ಗಂಗಾವತಿ ನಗರಸಭೆ ವ್ಯಾಪ್ತಿಗೆ ಹಳ್ಳಿಗಳನ್ನು ಸೇರಿಸಲು ಮುಂದಾದ ಜಿಲ್ಲಾಡಳಿತ, ಗ್ರಾಮಸ್ಥರ ಆಕ್ರೋಶ
ಗಂಗಾವತಿಯನ್ನು ಎ ಗ್ರೇಡ್ ನಗರಸಭೆ ಮಾಡುವ ನಿಟ್ಟಿನಲ್ಲಿ ಈಗ ಹತ್ತಾರು ಹಳ್ಳಿಗಳನ್ನು ನಗರ ಸಭೆಗೆ ಸೇರಿಸಲು ಮುಂದಾಗಿದೆ.ಈಗ ಅವೈಜ್ಞಾನಿಕವಾಗಿ ಗ್ರಾಮ ಪಂಚಾಯತ್ ಗಳನ್ನು ಸೇರಿಸುವುದಕ್ಕೆಅಲ್ಲಿನ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ: ಗಂಗಾವತಿಯನ್ನು ಎ ಗ್ರೇಡ್ ನಗರಸಭೆ ಮಾಡುವ ನಿಟ್ಟಿನಲ್ಲಿ ಈಗ ಹತ್ತಾರು ಹಳ್ಳಿಗಳನ್ನು ನಗರ ಸಭೆಗೆ ಸೇರಿಸಲು ಮುಂದಾಗಿದೆ.ಈಗ ಅವೈಜ್ಞಾನಿಕವಾಗಿ ಗ್ರಾಮ ಪಂಚಾಯತ್ ಗಳನ್ನು ಸೇರಿಸುವುದಕ್ಕೆಅಲ್ಲಿನ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆದಿತ್ಯ ಎಲ್-1 ಯಶಸ್ವಿ ಉಡಾವಣೆ: ಬಾಹ್ಯಾಕಾಶದಲ್ಲಿ ಇಸ್ರೋ ಮತ್ತೊಂದು ಮೈಲಿಗಲ್ಲು!
ಗಂಗಾವತಿ ತಾಲೂಕಿನ ವಡ್ಡರಹಟ್ಟಿ, ಸಂಗಾಪೂರ, ಮರಳಿ, ಜಂಗಮರಕಲ್ಗುಡಿ, ಚಿಕ್ಕಜಂತಗಲ್ ಗ್ರಾಮ ಪಂಚಾಯತಿ ಸೇರ್ಪಡೆಗೆ ಸಿದ್ದತೆ ನಡೆಸುವ ಭಾಗವಾಗಿ ಈಗ ಜಿಲ್ಲಾಡಳಿತ ಮಾಹಿತಿ ಕಲೆ ಹಾಕಲು ಪತ್ರ ಬರೆದಿದೆ.ಈ ಹಿನ್ನೆಲೆಯಲ್ಲಿ ಪಿಡಿಓಗಳಿಂದ ದಾಖಲೆ ಪಡೆಯಲು ನಗರಸಭೆ ಸಿದ್ದತೆ ನಡೆಸಿದೆ.ಸಿದ್ದತೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಈಗ ಗ್ರಾಮಸ್ಥರು ತಮಗೆ ತೆರಿಗೆ ಕಟ್ಟುವುದು ಜಾಸ್ತಿ ಆಗುತ್ತದೆ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ಮಾದಗಮಾಸೂರು ಕೆರೆಗೆ ಬಾಗಿನ ಅರ್ಪಿಸಿದ ಶಾಸಕ!
ಅಷ್ಟೇ ಅಲ್ಲದೆ ಶಿಕ್ಷಣ, ಉದ್ಯೋಗ, ಗ್ರಾಮೀಣ ಕೋಟಾ ಸಹ ಕೈ ತಪ್ಪುವ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ.ನರೇಗಾದ ಕೆಲಸಗಳಿಗೂ ಬಡ ಜನ್ರಿಗೆ ಸಿಗಲ್ಲ ನಮಗೆ ನಗರಸಭೆ ಬೇಡ, ಗ್ರಾಮಪಂಚಾಯತ್ ಸಾಕು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈಗ ಜನರು ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ ಜಿಲ್ಲಾಡಳಿತಕ್ಕೆ ಈಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.