ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರ ಚೊಚ್ಚಲ ಬಜೆಟ್ ಘೋಷಣೆಯನ್ನು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ವಾಗತಿಸಿದ್ದಾರೆ.ಗೋವುಗಳ ರಕ್ಷಣೆಗೆ ಇದ್ದ ಗೋಶಾಲೆಗಳನ್ನು ಹೆಚ್ಚಿಸುವ ಸರಕಾರದ ನಡೆ ಬಗ್ಗೆ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕರ್ನಾಟಕದ ಬಜೆಟ್ ಇತಿಹಾಸ: ನೀವು ತಿಳಿದುಕೊಳ್ಳಬೇಕಾದ ಮಹತ್ವದ ಸಂಗತಿಗಳು


ಉಡುಪಿಯಲ್ಲಿ ಮಾತನಾಡಿರುವ ಸ್ವಾಮೀಜಿ ಬಜೆಟ್ (Karnataka Budget 2022) ನಲ್ಲಿ ಇರುವ ಗೋಶಾಲೆಗೆ ಅನುದಾನ ಹೆಚ್ಚಿಸಿರುವುದು ನಮಗೆ ಬಹಳ ಸಂತೋಷವಾಗಿದೆ.ಪಶುವೈದ್ಯರ ಹೆಚ್ಚಳ ಮಾಡಲಾಗಿದೆ ಗೋವುಗಳ ಆರೋಗ್ಯ ರಕ್ಷಣೆಗೆ ಸರಕಾರ ಒತ್ತು ಕೊಟ್ಟಿದೆ.ದೇವಾಲಯಗಳ ಅರ್ಚಕರ ವೇತನ ಹೆಚ್ಚು ಮಾಡಲಾಗಿದೆ,ಜೊತೆಗೆ ಗೌರವ ಅಧ್ಯಾಪಕರುಗಳ ಸಂಭಾವನೆ ಹೆಚ್ಚಿಸಿದ್ದಾರೆ"ಎಂದು ಅವರು ಶ್ಲಾಘಿಸಿದರು.


ಇದನ್ನೂ ಓದಿ: ಸಿಎಂ ಬೊಮ್ಮಾಯಿ ಬಜೆಟ್ ಸ್ವಾಗತಿಸಿದ ಡಿ.ಕೆ.ಶಿವಕುಮಾರ್


ಇದೇ ವೇಳೆ ಅವರು ಕ್ಯಾನ್ಸರ್ ಆಸ್ಪತ್ರೆಯ ಸ್ಥಾಪನೆಯ ನಿರ್ಧಾರ, ದೇವಾಲಯಗಳ ಸ್ವಾಯತ್ತ ವಿಚಾರ ಸಂತಸ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.