ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ತಮಿಳುನಾಡಿನ ವಿ.ಕೆ. ಶಶಿಕಲಾಗೆ ಕನ್ನಡ ಕಲಿಯುವ ಆಸೆ ಉಂಟಾಗಿದ್ದು, ಜೈಲಿನಲ್ಲಿದ್ದುಕೊಂಡೇ ಶಶಿಕಲಾ ಕನ್ನಡ ಸ್ನಾತಕೋತ್ತರ ಪದವಿ ಪಡೆಯುವ ಬಯಕೆಯನ್ನು ಜೈಲು ಸಿಬ್ಬಂದಿ ಬಳಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಜೈಲಿನ ಅಧಿಕಾರಿಗಳು ಬೆಂಗಳೂರು ವಿವಿ ದೂರ ಶಿಕ್ಷಣ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಶಶಿಕಲಾ ಅವರು ಕೋರ್ಸ್‌ ಮಾಡಲು ಆಸಕ್ತಿ ತೋರಿದಲ್ಲಿ ನಾವೇ ಜೈಲಿಗೆ ಭೇಟಿ ನೀಡಿ ಪ್ರವೇಶ ಪಡೆಯುತ್ತೇವೆ. ಕೋರ್ಸ್‌ನ ಬಗ್ಗೆ ವಿವರಿಸುತ್ತೇವೆ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.


ದೂರ ಶಿಕ್ಷಣ ಸರ್ಟಿಫಿಕೇಟ್‌ ಕೋರ್ಸ್‌ಗಳಿಗೆ ನೋಂದಣಿ ಮಾಡಲು ಜೈಲಿನಲ್ಲಿರುವ ಕೈದಿಗಳನ್ನು ಉತ್ತೇಜಿಸಲು ನಿರ್ದೇಶನಾಲಯದ ಅಧಿಕಾರಿಗಳು ಜೈಲಿಗೆ ತೆರಳಿದ್ದಾಗ ಈ ವಿಷಯ ತಿಳಿದು ಶಶಿಕಲಾ ಕೂಡ ಕೋರ್ಸ್‌ ಮಾಡಲು ಆಸಕ್ತಿ ವಹಿಸಿದರು ಎಂದು ತಿಳಿದು ಬಂದಿದೆ. 


ಕೇಂದ್ರ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 200ಕ್ಕೂ ಹೆಚ್ಚು ಕೈದಿಗಳು 2018-19ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಪದವಿ ಸೇರಿದಂತೆ ನಾನಾ ರೀತಿಯ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಮಾಡಲು ಆಸಕ್ತಿ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.