತಿಸಲಾಗುವುದು ಎಂದು ತೋರಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ಹೇಳಿದ್ದಾರೆ. ಇದಲ್ಲದೆ ವಿಜಯ್ ಮಲ್ಯ (Vijay Mallya) ಅವರನ್ನು ದಿವಾಳಿ ಎಂದು ಘೋಷಿಸುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಬೇಡಿಕೆಯನ್ನೂ ನ್ಯಾಯಾಲಯ ತಿರಸ್ಕರಿಸಿದೆ ಅಂದರೆ ನ್ಯಾಯಾಲಯದ ಈ ಆದೇಶದ ವಿರುದ್ಧ ಮಲ್ಯ ಅವರಿಗೆ ಮತ್ತಷ್ಟು ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ.


ಇದನ್ನೂ ಓದಿ- ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟಿನಲ್ಲಿ ಭಾರೀ ಮುಖಭಂಗ, UBHL ಮೇಲ್ಮನವಿ ವಜಾ


ಅರ್ಜಿದಾರರ ಪಟ್ಟಿಯಲ್ಲಿ ಈ ಬ್ಯಾಂಕ್ ಗಳಿವೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೇತೃತ್ವದಲ್ಲಿ ಒಟ್ಟು 13 ಬ್ಯಾಂಕುಗಳು ಈ ಅರ್ಜಿದಾರರ ಪಟ್ಟಿಯಲ್ಲಿದ್ದು, ಈ ಪಟ್ಟಿಯಲ್ಲಿ ಬ್ಯಾಂಕ್ ಆಫ್ ಬಡೋದಾ, ಕಾರ್ಪೋರೇಶನ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಲಿಮಿಟೆಡ್, IDBI ಬ್ಯಾಂಕ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಯುಕೋ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಜೆಎಂ ಫೈನಾನ್ಸಿಯಲ್ ಅಸೆಟ್ ರೀಕನ್ಸ್ಟ್ರಕ್ಷನ್ ಕಂಪನಿ ಪ್ರೈವೇಟ್ ಲಿಮಿಟೆಡ್ ಇತ್ಯಾದಿಗಳು ಶಾಮೀಲಾಗಿವೆ.


ಇದನ್ನೂ ಓದಿ-ವಿಜಯ್ ಮಲ್ಯಗೆ ಆಶ್ರಯ ನೀಡುವುದನ್ನು ಪರಿಗಣಿಸಬೇಡಿ: ಬ್ರಿಟನ್‌ಗೆ ಭಾರತದ ಮನವಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ