ವಿಜಯಪುರ : ಮಹಾಗಣಪತಿ ಪ್ರತಿಷ್ಠಾಪನೆ ಸ್ಥಳದ ಭೂಮಿಪೂಜಾ ಕಾರ್ಯಕ್ರಮದಲ್ಲಿ ಭಾರತಾಂಬೆಯ ಪೋಟೋದೊಂದಿಗೆ ವೀರ ಸಾವರ್ಕರ್ ಹಾಗೂ ಬಾಲ ಗಂಧಾಧರ ತಿಲಕ ಪೋಟೋ ಇಟ್ಟು ಪೂಜೆ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಇತ್ತೀಚಿಗೆ ಗಣೇಶೋತ್ಸವದಲಿ ವೀರ ಸಾವರ್ಕರ್ ಫೋಟೋ ಬಗ್ಗೆ ಭಾರಿ ಸದ್ದು ಮಾಡುತ್ತಿದೆ. ಇದರ ಬೆನ್ನೆಲೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಮಹಾಗಣಪತಿ ಪ್ರತಿಷ್ಠಾಪನೆ ಪೂರ್ವದ ಭೂಮಿ ಪೂಜಾ ಕಾರ್ಯಕ್ರಮ ಮಾಡಿದ್ದಾರೆ.


ಇದನ್ನೂ ಓದಿ : ಚಾಮರಾಜನಗರದ ಹಲವೆಡೆ ಮಳೆ ಅವಾಂತರ: ಕೋಡಿ ಬಿದ್ದಿವೆ ಹಲವು ಕೆರೆ


ತಾಳಿಕೋಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಹಿಂಬಾಗದಲ್ಲಿ ನಡೆದ ಮಹಾಗಣಪತಿ ಪ್ರತಿಷ್ಠಾಪನೆ ಸ್ಥಳದ ಭೂಮಿಪೂಜಾ ಕಾರ್ಯಕ್ರಮ ನಡೆಯಿತು. ಈ ಭೂಮಿ ಪೂಜೆ 9ನೇ ವರ್ಷದ ಹಿಂದೂ ಮಹಾಗಣಪತಿ ಮಹಾಮಂಡಳದ ಗೌರವ ಕಾರ್ಯದರ್ಶಿ ಹಾಗೂ ಪ್ರಧಾನ ಅರ್ಚಕರಾದ ಸಂತೋಷ ಭಟ್ಟ ಜೋಷಿ ನೇತೃತ್ವದಲ್ಲಿ ನಡೆಯಿತು.


ಈಗಾಗಲೇ ಗಣೇಶ ಹಬ್ಬದಾಚರಣೆ ಪೋಸ್ಟರ್ ನಲ್ಲಿ (ಭಿತ್ತಿ ಪತ್ರ) ತಿಲಕರ ಹಾಗೂ ಸಾವರ್ಕರ್ ಪೋಟೋ ಹಾಕಲಾಗಿತ್ತು. ಇದೀಗಾ ಆಯೋಜಕರು ಮಹಾಗಣಪತಿ ಪ್ರತಿಷ್ಠಾಪನೆ ಸ್ಥಳದ ಭೂಮಿಪೂಜಾ ಕಾರ್ಯಕ್ರಮದಲ್ಲೂ ತಿಲಕ್ ಹಾಗೂ ಸಾವರ್ಕರ್ ಪೋಟೋ ಹಾಕಿದ್ದಾರೆ.  ಈ ಮೂಲಕ ಹಿಂದೂ ಮಹಾಗಣಪತಿ ಮಹಾಮಂಡಳ ಗಮನ ಸೆಳೆದಿದೆ.


ಇದನ್ನೂ ಓದಿ : Today Vegetable Price: ಹೀಗಿದೆ ನೋಡಿ ರಾಜ್ಯ ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ಬೆಲೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.