ಮೈಸೂರಿನಲ್ಲೇ ವಿಷ್ಟು ಸ್ಮಾರಕ ನಿರ್ಮಾಣ: ಭಾರತಿ ವಿಷ್ಣುವರ್ಧನ್
ಕನ್ನಡ ಚಿತ್ರರಂಗದ ಮೇರು ನಟ ಸಾಹಸಸಿಂಹ ವಿಷ್ಣುವರ್ಧನ್ ಅವರು ನಿಧನರಾಗಿ ಇಂದಿಗೆ 8 ವರ್ಷ. ಈ ಹಿನ್ನೆಲೆಯಲ್ಲಿ ಅವರ 8 ನೇ ವರ್ಷದ ಪುಣ್ಯ ತಿಥಿಯನ್ನು ವಿಷ್ಣು ಅಭಿಮಾನಿ ಬಳಗವು ರಾಜ್ಯಾದ್ಯಂತ ನೆರವೇರಿಸಿದರು.
ಬೆಂಗಳೂರು : ಕನ್ನಡ ಚಿತ್ರರಂಗದ ಮೇರು ನಟ ಸಾಹಸಸಿಂಹ ವಿಷ್ಣುವರ್ಧನ್ ಅವರು ನಿಧನರಾಗಿ ಇಂದಿಗೆ 8 ವರ್ಷ. ಈ ಹಿನ್ನೆಲೆಯಲ್ಲಿ ಅವರ 8 ನೇ ವರ್ಷದ ಪುಣ್ಯ ತಿಥಿಯನ್ನು ವಿಷ್ಣು ಅಭಿಮಾನಿ ಬಳಗವು ರಾಜ್ಯಾದ್ಯಂತ ನೆರವೇರಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಅವರು, ವಿಷ್ಣು ಸ್ಮಾರಕ ಮೈಸೂರಿನಲ್ಲೇ ನಿರ್ಮಾಣವಾಗಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸ್ಮಾರಕಕ್ಕೆ ಅಡ್ಡ ನಿಲ್ಲುವವರೇ ಹೆಚ್ಚು. ಇಂತಹ ವಿಚಾರಗಳಿಗೆಲ್ಲಾ ಅಭಿಮಾನಿಗಳು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.
ವಿಷ್ಣು ವರ್ಧನ್ ಸ್ಮಾರಕವನ್ನು ಎಲ್ಲರೂ ಸೇರಿ ನಿರ್ಮಿಸೋಣ. ಜನವರಿ 15ರ ಬಳಿಕ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸೋಣ ಎಂದು ಅವರು ಹೇಳಿದರು.
ಇನ್ನೂ, ಇಲ್ಲಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿರುವ ವಿಷ್ಣುವರ್ಧನ್ ಅವರ ಸಮಾಧಿಗೆ, ಅವರ ಪುನಿ ಸ್ಮರಣೆ ಹಿನ್ನೆಲೆಯಲ್ಲಿ ಸಾಕಷ್ಟು ಅಭಿಮಾನಿಗಳು ನಮನ ಸಲ್ಲಿಸುತ್ತಿದ್ದಾರೆ. ಇನ್ನುಳಿದಂತೆ ವಿಷ್ಟು ನೆನಪಿನಲ್ಲಿ ರಾಜ್ಯಾದ್ಯಂತ ಅನ್ನಸಂತರ್ಪಣೆ, ಹಣ್ಣುಹಂಪಲು ವಿತರಣೆ, ಆರೋಗ್ಯ ತಪಾಸಣೆ ಮೊದಲಾದ ಸಮಾಜ ಸೇವಾ ಕಾರ್ಯಗಳು ನಡೆಯುತ್ತಿವೆ.